More

    ನಂಗೇನೂ ಆಗಿಲ್ಲ!- ಸಿಂಧೂ ಲೋಕನಾಥ್

    ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಸಿಂಧೂ ಲೋಕನಾಥ್, ಹೇರ್​ಸ್ಟೈಲ್ ಬದಲಾಯಿಸಿ ಕೊಂಡಿದ್ದಾರೆ. ಮೈದಾನದಲ್ಲಿ ಪುಟ್ಬಾಲ್ ಜತೆ ಜಿಂಕೆಯಂತೆ ಓಡುತ್ತಿದ್ದಾರೆ. ತಾನು ಫಿಟ್ ಎಂದು ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಹೇಳಿಕೊಳ್ಳಲು ಕಾರಣ ಅವರ ಮೇಲೆ ಕೇಳಿ ಬಂದ ಮಾತುಗಳು. ಹೌದು, ಇತ್ತೀಚಿನ ಕೆಲ ದಿನಗಳಲ್ಲಿ ಕೆಲ ಸೋಷಿಯಲ್ ಮೀಡಿಯಾಗಳಲ್ಲಿ ಸಿಂಧೂ ಲೋಕನಾಥ್ ಖಿನ್ನತೆಗೊಳಗಾಗಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆ ಸುದ್ದಿಗೆ ಗುದ್ದು ಕೊಡಲೆಂದೇ ಇದೀಗ ಹೊಸ ಅವತಾರದಲ್ಲಿ ಎದುರಾಗಿದ್ದಾರೆ. ಅವರ ಹೇಳಿಕೆಯ ಪೂರ್ತಿ ವಿವರ ಇಲ್ಲಿದೆ. ‘ಕೂದಲಿಗೆ ಕತ್ತರಿ ಹಾಕಿದೆ ಅಂದ ಮಾತ್ರಕ್ಕೆ ನಾನು ಖಿನ್ನತೆಗೊಳಗಾಗಿದ್ದೇನೆ ಎಂದಲ್ಲ.

    ಇದನ್ನೂ ಓದಿ: ಜೈಲಲ್ಲೇ ಯೂಸುಫ್ ಮೆಮೋನ್ ಸಾವು: 1993 ಮುಂಬೈ ಸರಣಿ ಸ್ಪೋಟದ ಅಪರಾಧಿ

    ಲಿಂಗ ಪಕ್ಷಪಾತಿ ಅಲ್ಲ. ಆ ಕೂದಲು ನನ್ನವು. ಬಹು ಬೇಗನೆ ಬೆಳೆಯುವ ಆ ಕೂದಲನ್ನು ಕತ್ತರಿಸಿದ್ದಕ್ಕೆ ಈ ರೀತಿ ಬಿಂಬಿಸುವುದು ನಿಜಕ್ಕೂ ಹಾಸ್ಯಾಸ್ಪದ. ಇನ್ನೊಬ್ಬರ ಫೋಟೋಗಳನ್ನು ತೆಗೆದುಕೊಂಡು ಅವರ ಇಮೇಜ್​ಗೆ ಧಕ್ಕೆ ತರುವುದು, ಅವರ ವೈಯಕ್ತಿಕ ಜೀವನವನ್ನು ಕೆದಕುವುದು, ಅವರ ವೈವಾಹಿಕ ಜೀವನದ ಬಗ್ಗೆ ನಿಮಗನಿಸಿದ್ದನ್ನು ಬಿತ್ತರಿಸುವುದರಿಂದ, ನೀವು ಒಳ್ಳೇ ಮೈಲೇಜ್ ಪಡೆದುಕೊಳ್ಳಬಹುದು. ಆದರೆ, ಅವರ ರಿಯಲ್ ಲೈಫ್​ನಲ್ಲಿ ಏನಾದರೂ ಅವಘಡ ಸಂಭವಿಸಿದರೆ ಅದರ ಹೊಣೆ ನೀವು ಹೊರುತ್ತೀರಾ?’ ಎಂದು ಅವರ ವಿರುದ್ಧ ಮಾತನಾಡಿದವರಿಗೆ ಚಾಟಿ ಬೀಸಿದ್ದಾರೆ.

    2000ದ ಸನಿಹದಲ್ಲಿದೆ ಬೆಂಗಳೂರಿನಲ್ಲಿ ಕೋವಿಡ್​ ಕೇಸ್​: ರಾಜ್ಯದಲ್ಲಿ 445 ಹೊಸ ಕೇಸ್​ ದೃಢ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts