More

    ‘ಕಥೆಗೆ ಸಾವಿಲ್ಲ’ ಕಥಾಸಂಕಲನ ಬಿಡುಗಡೆಯ ಬೆನ್ನಿಗೇ ಲೇಖಕನ ತಂದೆ ಕೋವಿಡ್​ಗೆ ಬಲಿ!

    ಬೆಂಗಳೂರು: ಇದು ಅತ್ಯಂತ ವಿಪರ್ಯಾಸ ಹಾಗೂ ದುರಂತ ಎನ್ನಬಹುದಾದ ಪ್ರಸಂಗ. ಅತ್ತ ‘ಕಥೆಗೆ ಸಾವಿಲ್ಲ’ ಎಂಬ ಕಥಾಸಂಕಲನ ಬೆಳಗ್ಗೆಯಷ್ಟೇ ಬಿಡುಗಡೆ ಆಗಿದೆ. ಆದರೆ ಆ ಕಥಾಸಂಕಲನದ ಲೇಖಕರ ತಂದೆ ರಾತ್ರಿ ಆಗುವಷ್ಟರಲ್ಲಿ ಕೋವಿಡ್​ಗೆ ಬಲಿಯಾಗಿದ್ದಾರೆ.

    ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ್ ಅವರ ತಂದೆ ಕೋವಿಡ್​ಗೆ ಬಲಿಯಾಗಿದ್ದು, ಬೆಳಗ್ಗೆಯಷ್ಟೇ ಗಿರಿರಾಜ್ ಅವರ ಕಥಾಸಂಕಲನ ‘ಕಥೆಗೆ ಸಾವಿಲ್ಲ’ ಬಿಡುಗಡೆ ಆಗಿತ್ತು. ಇಂಥದ್ದೊಂದು ದುಃಖದ ಸಂಗತಿಯನ್ನು ಮತ್ತೊಬ್ಬ ನಿರ್ದೇಶಕ ಜಯತೀರ್ಥ ಅವರು ಫೇಸ್​ಬುಕ್​ನಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

    ‘ಎಂಥ ವಿಪರ್ಯಾಸ.. ಚಲನಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ್ ಬರೆದಿರುವ ‘ಕಥೆಗೆ ಸಾವಿಲ್ಲ’ ಕಥಾ ಸಂಕಲನ ಇವತ್ತು ಬೆಳಗ್ಗೆ ಹಂಸಲೇಖಾರ ಕಡೆಯಿಂದ ಲೋಕಾರ್ಪಣೆಗೊಳ್ಳುತ್ತದೆ. ರಾತ್ರಿ 8 ಗಂಟೆ ಹೊತ್ತಿಗೆ ಗಿರಿರಾಜ್ ಅವರ ತಂದೆ ಕರೊನಾದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪ್ಪ ಮನೆಗೆ ಬಂದು ಮಗನ ಪುಸ್ತಕವನ್ನು ಓದಿ ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯುತ್ತಿದ್ದ ಗಿರಿರಾಜ್​ಗೆ ಇದು ದೊಡ್ಡ ಆಘಾತ. ಅವರ ಕುಟುಂಬಸ್ಥರು ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಲಿ. ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಜಯತೀರ್ಥ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಗಿರಿರಾಜ್ ಅವರು ‘ಜಟ್ಟ’, ‘ಮೈತ್ರಿ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

     

    'ಕಥೆಗೆ ಸಾವಿಲ್ಲ' ಕಥಾಸಂಕಲನ ಬಿಡುಗಡೆಯ ಬೆನ್ನಿಗೇ ಲೇಖಕನ ತಂದೆ ಕೋವಿಡ್​ಗೆ ಬಲಿ!
    ಜಯತೀರ್ಥ ಅವರ ಫೇಸ್​ಬುಕ್​ ಪೋಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts