More

    ಸಾಕಷ್ಟು ಟ್ರೋಲ್​ ಎದುರಿಸಿ ಇದೀಗ ಶೂಟಿಂಗ್​ಗೆ ಸಜ್ಜಾಗುತ್ತಿದ್ದಾರೆ ಸೋನಾಕ್ಷಿ ಸಿನ್ಹಾ

    ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಬಳಿಕ ಬಾಲಿವುಡ್​ನಲ್ಲಿ ನೆಪೋಟಿಸಂ ಬಿರುಗಾಳಿ ಅಲೆ ಜೋರಾಗಿತ್ತು. ಸ್ಟಾರ್ ಮಕ್ಕಳಿಗೆ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡಲಾಗುತ್ತಿತ್ತು. ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳಲಾಗುತ್ತಿತ್ತು. ಅದೇ ರೀತಿ ಆ ಟ್ರೋಲ್​ಗಳಿಗೆ ನಟಿ ಸೋನಾಕ್ಷಿ ಸಿನ್ಹಾ ಸಹ ಗುರಿಯಾಗಿದ್ದರು. ಇದೀಗ ಅದೆಲ್ಲವನ್ನು ಎದುರಿಸಿ ಮತ್ತೆ ಸಹಜ ಸಿನಿಮಾ ಜೀವನಕ್ಕೆ ಆಗಮಿಸುತ್ತಿದ್ದಾರೆ.

    ಇದನ್ನೂ ಓದಿ: ಐಎಎಸ್ ಅಧಿಕಾರಿ ಶ್ರದ್ಧಾ; ಮೋಹನ್​ ಲಾಲ್​ ಚಿತ್ರಕ್ಕೆ ನಾಯಕಿ…

    ಹೌದು, ಸುದೀರ್ಘ ಎಂಟು ತಿಂಗಳು ಸಿನಿಮಾದಿಂದ ದೂರವೇ ಉಳಿದಿದ್ದ ನಟಿ ಸೋನಾಕ್ಷಿ, ಇದೀಗ ವೆಬ್​ಸಿರೀಸ್​ವೊಂದರ ಚಿತ್ರೀಕರಣಕ್ಕೆ ಹಾಜರಿ ಹಾಕಲಿದ್ದಾರೆ. ರೀಮಾ ಕಾಗ್ತಿ ನಿರ್ದೇಶನದಲ್ಲಿ ಸಿದ್ಧವಾಗಲಿರುವ ಫಾಲನ್​ ವೆಬ್​ಸಿರೀಸ್​ನಲ್ಲಿ ಸೋನಾಕ್ಷಿ ನಟಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತಾದರೂ, ಶೂಟಿಂಗ್​ ಯಾವಾಗಿಂದ ಎಂಬ ಮಾಹಿತಿ ಲಭ್ಯವಿರಲಿಲ್ಲ. ಇದೀಗ ಡಿಸೆಂಬರ್​ನಲ್ಲಿ ಸರಣಿಯ ಚಿತ್ರೀಕರಣ ಆಗಲಿದೆ.

    ಇದನ್ನೂ ಓದಿ: ಎಲೆಕ್ಟ್ರಿಕ್​ ಬೈಕ್​ ಸ್ಟಾರ್ಟ್​ಅಪ್​ ಶುರು ಮಾಡಿದ ನಟ ವಿಜಯ್​ ದೇವರಕೊಂಡ

    ಗಲ್ಲಿ ಬಾಯ್​ ಖ್ಯಾತಿಯ ವಿಜಯ ವರ್ಮಾ, ಗುಲ್ಶನ್​ ದೇವಯ್ಯ, ಸೋಹಮ್ ಶಾ ಸೇರಿ ಹಲವು ಕಲಾವಿದರು ಈ ವೆಬ್​ಸಿರೀಸ್​ನಲ್ಲಿ ಇರಲಿದ್ದಾರೆ. 35 ಕಲಾವಿದರನ್ನು ರಾಜಸ್ತಾನಕ್ಕೆ ಕರೆದೊಯ್ದು ಒಂದೇ ಶೆಡ್ಯೂಲ್​ನಲ್ಲಿ ಚಿತ್ರೀಕರಣ ಮುಗಿಸಿಕೊಳ್ಳುವುದು ನಿರ್ದೇಶಕಿ ರೀಮಾ ಪ್ಲಾನ್​. ಇನ್ನು ದಬಾಂಗ್​ 3 ಸಿನಿಮಾದ ಬಳಿಕ ಸೋನಾಕ್ಷಿ ಬೇರಾವ ಸಿನಿಮಾ ಬಿಡುಗಡೆ ಆಗಿಲ್ಲ. ಇನ್ನೇನು ಅಜಯ್​ ದೇವಗನ್​ ಜತೆಗ್ ಭುಜ್ ಚಿತ್ರ ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. (ಏಜೆನ್ಸೀಸ್​)

    ಶಾರುಖ್​ ಜನ್ಮದಿನಕ್ಕೆ ವಿಶ್ವದಾದ್ಯಂತ ಪಾರ್ಟಿ ಆಯೋಜನೆ ಮಾಡಿದ ಫ್ಯಾನ್​ ಕ್ಲಬ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts