More

    ಮದುವೆ ದಿನವೇ ದಂಡ ಕಟ್ಟಿದ ವಧು!; ಮಾಸ್ಕ್​ ಧರಿಸದ್ದಕ್ಕೆ ಫೈನ್​ ಹಾಕಿದ ತಹಸೀಲ್ದಾರ್

    ಹಾಸನ: ಕರೊನಾ ಸೋಂಕು ಹಾಗೂ ಸೋಂಕಿತರ ಸಾವಿನ ಪ್ರಮಾಣಗಳ ಹೆಚ್ಚಳ ಆಗಿರುವುದರಿಂದ ಅದನ್ನು ತಡೆಯಲು ಮತ್ತು ನಿಯಂತ್ರಣಕ್ಕೆ ತರುವ ಸಲುವಾಗಿ ರಾಜ್ಯ ಸರ್ಕಾರ ನೈಟ್​ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿದ್ದಲ್ಲದೆ ಹಲವಾರು ನಿರ್ಬಂಧಗಳನ್ನೂ ಹೇರಿದೆ. ಆ ಪೈಕಿ ಮದುವೆ ಕೂಡ ಒಂದು.

    ಈಗಾಗಲೇ ನಿಗದಿ ಆಗಿರುವ ಮದುವೆಗಳು ಹೀಗೆ ನಿರ್ಬಂಧ ಇದ್ದಾಗ್ಯೂ ರಾಜ್ಯಾದ್ಯಂತ ನಡೆಯುತ್ತಿದ್ದು, ಅಲ್ಲಲ್ಲಿ ಕೋವಿಡ್​ ನಿಯಮಗಳ ಉಲ್ಲಂಘನೆ ಆಗುತ್ತಿರುವುದು ಕೂಡ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ದಾಳಿ ನಡೆಸಿ ಕಲ್ಯಾಣ ಮಂಟಪದ ಮಾಲೀಕರು, ಗಂಡು-ಹೆಣ್ಣಿನ ಕಡೆಯ ಮುಖ್ಯಸ್ಥರ ಮೇಲೆ ಕೇಸು ದಾಖಲಿಸುತ್ತಿರುವ ಪ್ರಕರಣಗಳು ದಿನೇದಿನೆ ಕೇಳಿಬರುತ್ತಿದೆ.

    ಇದನ್ನೂ ಓದಿ: ಉಸಿರುಗಟ್ಟಿ ನರಳಾಡಿದ ಕೋವಿಡ್​ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ 

    ಅಂಥದ್ದೇ ಒಂದು ಪ್ರಕರಣದಲ್ಲಿ ಮಾಸ್ಕ್​ ಧರಿಸದ ವಧುಗೆ ತಹಸೀಲ್ದಾರ್​ ಅವರು ದಂಡ ವಿಧಿಸಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡಿನ ಸ್ವಾಗತ್ ಕನ್ವೆನ್ಷನ್​ ಹಾಲ್​ನಲ್ಲಿ ಇಂದು ನಡೆಯುತ್ತಿದ್ದ ಮದುವೆ ಸಂದರ್ಭದಲ್ಲಿ ವಧು ಮಾಸ್ಕ್​ ಧರಿಸಿರಲಿಲ್ಲ ಎಂಬ ಕಾರಣಕ್ಕೆ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಸ್ಥಳದಲ್ಲೇ ದಂಡ ವಿಧಿಸಿದ್ದಾರೆ. ಅಲ್ಲದೆ ಕೋವಿಡ್​ ನಿಯಮಗಳನ್ನು ಪಾಲಿಸುವಂತೆ ಎರಡೂ ಕಡೆಯವರಿಗೆ ಸೂಚನೆ ನೀಡಿ ತೆರಳಿದ್ದಾರೆ.

    ಇದನ್ನೂ ಓದಿ: ‘ಕಥೆಗೆ ಸಾವಿಲ್ಲ’ ಕಥಾಸಂಕಲನ ಬಿಡುಗಡೆಯ ಬೆನ್ನಿಗೇ ಲೇಖಕನ ತಂದೆ ಕೋವಿಡ್​ಗೆ ಬಲಿ! 

    ಮದುವೆ ಮಾಡಿಕೊಂಡಿದ್ದಕ್ಕೆ ವಧು-ವರರ ಮೇಲೆ ಬಿತ್ತು ಕೇಸ್; ಎರಡೂ ಕುಟುಂಬಗಳವರ ವಿರುದ್ಧ ಪ್ರಕರಣ ದಾಖಲು

     
     
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts