More

    ಚೆಕ್‌ಪೋಸ್ಟ್‌ಗಳಲ್ಲಿ ಹೈ ಅಲರ್ಟ್ ಇರಲಿ

    ಗಂಗಾವತಿ: ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರ ಅಂತ್ಯ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿ ಹೈಅಲರ್ಟ್ ಆಗಿದ್ದು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಭಾನುವಾರ ಸಂಚರಿಸಿ ಮಾಹಿತಿ ಪಡೆದುಕೊಂಡಿತು.

    ಪಕ್ಷದ ಕಚೇರಿ, ವಾರ್ಡ್ ಮತ್ತು ಕಾಲನಿಗಳಲ್ಲಿ ಸಂಚರಿಸಿ ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಂಡವರಿಗೆ ಎಚ್ಚರಿಕೆ ನೀಡಿದರು. ವಾಹನಗಳು ಮತ್ತು ಕಚೇರಿಗಳಲ್ಲಿದ್ದ ಧ್ವನಿವರ್ಧಕಗಳ ತೆರವಿಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.

    ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಪ್ರಚಾರ ಅಂತ್ಯದ ಬಗ್ಗೆ ಜನರಿಗೆ ಮಾಹಿತಿ ನೀಡಿದರಲ್ಲದಲೇ, ಚೆಕ್‌ಪೋಸ್ಟ್‌ಗಳಿಗೆ ತೆರಳಿ ಹೈ ಅಲರ್ಟ್ ಆಗಿ ಕಾರ್ಯ ನಿರ್ವಹಿಸಬೇಕು ಎಂದು ತಂಡಕ್ಕೆ ಸೂಚಿಸಿದರು. ಅಧಿಕಾರಿಗಳೊಂದಿಗೆ ಎಂಸಿಸಿ ತಂಡವೂ ಸಾಥ್ ನೀಡಿದ್ದು, ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಿತು.

    ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.


    ಮನೆಮನೆಗೆ ಭೇಟಿ

    ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಬೆಂಬಲಿಸುವ ಮನವಿ ಮಾಡಿತು. ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕುಟುಂಬಗಳನ್ನು ಸಂಪರ್ಕಿಸಿ, ಮತ ಯಾಚಿಸಿದರು. 15 ದಿನಗಳಿಂದಿದ್ದ ಪ್ರಚಾರ ಅಬ್ಬರ ಕೊಂಚ ತಣ್ಣಗಾಗಿದ್ದು, ಮುಖಂಡರೂ ನಿರುಮ್ಮಳರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts