More

    ಟ್ವಿಟರ್ ವರ್ಸಸ್ ಥ್ರೆಡ್ಸ್​; ಮಾರ್ಕ್ ಜುಕರ್​ಬರ್ಗ್​ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ!

    ನವದೆಹಲಿ: ಸೋಷಿಯಲ್ ಮೀಡಿಯಾ ದಿಗ್ಗಜ ಫೇಸ್​ಬುಕ್​ನ ಮಾತೃ ಕಂಪನಿ ಆಗಿರುವ ಮೆಟಾ ನಿನ್ನೆ ತನ್ನ ಇನ್​ಸ್ಟಾಗ್ರಾಂ ಮೂಲಕ ಥ್ರೆಡ್ಸ್​​ ಆ್ಯಪ್​ ಅನಾವರಣಗೊಳಿಸಿದೆ. ಟ್ವಿಟರ್​​ಗೆ ಪರ್ಯಾಯ ಎನ್ನಲಾಗಿರುವ ಇದು ಬಿಡುಗಡೆ ಆಗುತ್ತಿದ್ದಂತೆ ಭರ್ಜರಿ ಡೌನ್​ಲೋಡ್​ಗಳನ್ನು ಕಂಡಿದೆ. ಇದೀಗ ಥ್ರೆಡ್ಸ್​ಗೆ ಸಂಬಂಧಿಸಿದಂತೆ ಮಾರ್ಕ್​ ಜುಕರ್​ಬರ್ಗ್​ಗೆ ಟ್ವಿಟರ್​ ಕಡೆಯಿಂದ ಕಾನೂನುಕ್ರಮದ ಎಚ್ಚರಿಕೆ ನೀಡಲಾಗಿದೆ.

    ಟ್ವಿಟರ್​ನ ಆಯಕಟ್ಟಿನ ಸ್ಥಾನದಲ್ಲಿದ್ದ ಕೆಲವು ಮಾಜಿ ಉದ್ಯೋಗಿಗಳನ್ನು ಮೆಟಾ ಕೆಲಸಕ್ಕೆ ತೆಗೆದುಕೊಂಡು ಟ್ವಿಟರ್​ನ ಒಳಗುಟ್ಟುಗಳನ್ನು ತಿಳಿಯಲು ಮುಂದಾಗಿದೆ ಎಂಬುದಾಗಿ ಮೆಟಾ ವಿರುದ್ಧ ಟ್ವಿಟರ್​ ಆರೋಪ ಮಾಡಿದ್ದು, ಈ ಕುರಿತಂತೆ ಕಾನೂನುಕ್ರಮ ಜರುಗಿಸುವುದಾಗಿ ಮಾರ್ಕ್ ಜುಕರ್​​ಬರ್ಗ್​ಗೆ ಪತ್ರವನ್ನು ಬರೆದು ಎಚ್ಚರಿಕೆಯನ್ನು ನೀಡಿದೆ.

    ಟ್ವಿಟರ್ ವ್ಯಾಪಾರ ರಹಸ್ಯಗಳು ಮತ್ತು ಐಪಿಗೆ ಪ್ರವೇಶ ಹೊಂದಿರುವ ಡಜನ್​ಗಟ್ಟೆ ಮಾಜಿ ಟ್ವಿಟರ್ ಉದ್ಯೋಗಿಗಳನ್ನು ಮೆಟಾ ನೇಮಿಸಿಕೊಂಡಿದ್ದು, ಇವರನ್ನು ಥ್ರೆಡ್ಸ್ ಆ್ಯಪ್​ ಅಭಿವೃದ್ಧಿಪಡಿಸುವಲ್ಲಿ ಮೆಟಾ ತನ್ನ ಅನುಕೂಲಕ್ಕಾಗಿ ಬಳಸಿಕೊಂಡಿದೆ ಎಂದು ಟ್ವಿಟರ್ ಆರೋಪಿಸಿದೆ.

    ಇದನ್ನೂ ಓದಿ: ಪ್ರೀತಿಸಿ ಮನೆ ಬಿಟ್ಟು ಹೋಗಿ ಮದ್ವೆಯಾದ ಮಗಳು; ನೊಂದು ಪ್ರಾಣ ಕಳ್ಕೊಂಡ ತಾಯಿ!

    ಥ್ರೆಡ್ಸ್​ ಆ್ಯಪ್​ ಟ್ವಿಟರ್​ನ ನಕಲು ಆಗಿದ್ದು, ಟ್ವಿಟರ್​​ನ ವ್ಯಾಪಾರ ರಹಸ್ಯಗಳು ಮತ್ತು ಇತರ ಗೌಪ್ಯ ಮಾಹಿತಿಗಳನ್ನು ಬಳಸುವುದನ್ನು ಮೆಟಾ ನಿಲ್ಲಿಸಬೇಕು, ಇದು ಕಾನೂನಿಗೆ ವಿರುದ್ಧವಾದುದು ಎಂದು ಟ್ವಿಟರ್ ಎಚ್ಚರಿಸಿದೆ. ಮತ್ತೊಂದೆಡೆ ಟ್ವಿಟರ್ ಆರೋಪವನ್ನು ಮೆಟಾ ನಿರಾಕರಿಸಿದೆ. ಈ ಹಿಂದೆ ಟ್ವಿಟರ್​ನಲ್ಲಿ ಕೆಲಸ ಮಾಡಿದ್ದ ಯಾರೂ ಥ್ರೆಡ್ಸ್​ನ ಇಂಜಿನಿಯರಿಂಗ್ ಟೀಮ್​ನಲ್ಲಿಲ್ಲ ಎಂದು ಮೆಟಾ ಸ್ಪಷ್ಟನೆ ನೀಡಿದೆ.

    ಬಸದಿಯಿಂದ ಇದ್ದಕ್ಕಿದ್ದಂತೆ ಜೈನಮುನಿ ನಾಪತ್ತೆ; ಭಕ್ತರಲ್ಲಿ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts