More

    ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಿಧನ!; ಟ್ರೋಲ್​ ಆಗ್ತಿದೆ ಲೇಖಕಿ ಶೋಭಾ ಡೇ ಟ್ವಿಟರ್ ಪೋಸ್ಟ್​!

    ಎಡವಟ್ಟಾಗೋದು ಅಂದ್ರೆ ಇದಕ್ಕೇ ಇರಬೇಕು. ಪ್ರಸಿದ್ಧ ಲೇಖಕಿ ಶೋಭಾ ಡೇ ಮಾಡಿರೋ ಎಡವಟ್ಟು ಸಣ್ಣದೇನಲ್ಲ. ಅವರು ಮಾಡಿದ ಒಂದು ಸಣ್ಣ ಎಡವಟ್ಟು ಇದೀಗ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದ್ಯಾವ ಮಟ್ಟಿಗೆ ಅಂದರೆ, ನೆಟ್ಟಿಗರಿಂದ ಟ್ರೋಲ್​ಗೆ ಆಹಾರವಾಗುತ್ತಿದ್ದಾರೆ.

    ಇದನ್ನೂ ಓದಿ: VIDEO| ಚಿರು ಲಾಸ್ಟ್ ಟಿಕ್​ಟಾಕ್​ ಇದು; ನಿಧನದ ಬಳಿಕ ಫಾಲೋವರ್ಸ್ ದ್ವಿಗುಣ!

    ಹಾಗಾದರೆ ಅಷ್ಟಕ್ಕೂ ಆಗಿದ್ದೇನು? ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ನಿಧನದ ಬೆನ್ನಲ್ಲೇ, ಟಾಲಿವುಡ್​ನ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಫೋಟೋವನ್ನು ಟ್ವಿಟ್​ ಮಾಡಿ, ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಈ ಪೋಸ್ಟ್​ ಹಾಕುತ್ತಿದ್ದಂತೆ, ಒಂದಷ್ಟು ನೆಟ್ಟಿಗರು, ಸ್ಕ್ರೀನ್​ ಶಾಟ್​ ತೆಗೆದು, ಲೇಖಕಿ ಶೋಭಾ ಡೇ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ತಪ್ಪಿನ ಅರಿವಾಗಿ, ಟ್ವಿಟರ್​ನಿಂದ ಪೋಸ್ಟ್ ಡಿಲಿಟ್​ ಮಾಡಿದ್ದಾರೆ.

    ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಿಧನ!; ಟ್ರೋಲ್​ ಆಗ್ತಿದೆ ಲೇಖಕಿ ಶೋಭಾ ಡೇ ಟ್ವಿಟರ್ ಪೋಸ್ಟ್​!

    ಇದನ್ನೂ ಓದಿ: ಚಿರು-ಚೈತನ್ಯ ಹೊಸ ದಾಖಲೆ ಮಾಡಿದ್ದರು!

    ‘ಮತ್ತೊಬ್ಬ ಶೈನಿಂಗ್​ ಸ್ಟಾರ್, ಹೋದರು! ಭರಿಸಲಾಗದ ನಷ್ಟವಿದು. ಚಿರಂಜೀವಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ಟ್ವಿಟರ್​ನಲ್ಲಿ ಬರೆದುಕೊಂಡು, ಅದನ್ನು ಚಿರಂಜೀವಿ ಸರ್ಜಾಗೆ ಟ್ಯಾಗ್​ ಮಾಡಿದ್ದಾರೆ. ಸದ್ಯ ಈ ಪೋಸ್ಟ್ನ ಸ್ಕ್ರೀನ್ ಶಾಟ್ ಎಲ್ಲೆಡೆ ವೈರಲ್ ಆಗಿದ್ದು, ಟಾಲಿವುಡ್​ ಮೆಗಾಸ್ಟಾರ್ ಅಭಿಮಾನಿಗಳು ಲೇಖಕಿ ವಿರುದ್ಧ ಗರಂ ಆಗಿದ್ದಾರೆ. ಮತ್ತೊಂದೆಡೆ ರೀತಿಯ ತಪ್ಪಾಗಿ ಪೋಸ್ಟ್​ ಮಾಡಿದ್ದಕ್ಕೆ, ಅದಕ್ಕೆ ಪ್ರತಿಯಾಗಿ ಯಾವುದೇ ಮರು ಟ್ವಿಟ್​ಅನ್ನು ಶೋಭಾ ಡೇ ಮಾಡಿಲ್ಲ. (ಏಜೆನ್ಸೀಸ್​)

    ಚಿರಂಜೀವಿ ಅಗಲಿಕೆಗೆ ‘ಚಿರು’ ಚಿತ್ರದ ನಾಯಕಿ ಕೃತಿ ಖರಬಂದ ಭಾವುಕ ನುಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts