More

    ವಲಸಿಗರು ಬಿಜೆಪಿಗೆ ಬರಲು ಸಿದ್ದರಾಮಯ್ಯ ಕಾರಣವಾ?; ಯಡಿಯೂರಪ್ಪ ಆರೋಪ, ಸ್ಪಷ್ಟನೆ ಕೇಳಿದ ಸಾರಾ ಮಹೇಶ್​

    ಬೆಂಗಳೂರು: ಶಾಸಕರು ಬಿಜೆಪಿಗೆ ವಲಸೆ ಬಂದಿದ್ದು ಇದೀಗ ಹಳೇ ವಿಚಾರ. ಆದರೆ ಅವರು ವಲಸೆ ಬರಲು ಸಿದ್ದರಾಮಯ್ಯ ಅವರೇ ಕಾರಣ ಎಂಬ ವಿಷಯ ಇದೀಗ ಸದನದಲ್ಲೇ ಹೊರಬಿದ್ದಿದ್ದು, ಸಾಕಷ್ಟು ಚರ್ಚೆಗೂ ಕಾರಣವಾಯಿತು. ಮಾತ್ರವಲ್ಲ, ಆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆಯನ್ನೂ ನೀಡಬೇಕಾಯಿತು.

    ಅಧಿವೇಶನದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಮ್ಮ ಪಕ್ಷಕ್ಕೆ ವಲಸಿಗರನ್ನು ನೀವೇ ಕಳುಹಿಸಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಬೊಟ್ಟು ಮಾಡಿ ಹೇಳಿದರು. ಯಡಿಯೂರಪ್ಪ ಅವರು ಹೀಗೊಂದು ಆರೋಪ ಮಾಡುತ್ತಿದ್ದಂತೆ, ದನಿಗೂಡಿಸಿದ ಜೆಡಿಎಸ್ ಶಾಸಕ ಸಾರಾ ಮಹೇಶ್ ಸ್ಪಷ್ಟನೆಯನ್ನು ಕೇಳಿದರು. ‘ಹೌದು.. ಈ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿಬರುತ್ತಿವೆ, ನೀವು ಸ್ಪಷ್ಟನೆ ನೀಡಿ..’ ಎಂದು ಸಿದ್ದರಾಮಯ್ಯ ಅವರನ್ನು ಸಾರಾ ಮಹೇಶ್ ಒತ್ತಾಯಿಸಿದರು.

    ಅಂಥ ದರಿದ್ರ ಕೆಲಸವನ್ನು ನಾನು ಮಾಡುವುದಿಲ್ಲ, ಮಾತ್ರವಲ್ಲ ಅವರು ವಾಪಸ್ ಕಳುಹಿಸಿದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ, ನನ್ನ ರಾಜಕೀಯ ‌ಜೀವನದಲ್ಲಿ ಇಂಥ ಕೆಲಸ ಮಾಡುವುದಿಲ್ಲ, ಏನಿದ್ದರೂ ನೇರವಾಗಿಯೇ ರಾಜಕೀಯ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

    ಬಳಿಕ ಚರ್ಚೆ ಸಿದ್ದರಾಮಯ್ಯ ಅವರ ಮುಂದಿನ ಚುನಾವಣೆ ಸ್ಪರ್ಧೆಯತ್ತ ತಿರುಗಿತು. ನೀವು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ? ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದ್ದಕ್ಕೆ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಕುರಿತಾಗಿ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.

    ಅವರು ನಿಲ್ಲದೆ ಇರುವ ಪ್ರಸಂಗ ಬರುವುದಿಲ್ಲ, ಆ ನಿರ್ಧಾರ ಕೈಗೊಳ್ಳುವ ಹಕ್ಕು ಅವರಿಗಿಲ್ಲ ಎಂದು ರಮೇಶ್ ಕುಮಾರ್ ಕುಟುಕಿದರು. ಹೌದು.. ನಾನು ಮುಂದಿನ ಚುನಾವಣೆಗೆ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸುತ್ತಿದ್ದಂತೆ, ಎಲ್ಲಿ ನಿಲ್ಲುತ್ತೀರಿ? ಆರ್​. ಅಶೋಕ್​ ಪ್ರಶ್ನಿಸಿದರು. ಆಗ ನಾನು ಪದ್ಮನಾಭನಗರದಲ್ಲೇ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ನಗೆ ಚಟಾಕಿ ಹಾರಿಸಿದರು. ಅದಕ್ಕೆ ನೀವು ಬಂದರೆ ಸ್ವಾಗತ ಎಂದು ಅಶೋಕ್ ಹೇಳುತ್ತಿದ್ದಂತೆ, ಇಲ್ಲ ನಾನು ಬಾದಾಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

    ಜೆಡಿಎಸ್​ ಡಿಮ್ಯಾಂಡೆಡ್​ ಪಾರ್ಟಿ ಎಂದ ರೇವಣ್ಣ; ಹೌದು ಎಂದು ಒಪ್ಪಿದ್ರು ಸಿದ್ದರಾಮಯ್ಯ, ಈಶ್ವರಪ್ಪ!

    ಹೆಸರೆತ್ತಿದರೆ ಖಾತೆ ಕಟ್, ಪತ್ರಿಕೆಯಲ್ಲಿ ಸಂಭಾವ್ಯರ‌ ಹೆಸರು ಬಂದರೆ ಅಂತಹವರ ಆಕಾಂಕ್ಷೆಗೆ ಕೊಕ್ಕೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts