More

    ಶ್ರೀ ವಿಜಯ ದಾಸರ ಜೀವನಗಾಥೆ ; ಧ್ವನಿ ಸುರುಳಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಖ್ಯಾತ ಹರಿದಾಸರು, ಭೃಗು ಋಷಿಗಳ ಅಂಶ ಸಂಭೂತ ಎಂದೇ ಹೆಸರಾದ ಶ್ರೀ ವಿಜಯದಾಸರ ಕುರಿತಾದ ಸಿನಿಮಾ ‘ದಾಸವರೇಣ್ಯ ಶ್ರೀ ವಿಜಯ ದಾಸರು’. ಮಧುಸೂದನ್ ಹವಾಲ್ದಾರ್ ಚಿತ್ರವನ್ನು ನಿರ್ದೇಶಿಸಿದ್ದು, ಮುಖ್ಯ ಭೂಮಿಕೆಯಲ್ಲಿ ತ್ರಿವಿಕ್ರಮ ಜೋಶಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೆ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿ, ‘ಹರಿದಾಸರು ವೇದಗಳ ಸಾರವನ್ನು ಕನ್ನಡ ಭಾಷೆಯಲ್ಲಿ ಜನರಿಗೆ ಅರ್ಥವಾಗುವ ಹಾಗೆ ಹಾಡುಗಳ ಮೂಲಕ ನೀಡಿದ್ದಾರೆ. ಶ್ರೀ ಪುರಂದರದಾಸರ ನಂತರದವರಾದ ಶ್ರೀ ವಿಜಯದಾಸರು 2800ಕ್ಕೂ ಹೆಚ್ಚು ಸುಳಾದಿಗಳನ್ನು, ದೇವರನಾಮ ಗೀತೆಗಳನ್ನು ರಚಿಸಿದ್ದಾರೆ. ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀ ವಿಜಯದಾಸರ ಕುರಿತಾದ ಚಿತ್ರವಿದು. ಎಲ್ಲ ಹಾಡುಗಳು ಚೆನ್ನಾಗಿವೆ’ ಎಂದು ಚಿತ್ರತಂಡಕ್ಕೆ ಶುಭಕೋರಿದರು.

    ಇದನ್ನೂ ಓದಿ : ‘ಪುಷ್ಪ 2’ ರಿಲೀಸ್​ ಡೇಟ್​ನಲ್ಲಿ ಬದಲಾವಣೆ? ಈ ಬಗ್ಗೆ ನಿರ್ದೇಶಕರು ಕೊಟ್ರು ಅಧಿಕೃತ ಮಾಹಿತಿ!

    ಶ್ರೀ ವಿಜಯ ದಾಸರ ಜೀವನಗಾಥೆ ; ಧ್ವನಿ ಸುರುಳಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

    ಪಂಡಿತ ಪೂಜ್ಯ ಸತ್ಯಧ್ಯಾನಾಚಾರ್ಯ ಕಟ್ಟಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಮಾಜಿ ಶಾಸಕ ಬಸವನಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್. ಎಂ. ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಲಹರಿ ವೇಲು ಚಿತ್ರತಂಡಕ್ಕೆ ಶುಭ ಹಾರೈಸಿದರು.

    ಇದನ್ನೂ ಓದಿ : 2ಡಿ, 3ಡಿ ಅಲ್ಲ ಇದು 5ಡಿ! ಎಸ್ಸ್​​. ನಾರಾಯಣ್​ 50ನೇ ಹಾಗೂ ನಟ ಆದಿತ್ಯ 25ನೇ ಸಿನಿಮಾ

    ಶ್ರೀ ವಿಜಯ ದಾಸರ ಜೀವನಗಾಥೆ ; ಧ್ವನಿ ಸುರುಳಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

    ಇನ್ನು ಚಿತ್ರಕ್ಕೆ ವಿಜಯಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ಸದ್ಯದಲ್ಲೆ ಸಿನಿಮಾ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts