More

    50 ಬೈಕ್‌ಗಳ ಸೈಲೆನ್ಸರ್ ನಾಶ

    ಕಡೂರು: ಕರ್ಕಶವಾಗಿ ಶಬ್ಧ ಮಾಡುತ್ತಿದ್ದ 50ಕ್ಕೂ ಹೆಚ್ಚು ಬೈಕ್‌ಗಳ ಸೈಲೆನ್ಸರ್‌ಗಳನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡು ನಾಶಪಡಿಸಿದರು. ಪೊಲೀಸ್ ಠಾಣೆ ಮುಂದೆ ರೋಡ್ ರೋಲರ್ ಹತ್ತಿಸಿ ಪುಡಿಮಾಡಿದರು.

    ಪಿಎಸ್‌ಐ ಧನಂಜಯ ಮಾತನಾಡಿ, ದ್ವಿಚಕ್ರ ವಾಹನಗಳಿಗೆ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಸಂಚರಿಸುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ವಾಹನ ಸವಾರರಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ನಂತರವೂ ಕರ್ಕಶ ಶಬ್ಧ ಮಾಡುತ್ತ ವಾಹನ ಚಲಾಯಿಸುತ್ತಿದ್ದ ವಾಹನಗಳನ್ನು ಹಿಡಿದು ಸೈಲೆನ್ಸರ್‌ಗಳನ್ನು ನಾಶಪಡಿಸಲಾಗಿದೆ. ಇನ್ನುಮುಂದೆ ಈ ರೀತಿಯಾಗಿ ಕರ್ಕಶ ಶಬ್ಧ ಹೊರಡಿಸುವ ಸೈಲೆನ್ಸರ್ ಅಳವಡಿಸಿಕೊಂಡರೆ ದಂಡ ವಿಧಿಸುವುದರ ಜತೆಗೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
    ಇನ್ಸ್‌ಪೆಕ್ಟರ್ ದುರ್ಗಪ್ಪ, ಪಿಎಸ್‌ಐ ನವೀನ್, ಎಎಸ್‌ಐ ವೀರೇಂದ್ರ, ಗುಪ್ತದಳ ವಿಭಾಗದ ರೇಣುಕಾ ಪ್ರಸಾದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts