ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಬಾಲ್ಯದಲ್ಲೊಮ್ಮೆ, ಇನ್ನು ಮುಂದೆ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತುಬಿಟ್ಟಿದ್ದರಂತೆ. ಕೊನೆಗೆ ಸಾಕಷ್ಟು ಅರ್ಥ ಮಾಡಿಸಿದ ಮೇಲೆ, ಶಾಲೆಗೆ ಹೋಗುವುದಕ್ಕೆ ಒಪ್ಪಿಕೊಂಡರಂತೆ. ಅಷ್ಟಕ್ಕೂ ಅವರು ಹಠ ಹಿಡಿದಿದ್ದು ಯಾಕೆ. ಅದಕ್ಕೆ ಕಾರಣವೂ ಇದೆ ಮತ್ತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರೇ ಈ ಫ್ಲಾಶ್ಬ್ಯಾಕ್ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಬಿಟ್ಟು ಗೋವಾ ಸೇರಿದರಂತೆ ರಾಮ್ಗೋಪಾಲ್ ವರ್ಮಾ …
‘ಬಾಲ್ಯದಲ್ಲೊಮ್ಮೆ ನಾನು ಇನ್ನು ಮುಂದೆ ಶಾಲೆಗೆ ಹೋಗುವುದಿಲ್ಲ ಎಂದು ಅಮ್ಮನ ಹತ್ತಿರ ಹೇಳಿದ್ದೆ. ಅದಕ್ಕೆ ಕಾರಣ ನಮ್ಮಪ್ಪ ಶತ್ರುಘ್ನ ಸಿನ್ಹಾ, ಕೇಂದ್ರ ಸಚಿವರಾದ ಮೇಲೆ ಅವರಿಗೆ ಸೆಕ್ಯುರಿಟಿ ಕೊಡುವುದರ ಜತೆಗೆ, ನಮಗೂ ಸೆಕ್ಯುರಿಟಿ ಕೊಡುತ್ತಿದ್ದರು. ಇದರಿಂದ ಬೇಸತ್ತು, ಶಾಲೆಗೆ ಹೋಗುವುದೇ ಬೇಡ ಎಂದನಿಸಿತ್ತು’ ಎಂದು ಸೋನಾಕ್ಷಿ ಹೇಳಿಕೊಂಡಿದ್ದಾರೆ.
‘ಆಗ ನಾನು ಬಹುಶಃ ಆರನೇ ಕ್ಲಾಸಿನಲ್ಲಿದ್ದೆ ಅಂತನಿಸುತ್ತದೆ. ನನ್ನ ತಂದೆ ಕೇಂದ್ರದಲ್ಲಿ ಸಚಿವರಾಗಿದ್ದರು. ಅವರಿಗಷ್ಟೇ ಅಲ್ಲ, ನಮಗೂ ಸೆಕ್ಯುರಿಟಿ ಕೊಡುವುದಕ್ಕೆ ಪ್ರಾರಂಭವಾಯಿತು. ನಾನು ಶಾಲೆಗೆ ಹೋಗಬೇಕೆಂದರೂ, ಸೆಕ್ಯುರಿಟಿಯವರು ಗನ್ ಹಿಡಿದು ಹಿಂಬಾಲಿಸುತ್ತಿದ್ದರು. ಎಲ್ಲ ಮಕ್ಕಳು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ನನಗೂ ಬಹಳ ವಿಚಿತ್ರವೆನಿಸುತ್ತಿತ್ತು. ಕೊನೆಗೊಂದು ದಿನ ಅಮ್ಮನಿಗೆ, ಇವೆಲ್ಲ ನಿಲ್ಲದಿದ್ದರೆ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹೇಳಿದೆ. ಅದಾದ ಮೇಲೆ ಸೆಕ್ಯುರಿಟಿಯವರು ನನ್ನ ಹಿಂದೆ ಬರುವುದು ಬಿಟ್ಟರು. ನನ್ನ ಪ್ರಕಾರ, ಅದೇ ನನ್ನ ಮೊದಲ ಸ್ವಾತಂತ್ರ್ಯ’ ಎಂದು ಸೋನಾಕ್ಷಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರಜನಿಕಾಂತ್, ವಿಕ್ರಮ್, ವಿಜಯ್ಗೆ ನಾಯಕಿಯಾಗಿದ್ದ ಈ ಹುಡುಗಿ ಯಾರು ಗೊತ್ತಾ?
ಇನ್ನು, ಶಾಲೆ ಮುಗಿದ ಮೇಲೆ ತಮ್ಮ ಮನೆಗೆ ಸ್ವಲ್ಪ ದೂರವಿರುವ ಕಾಲೇಜನ್ನು ಸೋನಾಕ್ಷಿ ಆಯ್ಕೆ ಮಾಡಿಕೊಂಡರಂತೆ. ‘ದೂರದ ಕಾಲೇಜು ಆಯ್ಕೆ ಮಾಡಿಕೊಳ್ಳಲು ಕಾರಣ, ರೈಲಿನಲ್ಲಿ ಪ್ರಯಾಣ ಮಾಡುವ ಅನುಭವ ನನಗೆ ಬೇಕಾಗಿತ್ತು. ಒಂಟಿಯಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಬಾಲ್ಯದಿಂದಲೂ ನನಗೆ ನನ್ನ ಕಾಲ ಮೇಲೆ ನಿಂತುಕೊಳ್ಳುವ ಮತ್ತು ಸ್ವತಂತ್ರವಾಗಿ ಬೆಳೆಯುವ ಆಸೆ ಇತ್ತು’ ಎಂದು ಸೋನಾಕ್ಷಿ ಹೇಳಿದ್ದಾರೆ.
ನಮ್ಮನ್ನೇ ಯಾಕೆ ಕೇಳ್ತೀರಿ?; ಏನೂ ಮಾಡ್ತಿಲ್ಲ ಎಂದವರಿಗೆ ತಮನ್ನಾ ಪ್ರಶ್ನೆ..