More

    ಟೋಕಿಯೊ ಒಲಿಂಪಿಕ್ಸ್ ಸಿದ್ಧತೆ ಜತೆಗೆ ವಕೀಲ ವೃತ್ತಿಯತ್ತ ಶೂಟರ್ ಅಭಿಷೇಕ್ ವರ್ಮ ಚಿತ್ತ

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಸಿದ್ಧತೆಯಲ್ಲಿರುವ ಭಾರತದ ಸ್ಟಾರ್ ಶೂಟರ್ ಅಭಿಷೇಕ್ ವರ್ಮ, ಇದೀಗ ವಕೀಲ ವೃತ್ತಿ ಆರಂಭಿಸುವ ಸಲುವಾಗಿ ಭಾರತೀಯ ಬಾರ್ ಕೌನ್ಸಿಲ್ ಬಳಿ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ ತಿಂಗಳಿಂದಲೂ ಕೋವಿಡ್-19ರ ಲಾಕ್‌ಡೌನ್‌ನಲ್ಲೇ ಮುಳುಗಿರುವ ಅಭಿಷೇಕ್ ವರ್ಮ, ಚಂಡೀಗಢದಲ್ಲಿರುವ ತಮ್ಮ ಮನೆಯಲ್ಲೇ 10 ಮೀಟರ್ ಏರ್ ಪಿಸ್ತೂಲ್ ಅಭ್ಯಾಸ ಮಾಡುತ್ತಿದ್ದರು. ಇದೀಗ ವಕೀಲಿ ವೃತ್ತಿಗಾಗಿ ಲೈಸೆನ್ಸ್ ಪಡೆಯುವ ಸಲುವಾಗಿ ಅರ್ಜಿ ಹಾಕಿದ್ದಾರೆ.

    ಇದನ್ನೂ ಓದಿ: ಮೊಬೈಲ್​ ಕರೆಗಾಗಿ ಮರ ಏರಿದ್ದ ಅಂಪೈರ್​ ಊರಲ್ಲಿ ಈಗ ನೆಟ್​ವರ್ಕ್​ ಸಮಸ್ಯೆ ಇಲ್ಲ!

    ‘ನಾನು ವಕೀಲಿ ವೃತ್ತಿ ಆರಂಭಿಸುತ್ತೇನೆ, ಇದಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ’ ಎಂದು 2 ಬಾರಿ ವಿಶ್ವಕಪ್ ಸ್ವರ್ಣ ಪದಕ ವಿಜೇತ ತಿಳಿಸಿದ್ದಾರೆ. ಕರೊನಾ ವೈರಸ್ ಭೀತಿಯಿಂದ ಸಂಪೂರ್ಣ ಕ್ರೀಡಾ ಚಟುವಟಿಕೆಗಳೇ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮತ್ತೊಂದು ವೃತ್ತಿ ಆಯ್ದುಕೊಳ್ಳುವ ದೃಷ್ಟಿಯಿಂದ ವಕೀಲ ವೃತ್ತಿ ಅಭ್ಯಾಸಿಸಲು ಮುಂದಾಗಿದ್ದಾರೆ. ಸದ್ಯ ಯಾವುದೇ ಸ್ಪರ್ಧೆಗಳು ಇಲ್ಲ. ಬಹುತೇಕ ಮನೆಯಲ್ಲೇ ಇರುತ್ತೇನೆ. ಇದರಿಂದಾಗಿ ವಕೀಲ ವೃತ್ತಿ ಆರಂಭಿಸಬೇಕು ಎನಿಸಿತು ಎಂದು 30 ವರ್ಷದ ಶೂಟರ್ ಹೇಳಿದ್ದಾರೆ. 2018ರ ಏಷ್ಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಬಾರ್ ಕೌನ್ಸಿಲ್ ವತಿಯಿಂದ ನಡೆಯುವ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದು, ಬಳಿಕ ಹಿರಿಯ ವಕೀಲರ ಬಳಿ ಅಭ್ಯಾಸ ನಡೆಸುವುದಾಗಿ ಹೇಳಿದ್ದಾರೆ. ಸೈಬರ್ ಕ್ರೈಮ್ ಮತ್ತು ಕ್ರಿಮಿನಲ್ ವಕೀಲರಾಗುವುದು ಅವರ ಆಸೆಯಾಗಿದೆ.

    ಇದನ್ನೂ ಓದಿ: VIDEO | ಪತ್ನಿ ಮನ ಒಲಿಸಲು ಶಿಖರ್​ ಧವನ್​ ಡ್ಯಾನ್ಸ್​, ಕಾಲೆಳೆದ ಚಾಹಲ್​!

    ಕಳೆದ ಜನವರಿವರೆಗೂ ಗುರುಗ್ರಾಮದಲ್ಲೇ ಅಭಿಷೇಕ್ ಶರ್ಮ ಶೂಟಿಂಗ್ ಅಭ್ಯಾಸಿಸುತ್ತಿದ್ದರು. ಆದರೆ, ವಿದ್ಯುತ್ ಸಮಸ್ಯೆ ಎದುರಿಸಿದ ಹಿನ್ನೆಲೆಯಲ್ಲಿ ಸ್ನೇಹಿತನೊಬ್ಬ ಮಾಲ್‌ನಲ್ಲಿ ನಿರ್ಮಿಸಿದ್ದ ಶೂಟಿಂಗ್ ರೇಂಜ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರಂತೆ. ರಾಷ್ಟ್ರೀಯ ರೈಲ್ ಸಂಸ್ಥೆ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸುವ ಸಲುವಾಗಿ ಜುಲೈ 15 ರಂದು ಸಭೆ ಕರೆದಿದೆ.

    ಸಚಿನ್​ ಪೈಲಟ್​ ಜತೆಗೆ ಸಚಿನ್​ ತೆಂಡುಲ್ಕರ್​ ಟ್ವಿಟರ್​ ಟ್ರೆಂಡಿಂಗ್​ನಲ್ಲಿದ್ದಾರೆ, ಯಾಕೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts