More

    ಧೂಮಪಾನಿಗಳು-ಸಸ್ಯಾಹಾರಿಗಳಲ್ಲಿ ಕೋವಿಡ್ ಸೋಂಕು ಸಾಧ್ಯತೆ ಕಡಿಮೆ; ಸಿಎಸ್​ಐಆರ್ ಸಮೀಕ್ಷೆಯಲ್ಲಿ ಬಹಿರಂಗ

    ನವದಹೆಲಿ: ಹೃದಯಾಘಾತ, ಕ್ಯಾನ್ಸರ್ ಮುಂತಾದ ಗಂಭೀರ ರೋಗಗಳಿಗೆ ಸಂಬಂಧಿಸಿದಂತೆ ಮಾತನಾಡುವಾಗ ಧೂಮಪಾನಿಗಳಿಗೆ ಒಂದು ವಿಶೇಷವಾದ ಎಚ್ಚರಿಕೆಯನ್ನೇ ನೀಡಲಾಗುತ್ತದೆ, ನೀವು ಧೂಮಪಾನ ಮಾಡುವವರಾಗಿದ್ದರೆ ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ಕಿವಿಮಾತನ್ನು ವೈದ್ಯರು ಅಂಥವರಿಗೆ ಹೇಳುವುದು ಸಾಮಾನ್ಯ.

    ಆದರೆ ಎಲ್ಲ ವಿಷಯ-ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದಂತೆ ಕೋವಿಡ್​ ಧೂಮಪಾನಿಗಳ ವಿಚಾರಲ್ಲೂ ಉಲ್ಟಾ ಎಂಬಂತಾಗಿದೆ. ಅರ್ಥಾತ್, ಧೂಮಪಾನಿಗಳು ಕೋವಿಡ್​ ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂಬುದು ಸಮೀಕ್ಷೆಯೊಂದರಿಂದ ಕಂಡುಬಂದಿದೆ. ಭಾರತ ಸರ್ಕಾರದ ಕೌನ್ಸಿಲ್​ ಆಫ್​ ಸೈಂಟಿಫಿಕ್​ ಇಂಡಸ್ಟ್ರಿಯಲ್ ರಿಸರ್ಚ್​ (ಸಿಎಸ್​ಐಆರ್​) ಈ ಸಮೀಕ್ಷೆಯನ್ನು ನಡೆಸಿದೆ.

    ಧೂಮಪಾನಿಗಳಿಗೆ ಕೋವಿಡ್​ ಸೋಂಕು ತಗುಲುವುದು ವಿರಳ ಎಂಬುದು ಈ ಸಮೀಕ್ಷೆ ಪ್ರಕಾರ ತಿಳಿದುಬಂದಿದೆ. ಧೂಮಪಾನದಿಂದಾಗಿ ಅಂಥವರಲ್ಲಿ ಲೋಳೆಯ ಪದರ ಉತ್ಪಾದನೆ ಆಗಿರುವುದರಿಂದ ಅದು ರಕ್ಷಣಾತ್ಮಕ ಕವಚವಾಗಿ ವರ್ತಿಸುತ್ತದೆ ಎಂದು ಸಮೀಕ್ಷೆ ಹೇಳಿದೆ. ಅದೇ ರೀತಿ ಸಸ್ಯಾಹಾರಿಗಳಲ್ಲೂ ಕೋವಿಡ್​ ಸೋಂಕು ತಗುಲುವಿಕೆ ವಿರಳ ಎಂದೂ ಈ ಸಮೀಕ್ಷೆ ಹೇಳಿದೆ. ಸಸ್ಯಾಹಾರಗಳಲ್ಲಿನ ಅಧಿಕ ನಾರಿನಂಶ ಕೋವಿಡ್​ ತಡೆಗೆ ಪೂರಕವಾಗಿ ವರ್ತಿಸುತ್ತದೆ ಎಂದು ಸರ್ವೆಯಲ್ಲಿ ಕಂಡುಬಂದಿದೆ.

    ಇದನ್ನೂ ಓದಿ: ಈ ವಾಂತಿಗೂ ಕೋಟ್ಯಂತರ ರೂಪಾಯಿ ಬೆಲೆ!; ಮುರ್ಡೇಶ್ವರದಲ್ಲಿ ಸಿಕ್ಕಿತು ಅಂಬರ್ ಗ್ರೀಸ್

    ದೇಶಾದ್ಯಂತ ಈ ಸರ್ವೆ ನಡೆದಿದ್ದು, ಇದರಲ್ಲಿ 140 ವೈದ್ಯರು ಹಾಗೂ ರಿಸರ್ಚ್ ಸೈಂಟಿಸ್ಟ್ಸ್ ಅಧ್ಯಯನ ನಡೆಸಿದ್ದಾರೆ. ನಗರ-ಪಟ್ಟಣ ಪ್ರದೇಶಗಳ 10,472 ಮಂದಿಯನ್ನು 40ಕ್ಕೂ ಅಧಿಕ ಸಿಎಸ್​ಐಆರ್ ಪ್ರಯೋಗಾಲಯಗಳಲ್ಲಿ ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅಲ್ಲದೆ ಇವರೆಲ್ಲ ಸ್ವಯಂಪ್ರೇರಿತರಾಗಿ ಈ ಅಧ್ಯಯನಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಿಎಸ್​ಐಆರ್​ ತಿಳಿಸಿದೆ.

    ಫ್ರಾನ್ಸ್​, ಇಟಲಿ, ನ್ಯೂಯಾರ್ಕ್​ ಹಾಗೂ ಚೀನಾಗಳಲ್ಲಿ ಈಗಾಗಲೇ ನಡೆದಿದ್ದ ಎರಡು ಅಧ್ಯಯನದಲ್ಲೂ ಧೂಮಪಾನಿಗಳಲ್ಲಿ ಕೋವಿಡ್ ಸೋಂಕು ತಗುಲುವುದು ಕಡಿಮೆ ಎಂಬುದು ಕಂಡುಬಂದಿದೆ. ಮತ್ತೊಂದೆಡೆ ಅಮೆರಿಕದ ಸೆಂಟರ್ಸ್ ಫಾರ್​ ಡಿಸೀಸ್ ಕಂಟ್ರೋಲ್​ ಆ್ಯಂಡ್ ಪ್ರಿವೆನ್ಷನ್​ (ಸಿಡಿಸಿ) ನಡೆಸಿದ ಅಧ್ಯಯನದಲ್ಲಿ ಕೋವಿಡ್​ ಸೋಂಕಿತ 7 ಸಾವಿರಕ್ಕೂ ಅಧಿಕ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಕೇವಲ ಶೇ. 1.3 ಮಂದಿ ಮಾತ್ರ ಧೂಮಪಾನಿಗಳಿದ್ದರು.

    ಇದನ್ನೂ ಓದಿ: ಉಸಿರುಗಟ್ಟಿ ನರಳಾಡಿದ ಕೋವಿಡ್​ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ

    ಯುನಿವರ್ಸಿಟಿ ಆಫ್​ ಕಾಲೇಜ್​ ಲಂಡನ್​ (ಯುಸಿಎಲ್​) ಯುಕೆ, ಚೀನಾ, ಯುಎಸ್​, ಫ್ರಾನ್ಸ್​ಗಳಲ್ಲಿನ 28 ಅಧ್ಯಯನಗಳನ್ನು ಪರಿಶೀಲಿಸಿದ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಪೈಕಿ ಧೂಮಪಾನಿಗಳು ನಿರೀಕ್ಷಿಸಿದಕ್ಕಿಂತಲೂ ಕಡಿಮೆ ಇದ್ದರು ಎಂಬುದು ಈ ಪರಿಶೀಲನೆಯಲ್ಲಿ ಕಂಡುಬಂದಿದೆ. ಇನ್ನು ಯುಕೆಯಲ್ಲಿನ ಕೋವಿಡ್ ಸೋಂಕಿತರ ಪೈಕಿ ಧೂಮಪಾನಿಗಳು ಶೇ. 5 ಮಾತ್ರ ಎಂಬುದು ಇನ್ನೊಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಇದೇ ಪ್ರಮಾಣ ಫ್ರಾನ್ಸ್​ನಲ್ಲಿ ಶೇ. 7.1, ಚೀನಾದಲ್ಲಿ ಶೇ. 3.8 ಇದೆ.

    ಜಿನ್​-ಜಿನ್​ ಝಾಂಗ್ ನಡೆಸಿದ ಇನ್ನೊಂದು ಅಧ್ಯಯನದಲ್ಲಿ ಕೋವಿಡ್ ಸೋಂಕಿತರ ಪೈಕಿ ಶೇ. 9 ಮಂದಿ ಧೂಮಪಾನಿಗಳಿದ್ದು, ಅದರಲ್ಲೂ 7 ಮಂದಿ ಧೂಮಪಾನ ತ್ಯಜಿಸಿದವರಾಗಿದ್ದರು. ಹೀಗೆ ಧೂಮಪಾನಿಗಳಲ್ಲಿ ಕೋವಿಡ್​ ಸೋಂಕಿನ ಸಾಧ್ಯತೆ ಕಡಿಮೆ ಎಂಬುದು ತಿಳಿದು ಬಂದಿದ್ದು, ಇದನ್ನು ಫ್ರೆಂಚ್​ ಪಬ್ಲಿಕ್ ಹೆಲ್ತ್​ ಡಾಟಾ ಕೂಡ ದೃಢಪಡಿಸಿದೆ.

    ಇದನ್ನೂ ಓದಿ: ಮದುವೆ ದಿನವೇ ದಂಡ ಕಟ್ಟಿದ ವಧು!; ಮಾಸ್ಕ್​ ಧರಿಸದ್ದಕ್ಕೆ ಫೈನ್​ ಹಾಕಿದ ತಹಸೀಲ್ದಾರ್

    ಲಿಂಬೆರಸ, ಕೊಬ್ಬರಿ ಎಣ್ಣೆ, ಸ್ಟೀಮ್, ಬಿಸಿ ನೀರು: ಕರೊನಾಗೆ ಮನೆಮದ್ದು- ಡಾ. ವಿಜಯ ಸಂಕೇಶ್ವರ ಸಲಹೆ

     

    ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು..

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts