More

    ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿ

    ಹನೂರು: ಶುಕ್ರವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆ ನಡೆದಿದ್ದು, ಗುರುವಾರ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದರು.


    ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯಲ್ಲಿನ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತಯಂತ್ರ, ಸಿಯು ಹಾಗೂ ಇನ್ನಿತರ ಅಗತ್ಯ ಸಲಕರಣೆಗಳನ್ನು ಪಡೆದುಕೊಂಡರು. ಬಳಿಕ ಅಧಿಕಾರಿಗಳಿಂದ ಅಗತ್ಯ ಸಲಹೆ ಸೂಚನೆಯನ್ನು ಪಡೆದು ಮಧ್ಯಾಹ್ನ 1.30ರ ಬಳಿಕ ಊಟದ ನಂತರ ಮತಗಟ್ಟೆಗಳಿಗೆ ತೆರಳಿದರು. ಕಾಡಂಚಿನ ಗ್ರಾಮ ಹಾಗೂ ಹೆಚ್ಚು ಅಂತರವಿರುವ ಗ್ರಾಮಗಳಿಗೆ ತೆರಳಲು ಮೊದಲ ಆದ್ಯತೆ ನೀಡಲಾಗಿತ್ತು. ಬಳಿಕ ಇತರ ಮತಗಟ್ಟೆಗಳಿಗೆ ವಾಹನಗಳು ತೆರಳಿದವ
    ಜಿಲ್ಲೆಯಲ್ಲಿಯೇ ಹೆಚ್ಚು ಮತದಾರರನ್ನು ಹೊಂದಿರುವ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,12,880 ಪುರುಷರು, 1,11,793 ಮಹಿಳೆ ಹಾಗೂ ಇತರ 10 ಸೇರಿದಂತೆ ಒಟ್ಟು 2,24,683 ಮತದಾರರಿದ್ದು, 254 ಮತಗಟ್ಟೆಗಳನ್ನು ತೆರೆಯಲಾಗಿದೆ. ಇದರಲ್ಲಿ ಮಹದೇಶ್ವರಬೆಟ್ಟ ತಪ್ಪಲಿನ ಕೊಕ್ಕಬರೆಯು ಹೊಸ ಮತಗಟ್ಟೆಯಾಗಿದೆ.


    ಮಾನವ-ವನ್ಯಜೀವಿ ಸಂಘರ್ಷವಿರುವ ಕಾಡಂಚಿನಲ್ಲಿ 39 ಮತಗಟ್ಟೆಗಳು ಹಾಗೂ ಮೊಬೈಲ್ ಸಂಪರ್ಕ ಸಿಗದ 13 ಸ್ಯಾಡೋ ಮತಗಟ್ಟೆಗಳನ್ನು ತೆರೆಯಲಾಗಿದೆ. ಜತೆಗೆ 47 ಸೂಕ್ಷ್ಮ ಹಾಗೂ ಅತೀಸೂಕ್ಷ್ಮ ಮತಗಟ್ಟೆಗಳಿವೆ. ಮತದಾನಕ್ಕೆ ಅಗತ್ಯವಾದ ಬಿಯು, ಸಿಯು ಹಾಗೂ ವಿವಿ ಪ್ಯಾಟ್‌ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮತಗಟ್ಟೆಗಳಿಗೆ 1,240 ಮತದಾನದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 28 ಸೆಕ್ಟರ್ ಅಧಿಕಾರಿಗಳು ಜತೆಗೆ ಮೈಕ್ರೋ ವೀಕ್ಷಕರು ಹಾಗೂ ಮಾಸ್ಟರ್ ಟ್ರೈನರನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳಿಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲಾಗಿದೆ.


    ಇನ್ನು ಸಾಮಾನ್ಯ ಮತಗಟ್ಟೆಗಳಿಗೆ 50 ಬಸ್, ಕಾಡಂಚಿನ ಮತಗಟ್ಟೆಗಳಿಗೆ 16 ಜೀಪ್‌ಗಳಿದ್ದು, ಇದರಲ್ಲಿ ಅರಣ್ಯ ಇಲಾಖೆಯ ಬೆಂಗಾವಲು ವಾಹನವೂ ಸೇರಿದೆ. ಒಂದು ಮಿನಿ ಬಸ್ ಬಳಕೆ ಮಾಡಿಕೊಳ್ಳಲಾಗಿದೆ. ಭದ್ರತೆಯ ದೃಷ್ಟಿಯಿಂದ ಒಬ್ಬರು ಡಿವೈಎಸ್ಪಿ, ನಾಲ್ವರು ಇನ್ಸ್‌ಪೆಕ್ಟರ್, 13 ಸಬ್ ಇನ್ಸ್‌ಪೆಕ್ಟರ್, 15 ಎಎಸೈ, ಮುಖ್ಯಪೇದೆ ಸೇರಿದಂತೆ 253 ಪೊಲೀಸರು, 156 ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿದಂತೆ 442 ಪೋಲಿಸರನ್ನು ನಿಯೋಜಿಸಲಾಗಿದ್ದು, ಇದರಲ್ಲಿ ಗುಜರಾತ್‌ನ 7 ಪೊಲೀಸ್ ಪಡೆಗಳಿವೆ. ಮುಂಜಾಗ್ರತಾ ಕ್ರಮವಾಗಿ 2 ಡಿಆರ್ ವಾಹನದಲ್ಲಿ 28 ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.


    4 ಸಖಿ ಮತಗಟ್ಟೆಗಳು: ಈ ಬಾರಿ ಹನೂರು ಹಾಗೂ ಪಿ.ಜಿ. ಪಾಳ್ಯದಲ್ಲಿ ಯುವ ಸೌರಭ ಮತಗಟ್ಟೆಯನ್ನು ತೆರೆದಿದ್ದರೆ, ಪೊನ್ನಾಚಿಯಲ್ಲಿ ಅರಣ್ಯ ಮತಗಟ್ಟೆ, ಸತ್ತೇಗಾಲದಲ್ಲಿ ಎಥ್ನಿಕ್ ಮತಗಟ್ಟೆ ಹಾಗೂ ಎಲ್ಲೇಮಾಳದಲ್ಲಿ ಅಂಗಲವಿಕಲರ ಮತಗಟ್ಟೆಯನ್ನು ತೆರೆಯಲಾಗಿದೆ. ಲೊಕ್ಕನಹಳ್ಳಿ ಹಾಗೂ ಚಿಕ್ಕಮಾಲಾಪುರದಲ್ಲಿ ಅನ್ನದಾತ ಮತಗಟ್ಟೆ, ರಾಚಪ್ಪಾಜಿ ನಗರ, ಅರ್ಧನಾರಿಪುರ, ಕೋಣನಕೆರೆ ಹಾಗೂ ಗಾಣಿಗಮಂಗಲದಲ್ಲಿ ಗಿರಿಜನರ ಮತಗಟ್ಟೆಯನ್ನು ತೆರೆದಿದ್ದರೆ ಕೌದಳ್ಳಿ, ಮಂಚಾಪುರ, ಹನೂರು, ಪಿ.ಜಿ.ಪಾಳ್ಯದಲ್ಲಿ ಸಖಿ ಮತಗಟ್ಟೆಯನ್ನು ತೆರೆಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts