More

    ಪಿಯು ಪರೀಕ್ಷೆ ಮೊದಲ ದಿನ ಸುಸೂತ್ರ: ಇಬ್ಬರು ಡಿಬಾರ್, 23 ಸಾವಿರ ಗೈರು

    ಬೆಂಗಳೂರು: 2023ನೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಗುರುವಾರದಿಂದ ಆರಂಭವಾಗಿದ್ದು, ಮೊದಲ ದಿನ ಸುಸೂತ್ರವಾಗಿ ನಡೆದಿದೆ. ಒಟ್ಟಾರೆ ಪರೀಕ್ಷೆಗೆ 23,771 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ನಕಲು ಮಾಡಲು ಯತ್ನಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.

    ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯದ ಪರೀಕ್ಷೆ ನಡೆದಿದ್ದು, ಈ ಎರಡು ವಿಷಯಗಳಿಗೆ 5,33,797 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 5,10,026(ಶೇ.95.55) ವಿದ್ಯಾರ್ಥಿಗಳು ಹಾಜರಾಗಿದ್ದು, 23,771 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಹಾಗೆಯೇ, ಬೆಳಗಾವಿಯ ಚಿಕ್ಕೋಡಿ ಮತ್ತು ಯಾದಗಿರಿಯ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಮಾಡಲು ಮುಂದಾಗಿ ಸಿಕ್ಕಿಬಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.

    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರು ತಮ್ಮ ಸ್ವ ಕ್ಷೇತ್ರ ತಿಪಟೂರಿನ ಬಾಲಕರ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿ ಪರೀಕ್ಷಾ ಸಿದ್ಧತೆಯನ್ನು ಪರಿಶೀಲಿಸಿದರು. ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಶುಭ ಹಾರೈಸಿದರು.

    ಇದನ್ನೂ ಓದಿ: ಸಿಬಿಐ ಬಳಿಕ ಮನೀಶ್​ ಸಿಸೋಡಿಯಾಗೆ ಇಡಿ ಶಾಕ್​: ಅಕ್ರಮ ಹಣ ವರ್ಗಾವಣೆ, ಎಎಪಿ ನಾಯಕನ ಬಂಧನ

    ಪರೀಕ್ಷೆ ಬಳಿಕ ಖುಷಿಯಾಗಿ ಹೊರಬಂದ ವಿದ್ಯಾರ್ಥಿಗಳು, ಪಠ್ಯಕ್ರಮದಲ್ಲಿರುವ ಪ್ರಶ್ನೆಗಳನ್ನೇ ಕೇಳಲಾಗಿತ್ತು. ಪಠ್ಯಕ್ರಮ ಹೊರತಾದ ಯಾವುದೇ ಪ್ರಶ್ನೆಗಳನ್ನು ನೀಡಿರಲಿಲ್ಲ. ಉತ್ತಮ ಅಂಕಗಳಿಸುವಂತಹ ಪ್ರಶ್ನೆಗಳೇ ಬಂದಿದ್ದವು. ಈ ಬಾರಿ ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಇದ್ದರಿಂದ ಹೆಚ್ಚಿನ ಅಂಕಗಳಿಸಲು ಸಾಧ್ಯವಾಗಲಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು. ಮಾ.11ರಂದು ಗಣಿತ ಮತ್ತು ಶಿಕ್ಷಣ ಶಾಸದ ಪರೀಕ್ಷೆಗಳು ನಡೆಯಲಿವೆ.

    ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿ
    ಬೆಂಗಳೂರಿನ ಮಲ್ಲೇಶ್ವರದ ಕಾಲೇಜೊಂದರಲ್ಲಿ ಅಭ್ಯರ್ಥಿಯು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಆಗಮಿಸಿದ್ದರು. ಹಿಜಾಬ್‌ಗೆ ಅವಕಾಶ ಇಲ್ಲದೇ ಇರುವುದನ್ನು ಕಾಲೇಜಿನ ಪ್ರಾಂಶುಪಾಲರು ಸ್ಪಷ್ಪಪಡಿಸಿ ಹಿಜಾಬ್ ತೆಗೆದು ಕೇಂದ್ರಕ್ಕೆ ಆಗಮಿಸುವಂತೆ ಸೂಚಿಸಿದರು. ಪರೀಕ್ಷೆ ಆರಂಭದ ಕೊನೇ ಕ್ಷಣದವರೆಗೂ ವಿದ್ಯಾರ್ಥಿನಿ ಹಿಜಾಬ್ ತೆಗೆಯಲು ನಿರಾಕರಿಸಿದರು. ಕೊನೆಗೆ ಅವಕಾಶ ನೀಡುವುದಿಲ್ಲವೆಮದು ಸ್ಪಷ್ಟವಾದ ನಂತರ ಹಿಜಾಬ್ ತೆಗೆದು ಪರೀಕ್ಷಾ ಕೊಠಡಿ ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.

    ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟ ಉದಾಹರಣೆ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಸಿಬಿಐ ಬಳಿಕ ಮನೀಶ್​ ಸಿಸೋಡಿಯಾಗೆ ಇಡಿ ಶಾಕ್​: ಅಕ್ರಮ ಹಣ ವರ್ಗಾವಣೆ, ಎಎಪಿ ನಾಯಕನ ಬಂಧನ

    ಶಾಸಕ ಸತೀಶ್ ರೆಡ್ಡಿ, ಮುನಿರೆಡ್ಡಿ ವಿರುದ್ಧ ಭೂ ಕಬಳಿಕೆ ಆರೋಪ: ಉಮಾಪತಿ ಶ್ರೀನಿವಾಸಗೌಡರಿಂದ ದಾಖಲೆ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts