More

    ಹರೇಕಳದಲ್ಲಿ ಘನತ್ಯಾಜ್ಯ ಘಟಕ: ಉಳ್ಳಾಲ ನಗರಸಭೆ ಆಯವ್ಯಯ ಮಂಡನೆ

    ವಿಜಯವಾಣಿ ಸುದ್ದಿಜಾಲ ಉಳ್ಳಾಲ

    ಉಳ್ಳಾಲ ನಗರಸಭೆಯ 2024-25ನೇ ಸಾಲಿನ ಆಯವ್ಯಯ ‘ಸ್ವಚ್ಫ ಸುಂದರ ಉಳ್ಳಾಲದ ಪರಿಕಲ್ಪನೆ’ಯೊಂದಿಗೆ ಮಂಡಿಸಲಾಗಿದ್ದು, ಘನತ್ಯಾಜ್ಯ ನಿರ್ವಹಣೆಗಾಗಿ ಹರೇಕಳದಲ್ಲಿ ಘಟಕ ನಿರ್ಮಾಣದ ಪ್ರಸ್ತಾಪ ಇಡಲಾಗಿದೆ.

    ಮಂಗಳವಾರ ಮಂಡಿಸಲಾದ ಆಯುವ್ಯದಲ್ಲಿ ಹರೇಕಳ ಗ್ರಾಮದ ಎಲ್ಯಾರ್ ಪದವಿನಲ್ಲಿ ಯೆನೆಪೋಯ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಹರೇಕಳ ಗ್ರಾಮದ ಎಲ್ಯಾರ್ ಪದವು ಎಂಬಲ್ಲಿ ಸರ್ವೆ ನಂಬ್ರ 62ರಲ್ಲಿನ 4 ಎಕರೆ ಜಾಗವನ್ನು ಯಾವುದೇ ಶುಲ್ಕವಿಲ್ಲದೆ 30 ವರ್ಷಗಳ ಅವಧಿಗೆ ಲೀಸ್ ಪಡೆದು ಘನತ್ಯಾಜ್ಯ ವಿಲೇ ಘಟಕದ ನಿರ್ಮಾಣ ಪ್ರಸ್ತಾಪ ಇಡಲಾಗಿದೆ.

    ಸ್ವಚ್ಛ, ಸುಂದರ ಉಳ್ಳಾಲದ ಪರಿಕಲ್ಪನೆ ಸಾಕಾರ ನಿಟ್ಟಿನಲ್ಲಿ 1.51ಕೋಟಿ ರೂ. ವೆಚ್ಚದಲ್ಲಿ ಒಣತ್ಯಾಜ್ಯ ನಿರ್ವಹಣೆಗಾಗಿ ಮೆಟಿರಿಯಲ್ ಫೆಸಿಲಿಟಿ ಸ್ಥಾಪನೆಯೊಂದಿಗೆ ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 53.12ಲಕ್ಷದಲ್ಲಿ 16 ಸಾರ್ವಜನಿಕ ಶೌಚಗೃಹ, 4 ಮೂತ್ರಾಲಯ, 6 ಉದ್ಯಮಶೀಲ ದೃಢ ಸಂಕಲ್ಪಬದ್ದ ಶೌಚಗೃಹಗಳ ನಿರ್ಮಾಣ. ಪೌರಕಾರ್ಮಿಕರಿಗೆ ವಸತಿ ಗೃಹ ನಿರ್ಮಾಣಕ್ಕಾಗಿ ರೂ. 87.46 ಲಕ್ಷ ಮತ್ತು ಅವರ ವಿಶ್ರಾಂತಿ ಗೃಹ ಮತ್ತು ಸ್ನಾನ ಗೃಹ ನಿರ್ಮಾಣಕ್ಕಾಗಿ ರೂ 35.45ಲಕ್ಷವನ್ನು ಮೀಸಲಿಡಲಾಗಿದೆ.

    ಸರ್ವೆಯಿಂದ ಆಸ್ತಿ ಗಣಕೀಕರಣ

    ನಗರಸಭೆಗೆ ಆದಾಯ ಕ್ರೋಢೀಕರಣ ನಿಟ್ಟಿನಲ್ಲಿ ಸರ್ವೆ ಮೂಲಕ ಎಲ್ಲ ಆಸ್ತಿಗಳ ಗಣಕೀಕರಣ, ಉದ್ದಿಮೆ ಪರವಾನಗಿ ಮತ್ತು ನೀರಿನ ನಳ್ಳಿ ಸಂಪರ್ಕಗಳ ಸರ್ವೆ ನಡೆಸಿ ಅನಧಿಕೃತ ವ್ಯಾಪಾರ ಮತ್ತು ಅನಧಿಕೃತ ನಳ್ಳಿಗಳ ಸಂಪರ್ಕ ಕಡಿತ ಮಾಡಿ ಆದಾಯ ಸೋರಿಕೆಗೆ ತಡೆ. 189 ಕೋಟಿ ರೂ.ಗಳ ಬಹುಗ್ರಾಮ ಯೋಜನೆ ಮೂಲಕ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ. ಅಮೃತ್ 2.0 ರಡಿ ಗಂಡಿ/ಕೆರೆಬೈಲುನಲ್ಲಿನ ಕೆರೆಗಳ ಅಭಿವೃದ್ದಿಗಾಗಿ ರೂ.3ಕೋಟಿ 20ಲಕ್ಷ ಹಾಗೂ ಬಿರ್ಲಾ ಮತ್ತು ಓವರ್ ಬ್ರಿಡ್ಜ್ ಬಳಿಯಿರುವ ಪಾರ್ಕ್‌ಗಳ ಅಭಿವೃದ್ಧಿಗೆ ರೂ. 80ಲಕ್ಷ ಮೀಸಲಿಡಲಾಗಿದೆ.

    ಅಮೃತ ನಗರೋತ್ಥಾನ ಯೋಜನೆ

    ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕಾಗಿ ಅಮೃತ ನಗರೋತ್ಥಾನ ಯೋಜನೆ ಹಂತ-4ರಲ್ಲಿ ರೂ.14.55 ಕೋಟಿ ಮೀಸಲಿರಿಸಲಾಗಿದೆ. ಅಂಗವಿಕಲರಿಗಾಗಿ ರೂ 63.75 ಲಕ್ಷದಲ್ಲಿ ಫಿಸಿಯೋಥೆರಪಿ ಕೇಂದ್ರಗಳ ನಿರ್ಮಾಣ. ನಗರಸಭೆ ಕಟ್ಟಡದ ವಿಸ್ತರಣೆ, ನವೀಕರಣ ಮತ್ತು ಗ್ರಂಥಾಲಯ ಕಟ್ಟಡ ನವೀಕರಣಕ್ಕೆ ರೂ.129.07ಲಕ್ಷ ಮೀಸಲಿಡಲಾಗಿದೆ.

    ನಗರೋತ್ಥಾನ ಹಂತ 4ರಡಿ ಪ.ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಪಕ್ಕ್ಕಾ ಮನೆ ನಿರ್ಮಾಣಕ್ಕೆ ರೂ.45 ಲಕ್ಷ, ಮನೆ ದುರಸ್ತಿಗೆ ರೂ.15 ಲಕ್ಷ, ಸಣ್ಣ ಉದ್ದಿಮೆದಾರರಿಗೆ ಸಹಾಯಧನ ನೀಡಲು ರೂ.40.71 ಲಕ್ಷ, ವಿದ್ಯಾಭ್ಯಾಸ ಸಹಾಯಧನಕ್ಕೆ ರೂ.30 ಲಕ್ಷ ಮತ್ತು ಬಡಜನರ ಅಭಿವೃದ್ಧಿಗಾಗಿ 7.25ರಡಿ ಪಕ್ಕಾಮನೆ ನಿರ್ಮಾಣಕ್ಕೆ ರೂ.45ಲಕ್ಷ, ಮನೆ ದುರಸ್ತಿಗಾಗಿ ರೂ.20ಲಕ್ಷ, ಸಣ್ಣ ಉದ್ದಿಮೆದಾರರಿಗೆ ಸಹಾಯಧನಕ್ಕಾಗಿ ರೂ. 25ಲಕ್ಷ, ವಿದ್ಯಾಭ್ಯಾಸಕ್ಕಾಗಿ ರೂ. 3.95ಲಕ್ಷ, ಅಂಗವಿಕಲರ ಟ್ರೈಸೈಕಲ್ ಖರೀದಿಗೆ ರೂ.15ಲಕ್ಷ, ಸ್ವಉದ್ಯೋಗ ನಿಟ್ಟಿನಲ್ಲಿ ಅಂಗಡಿ ಕೋಣೆ ನಿರ್ಮಾಣಕ್ಕೆ ರೂ. 25ಲಕ್ಷ ಮತ್ತು ಆಧುನಿಕ ವೈದ್ಯಕೀಯ ಉಪಕರಣಗಳ ಖರೀದಿ ರೂ.23.75ಲಕ್ಷ ಮೀಸಲಿಡಲಾಗಿದೆ.

    ಎಸ್‌ಎಫ್‌ಸಿ ವಿಶೇಷ ಅನುದಾನದಡಿ ರೂ.142ಲಕ್ಷದಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, ರೂ.15ಲಕ್ಷವನ್ನು ಪ್ಲಾೃಗ್‌ಪೋರ್ ನಿರ್ಮಾಣಕ್ಕೆ ಮೀಸಲಿಡಲಾಗಿದೆ.

    ಉಳಿತಾಯ ಬಜೆಟ್‌ಗೆ ಅನುಮೋದನೆ

    ಉಳ್ಳಾಲ ನಗರಸಭೆಗೆ 2024-25ನೇ ಸಾಲಿಗೆ ರೂ. 42.81ಕೋಟಿ ಬಜೆಟ್ ಮಂಡಿಸಲಾಗಿದ್ದು ರೂ.21.47ಕೋಟಿ ಆದಾಯ, ರೂ.21.34ಕೋಟಿ ಖರ್ಚು, ರೂ.13.11ಲಕ್ಷ ಉಳಿತಾಯ ಬಜೆಟಿಗೆ ಅನುಮೋದನೆ ನೀಡಲಾಗಿದೆ ಎಂದು ಪೌರಾಯುಕ್ತೆ ವಾಣಿ ವಿ.ಆಳ್ವ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts