More

    ಕಾನ್ವೆಂಟ್‌ಗಳು ಜ್ಞಾನದ ಕೇಂದ್ರಗಳಲ್ಲ

    ಸಿರಿಗೆರೆ: ಜ್ಞಾನ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂಬ ಬಸವಣ್ಣನವರ ವಚನದ ತಾತ್ಪರ್ಯದಂತೆ ಎಲ್ಲಿ ಜ್ಞಾನ ಇದೆಯೋ ಅಲ್ಲಿ ಅಜ್ಞಾನ ಹೊರಟು ಹೋಗುತ್ತದೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಶನಿವಾರ ರಾತ್ರಿ ಆಯೋಜಿಸಿದ್ದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘದ ಸಮಾರೋಪ ಹಾಗೂ ಸಾಂಸ್ಕೃತಿಕ ಸಂಜೆ ಸಮಾರಂಭದಲ್ಲಿ ಮಾತನಾಡಿ, ಹೆಚ್ಚು ಶೋಷಣೆ ಮಾಡುತ್ತಿರುವ ಶಾಲೆಗಳು ಉಳಿಯುತ್ತಿವೆ. ಹೆಚ್ಚು ಸ್ವತಂತ್ರ ನೀಡುತ್ತಿರುವ ಶಾಲೆಗಳು ಮುಚ್ಚುತ್ತಿವೆ ಎಂದು ವಿಷಾದಿಸಿದರು.

    ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ಕ್ರಾಂತಿ ಮಾಡಿದರು. ಮಕ್ಕಳನ್ನು ಕಾನ್ವೆಂಟ್‌ಗೆ ಸೇರಿಸಿದರೆ ಬುದ್ಧಿವಂತರಾಗುತ್ತಾರೆ ಎಂಬುದು ಭ್ರಮೆ. ನಾಡಿನ ಬಹಳಷ್ಟು ಬುದ್ಧಿವಂತರು ಯಾವ ಕಾನ್ವೆಂಟ್‌ನಲ್ಲೂ ಓದಿಲ್ಲ. ಸರ್ಕಾರಿ ಶಾಲೆಗಳಲ್ಲೇ ಓದಿ ವಿದ್ವತ್ ಪಡೆದಿದ್ದರೆ ಎಂದರು.

    ಹೆಚ್ಚು ಡೊನೇಷನ್ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸುವುದಕ್ಕಿಂತ ಗುಣಮಟ್ಟದ ಶಿಕ್ಷಕರಿರುವ ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಆಗ ಅವರ ಬೌದ್ಧಿಕ ಮಟ್ಟ ಹೆಚ್ಚುತ್ತದೆ ಎಂದು ಪಾಲಕರಿಗೆ ಸಲಹೆ ನೀಡಿದರು.

    ಬಿಇಒ ಬಿ.ಸಿದ್ದಪ್ಪ ಮಾತನಾಡಿ, ಸಿರಿಗೆರೆ ಧಾರ್ಮಿಕ, ಅಕ್ಷರ, ಅನ್ನದಾಸೋಹ ಕೇಂದ್ರವಾಗಿದೆ. ಗ್ರಾಮೀಣ ಮಕ್ಕಳು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು. ಮನೆಯೇ ಮೊದಲ ಪಾಠಶಾಲೆಯಾಗಬೇಕು. ಇಲ್ಲಿಂದಲೇ ಸಂಸ್ಕೃತಿ ದೊರಕಬೇಕು ಎಂದರು.

    ಶಾಲೆಯಲ್ಲಿ ಸೇವೆಸಲ್ಲಿಸಿದ ಶಿಕ್ಷಕರು, ಮುಖ್ಯಶಿಕ್ಷಕರಿಗೆ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಕಿ ಸುಜಾತ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಮುಖ್ಯಶಿಕ್ಷಕಿ ದಾಕ್ಷಾಯಣಮ್ಮ ಸ್ವಾಗತಿಸಿದರು. ಎಸ್.ಜ್ಯೋತಿಲಕ್ಷ್ಮಿ ವಾರ್ಷಿಕ ವರದಿ ವಾಚಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಹುದ್ದೆಯಲ್ಲಿರುವ ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಗಣಿ ಮಾಲೀಕ ಆರ್.ಪ್ರವೀಣ್ ಚಂದ್ರ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಚ್.ಶೇಖರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಎ.ಎಂ.ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯ ದೇವರಾಜ್, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ಮಹಾಂತೇಶ್, ಗ್ರಾಪಂ ಅಧ್ಯಕ್ಷೆ ರೂಪಾ, ಮಾಜಿ ಅಧ್ಯಕ್ಷೆ ಸುಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts