More

    ಬೇಡಪ್ಪ ಬೇಡ ಈ ಜರ್ಸಿ… ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ ಆರ್​ಸಿಬಿ ತಂಡದ ಹೊಸ ಜರ್ಸಿ!

    ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಪ್ರಸಕ್ತ ಐಪಿಎಲ್​ ಟೂರ್ನಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೆಲವು ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದಿಳಿದರು. ವಿರಾಟ್​ ಕೊಹ್ಲಿ ಇತ್ತೀಚೆಗಷ್ಟೇ ತಂಡವನ್ನು ಸೇರಿಕೊಂಡಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಅವರ ಹೆರಿಗೆ ಮತ್ತು ಮಗನ ಜನನದ ಕಾರಣ ಲಂಡನ್‌ನಲ್ಲಿ ಉಳಿದುಕೊಂಡಿದ್ದ ಕೊಹ್ಲಿ ಕಳೆದ ಸೋಮವಾರ ಆರ್‌ಸಿಬಿ ಶಿಬಿರವನ್ನು ಸೇರಿಕೊಂಡರು ಮತ್ತು ತಾಲೀಮು ನಡೆಸಿದರು.

    ಪ್ರತಿ ವರ್ಷದಂತೆ ಈ ಬಾರಿಯೂ ಅನ್‌ಬಾಕ್ಸಿಂಗ್ ಕಾರ್ಯಕ್ರಮವನ್ನು ಆರ್‌ಸಿಬಿ ಆಯೋಜಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸೀಸನ್‌ಗಾಗಿ ಆರ್​ಸಿಬಿ ಹೊಸ ಜರ್ಸಿಯನ್ನು ಅನಾವರಣಗೊಳಿಸಲಿದೆ. ಅದಕ್ಕೂ ಮುನ್ನವೇ ಹೊಸ ಜರ್ಸಿಯ ಫೋಟೋ ಸೋರಿಕೆಯಾಗಿದ್ದು, ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ.

    ಆರ್‌ಸಿಬಿ ಅನ್‌ಬಾಕ್ಸಿಂಗ್ ಕಾರ್ಯಕ್ರಮಕ್ಕಾಗಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದಾರೆ. ಕ್ರೀಡಾಂಗಣ ಸುತ್ತ ಆರ್‌ಸಿಬಿ.. ಆರ್‌ಸಿಬಿ ಘೋಷಣೆಗಳು ಮೊಳಗುತ್ತಿವೆ. ಅದರಲ್ಲೂ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಅವರು ಬಸ್​ನಿಂದ ಕೆಳಗಿಳಿದು ಬಂದಾಗ ಕೊಹ್ಲಿ… ಕೊಹ್ಲಿ ಎಂಬ ಘೋಷಣೆ ಮೊಳಗಿತು. ಈ ವೇಳೆ ಅಭಿಮಾನಿಗಳತ್ತ ನೋಡಿ ವಿರಾಟ್​ ಕೊಹ್ಲಿ ಕೂಡ ಮುಗುಳ್ನಕ್ಕರು. ಇದೆಲ್ಲರ ನಡುವೆ ಬೆಂಗಳೂರು ಹೊರ ತರಲಿರುವ ಹೊಸ ಜರ್ಸಿ ಟ್ರೋಲ್​ ವಸ್ತು ಆಗಿಬಿಟ್ಟಿದೆ.

    ಆರ್‌ಸಿಬಿಯ ಹೊಸ ಜರ್ಸಿ ಧರಿಸಿರುವ ಕೊಹ್ಲಿ ಹಾಗೂ ಆರ್​ಸಿಬಿಯ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅವರ ಎರಡು ವಿಭಿನ್ನ ಫೋಟೋಗಳು ಹೊರಬಿದ್ದಿವೆ. ಆದರೆ, ಜರ್ಸಿ ಫೋಟೋಗಳನ್ನು ತಂಡ ಅಧಿಕೃತವಾಗಿ ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ ಸಿರಾಜ್ ಹೊಸ ಜರ್ಸಿಯಲ್ಲಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರೊಂದಿಗೆ ವಿರಾಟ್ ಮತ್ತು ಡುಪ್ಲೆಸಿಸ್ ಹೊಸ ಜರ್ಸಿ ಧರಿಸಿ ಕುಳಿತು ಮೋಜು ಮಾಡುತ್ತಿರುವ ವಿಡಿಯೋ ಕೂಡ ಸದ್ದು ಮಾಡುತ್ತಿದೆ.

    ಕೊಹ್ಲಿ, ಸಿರಾಜ್ ಮತ್ತು ಡುಪ್ಲೆಸಿಸ್ ಅವರ ಜರ್ಸಿ ಫೋಟೋಗಳು ಸಾಕಷ್ಟು ಟ್ರೋಲ್ ಆಗುತ್ತಿವೆ. ಹೊಸದಕ್ಕಿಂತ ಹಳೆಯ ಜರ್ಸಿ ತುಂಬಾ ಚೆನ್ನಾಗಿದೆ, ಅತ್ಯಾಧುನಿಕತೆಯ ಟಚ್ ಇರುವಂತಿದೆ ಎನ್ನುತ್ತಾರೆ ನೆಟಿಜನ್​ಗಳು. ಮುಂಬೈ ಇಂಡಿಯನ್ಸ್‌ನಿಂದ ನೀಲಿ ಬಣ್ಣವನ್ನು ನಕಲಿಸಿ ಈ ಜರ್ಸಿಯಲ್ಲಿ ಹಾಕಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಹಳೆಯ ಜರ್ಸಿಯ ಕೆಂಪು ಮತ್ತು ಕಪ್ಪು ಕಾಂಬಿನೇಷನ್ ಚೆನ್ನಾಗಿರುತ್ತಿತ್ತು. ಈ ಬದಲಾವಣೆ ಬೇಕಿರಲಿಲ್ಲ ಎಂದಿದ್ದಾರೆ.

    2016-17ರ ಋತುವಿನಲ್ಲಿ ಸಿಎಸ್​ಕೆ ಆಟಗಾರರು ಧರಿಸಿದ್ದ ಜರ್ಸಿಯಿಂದ ನೀವು ಸ್ಫೂರ್ತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಸೈರನ್​ ಲೈಟ್​ನಂತಿದೆ ಜರ್ಸಿ, ಕೆಂಪು ಮತ್ತು ನೀಲಿ ಕಾಂಬೋ ಚೆನ್ನಾಗಿಲ್ಲ, ದಯವಿಟ್ಟು ಜೆರ್ಸಿಯನ್ನು ಬದಲಿಸಿ, ಹಳೆಯ ಜರ್ಸಿಯನ್ನೇ ಧರಿಸಿ ಎಂದು RCB ಸೋಶಿಯಲ್​ ಮೀಡಿಯಾ ಹ್ಯಾಂಡಲ್‌ಗೆ ಅಭಿಮಾನಿಗಳು ಸಾಲು ಸಾಲು ಮೆಸೇಜ್​ಗಳನ್ನು ರವಾನಿಸುತ್ತಿದ್ದಾರೆ. (ಏಜೆನ್ಸೀಸ್​)

    ಐಪಿಎಲ್​ ತಂಡಗಳಿಗೆ ಈ ಬೀಸ್ಟ್​ ಅಂದ್ರೆ ಭಯ! RCBಯ ಈ ಬಿರುಗಾಳಿಯನ್ನು ತಡೆಯುವವರು ಯಾರು?

    ಮುಂಬೈ ಇಂಡಿಯನ್ಸ್​ ನಾಯಕತ್ವದಿಂದ ರೋಹಿತ್​ ಶರ್ಮ ಕೆಳಗಿಳಿಯಲು ಸಚಿನ್​ ಕಾರಣ! ಇಲ್ಲಿದೆ ನೋಡಿ ಸಾಕ್ಷಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts