More

    ದೃಷ್ಟಿ ಹೀನರಗೆ ನೇತ್ರದಾನವೇ ಬದುಕಿನ ದಾರಿದೀಪ

    ಸಿರಗುಪ್ಪ: ಸಕಲ ಜೀವರಾಶಿಗಳಿಗೆ ದೃಷ್ಟಿ ಅತಿ ಮುಖ್ಯ, ದೃಷ್ಟಿ ಹೀನರಗೆ ನೇತ್ರದಾನ ಹೊಸ ಬದುಕಿನ ದಾರಿದೀಪವಾಗಲಿದೆ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ಯಾದವಾಡ ತಿಳಿಸಿದರು.

    ಇದನ್ನೂ ಓದಿ: ದೃಷ್ಟಿ ಹೀನರಿಗೆ ನೋಟು ಗುರುತಿಸಲು ಸಹಕಾರಿಯಾಗುವಂತಹ ಆ್ಯಪ್​ ಬಿಡುಗಡೆ ಮಾಡಿದ ಆರ್​ಬಿಐ

    ನಗರದ ಎಸ್.ಇ.ಎಸ್.ಐ.ಟಿ.ಐ ಕಾಲೇಜನಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ತಾಲೂಕು ಆರೋಗ್ಯ ಇಲಾಖೆ, ತಾಲೂಕು ಯುವ ಬ್ರಿಗೇಡ್‌ದಿಂದ ಗುರುವಾರ ನಡೆದ ಮಾನಸಿಕ ಆರೋಗ್ಯ ಮತ್ತು ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಡಿಜಿಟಲ್ ತಂತ್ರಜ್ಞಾನಗಳಾದ ಟಿವಿ, ಮೊಬೈಲ್ ಮತ್ತು ಕಂಪ್ಯೂಟರ್‌ಗಳನ್ನು ಕಣ್ಣು ಮಿಟುಕಿಸದೆ ನೋಡುವುದರಿಂದ ಕಣ್ಣುಗಳ ಒತ್ತಡ, ಆಯಾಸ, ತಲೆನೋವು, ಮಸುಕಾದ ದೃಷ್ಟಿ, ಕುತ್ತಿಗೆ, ಭುಜದ ನೋವುಗೆ ಕಾರಣವಾಗಬಹುದು. ಸಮೀಪದೃಷ್ಟಿಯು ಹೆಚ್ಚಾಗುತ್ತದೆ.

    ಆದ್ದರಿಂದ ಕಣ್ಣಿನ ಮಹತ್ವವನ್ನು ಪ್ರತಿಯೊಬ್ಬರು ಅರಿತು ಟಿ.ವಿ, ಬೊಬೈಲ್, ಕಂಪ್ಯೂಟರ್‌ನ್ನು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಬಳಸಬೇಕೆಂದು ಸಲಹೆ ನೀಡಿದರು. ಯುವ ಬಿಗ್ರೇಡ್ ತಾ.ಸಂಚಾಲಕ ಮಂಜುನಾಥ ಮಾತನಾಡಿ,

    ವ್ಯಕ್ತಿ ಸಾವಿನ ನಂತರ ಕಣ್ಣುದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಬಹುದು, ಇಲ್ಲಿಯವೆಗೂ 62 ಕ್ಕೂ ಹೆಚ್ಚು ವ್ಯಕ್ತಿಗಳು ನೇತ್ರದಾನ ಮಾಡಿ ಇನ್ನೋಬ್ಬರಿಗೆ ದೃಷ್ಟಿ ನೀಡಿದ್ದಾರೆ ಎಂದು ಹೇಳಿದರು.

    23ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೇತ್ರದಾನಕ್ಕೆ ನೊಂದಾಯಿಸಿದರು. ಹಿರಿಯ ವಕೀಲ ಅಬ್ದುಲ್‌ಸಾಬ್, ತಾ.ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ, ವಕೀಲರಾದ ಮಲ್ಲನಗೌಡ, ರುದ್ರಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts