More

    VIDEO ] ಆಕ್ರೋಶದಿಂದ ಬೆನ್ನಟ್ಟಿದ ಹಿಮಚಿರತೆಗೆ ಕೊನೆಗೂ ಆ ಬೇಟೆ ಸಿಕ್ಕಿತೆ?

    ಹಿಮ ಚಿರತೆಯೊಂದು ಬೇಟೆಯನ್ನು ಬೆನ್ನಟ್ಟಿದೆ..ಮುಂದೆ ಏನಾಯಿತು? ನೀವೇ ನೋಡಿ ಆ ಮೈ ನವಿರೇಳಿಸುವ ದೃಶ್ಯ…
    ರಾಕಿ ಪರ್ವತದ ಪ್ರದೇಶದಲ್ಲಿ ಹಿಮ ಚಿರತೆ ತನ್ನ ಬೇಟೆಯನ್ನು ಬೆನ್ನಟ್ಟುವ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಕ್ಷಣ ಕ್ಷಣಕ್ಕೂ ‘ಮುಂದೇನಾಗುತ್ತದೆ’ ಎಂಬ ಕುತೂಹಲ ಕೆರಳಿಸಿ ನಿಬ್ಬೆರಗಾಗಿಸುತ್ತದೆ. . 1.17 ಸೆಕೆಂಡ್ ನ ಈ ದೃಶ್ಯಾವಳಿಯನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.24,000 ಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಳಪಟ್ಟು ಭಾರೀ ವೈರಲ್ ಆಗಿದೆ.
    ರಾಕಿ ಪರ್ವತ ಪ್ರದೇಶದಲ್ಲಿ, ಎರಡು ಹಿಮ ಚಿರತೆಗಳು ತಮ್ಮ ಬೇಟೆಯು ಅಲ್ಲೆಲ್ಲೋ ತಮಗೆ ತೀರ ಸಮೀಪದಲ್ಲಿದೆ ಎಂಬುದನ್ನು ಊಹಿಸಿ ಆ ಬೇಟೆಗೆ ಹೊಂಚು ಹಾಕಿದವು. ಎರಡು ಚಿರತೆಗಳ ಪೈಕಿ ಒಂದು ಚಿರತೆ ಆ ಬೇಟೆಯನ್ನು ಹಿಂಬಾಲಿಸಿತು. ಆ ಪ್ರಾಣಿ ತನಗೆ ಅಪಾಯ ಕಾದಿದೆ ಎಂದು ಗ್ರಹಿಸಿದ ಕೂಡಲೇ, ಅದು ಪರ್ವತಗಳ ಕೆಳಗೆ ಓಡಲು ಪ್ರಾರಂಭಿಸಿತು, ಆದರೆ ಹಿಮ ಚಿರತೆ ಅದನ್ನು ವೇಗವಾಗಿ ಬೆನ್ನಟ್ಟಿತು.

    ಇನ್ನೇನು ಬೇಟೆ ಸಿಕ್ಕೇ ಬಿಟ್ಟಿತು ಎನ್ನುವಂತೆ, ಹಿಮ ಚಿರತೆ ಆ ಬೇಟೆಯನ್ನು ಹಿಡಿಯಿತಾದರೂ ಆ ಪ್ರಾಣಿ ಪರಭಕ್ಷಕ ಹಿಮಚಿರತೆಯ ಬಾಯಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅದು ತಪ್ಪಿಸಿಕೊಂಡು ಪರ್ವತದ ಕೆಳಗಿರುವ ನದಿಗೆ ಧುಮುಕಿ ಈಜಿ ಪಾರಾಯಿತು.
    “ಹಿಮ ಚಿರತೆ ಹಾಗೂ ಅದರ ಬೇಟೆ ಪ್ರಸಂಗ ಯಾವಾಗಲೂ ಮೈನವಿರೇಳಿಸುವಂಥ ದೃಶ್ಯವೇ ಆಗಿರುತ್ತದೆ. ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟ ಅತ್ಯಂತ ವಿರಳ ದೃಶ್ಯಾವಳಿಗಳಲ್ಲಿ ಇದೂ ಒಂದಾಗಿದೆ” ಎಂದು ಸುಸಂತಾ ನಂದ ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!

    ಇದು ನಂಬಲಸಾಧ್ಯವಾದ ದೃಶ್ಯಾವಳಿ ಎಂದು ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ಬಲಶಾಲಿ ಹಿಮ ಚಿರತೆ ಬೇಟೆಯನ್ನು ಬೆನ್ನಟ್ಟುವುದು ರೋಚಕ. ಆದರೆ ಆ ಪುಟ್ಟ ಪ್ರಾಣಿ ಚಿರತೆಯಿಂದ ತಪ್ಪಿಸಿಕೊಳ್ಳಲು ಮತ್ತಷ್ಟು ಅಪಾಯಕಾರಿ ನಡೆ ಅನುಸರಿಸಿದೆ. ಅದು ಬಂಡೆಗಳ ಕೆಳಗೆ ನುಗ್ಗಿ ನದಿ ಸೇರುವಷ್ಟೊತ್ತಿಗೆ ಮತ್ತೆ ಬೇರೇನಾದರೂ ಅಪಾಯ ಸಂಭವಿಸುವ ಸಾಧ್ಯತೆಯೂ ಇತ್ತು. ಅದೃಷ್ಟವಶಾತ್ ಕೊನೆಗೂ ಆ ಪ್ರಾಣಿ ನದಿ ಸೇರಿ ಈಜಿ ಪಾರಾಯಿತು.. ಆ ಮೈ ನವಿರೇಳಿಸುವ ಕ್ಷಣವನ್ನು ಬಣ್ಣಿಸಲು ಶಬ್ದಗಳೇ ಇಲ್ಲವೆನ್ನಬಹುದು.
    ಅಪಾಯಬಂದಾಗ ತಪ್ಪಿಸಿಕೊಳ್ಳುವ ಚಾಕಚಕ್ಯತೆಯ ಪಾಠವನ್ನು ಈ ಪ್ರಾಣಿಯಿಂದ ಕಲಿಯಬಹುದು ಎಂಬಂತಿದೆ ಈ ವಿಡಿಯೋ.

    ವೆಂಟಿಲೇಟರ್ ತಯಾರಿಸಲು ಭಾರತದ ಮೂರು ಕಂಪನಿಗಳಿಗೆ ನಾಸಾ ಗ್ರೀನ್ ಸಿಗ್ನಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts