More

    VIDEO: ಮೈದಾನಕ್ಕೆ ಸಹ ಆಟಗಾರನ ಶೂ ಕೊಂಡೊಯ್ದ ಸರ್ಫಾಜ್, ತಂಡದ ವಿರುದ್ಧ ಸಿಟ್ಟಾದ ಶೋಯಿಬ್​ ಅಖ್ತರ್​

    ಮ್ಯಾಂಚೆಸ್ಟರ್​: ಮಾಜಿ ನಾಯಕ ಸರ್ಫಾಜ್​ ಅಹಮದ್​ ಅವರಿಗೆ ತಂಡದಲ್ಲಿ ಸೂಕ್ತ ಸ್ಥಾನಮಾನ ನೀಡದೆ, ಅಗೌರವದಿಂದ ಕಾಣಲಾಗುತ್ತಿದೆ ಎಂದು ಪಾಕಿಸ್ತಾನದ ಹಿರಿಯ ಆಟಗಾರರು ಆರೋಪಿಸಿದ್ದಾರೆ. ತಂಡದ ಬ್ಯಾಟಿಂಗ್​ ವೇಳೆ ಇನಿಂಗ್ಸ್​ನ 71ನೇ ಓವರ್​ನಲ್ಲಿ ಸಹ ಆಟಗಾರ ಶಾಬಾದ್​ ಖಾನ್​ಗೆ ಸರ್ಫಾಜ್​ ಶೂ ತಂದುಕೊಟ್ಟಿದ್ದು ಹಿರಿಯ ಆಟಗಾರರಾದ ಶೋಯಿಬ್​ ಅಖ್ತರ್​ ಹಾಗೂ ರಶೀದ್​ ಲತೀಫ್ ಕೆಂಗಣ್ಣಿಗೆ ಗುರಿಯಾಗಿದೆ. 4 ವರ್ಷ ರಾಷ್ಟ್ರೀಯ ತಂಡ ಮುನ್ನಡೆಸಿರುವ ಆಟಗಾರನನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. 2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿ ಬಳಿಕ ಸರ್ಫಾಜ್​ ಅಹಮದ್​ 4 ವರ್ಷಗಳ ಕಾಲ ಪಾಕ್​ ತಂಡಕ್ಕೆ ನಾಯಕನಾಗಿದ್ದರು, ಇವರ ನಾಯಕತ್ವದಲ್ಲೇ ಪಾಕ್​ ತಂಡ 2017ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಐಸಿಸಿ ಚಾಂಪಿಯನ್​ಷಿಪ್​ ಟ್ರೋಫಿ ಜಯಿಸಿತ್ತು.

    ಇದನ್ನೂ ಓದಿ: ಸಾನಿಯಾ ಭೇಟಿಗೆ ಅವಕಾಶವಿಲ್ಲ, ನಿರಾಸೆಯಿಂದಲೇ ಇಂಗ್ಲೆಂಡ್‌ನತ್ತ ಮಲಿಕ್

    ಕರಾಚಿ ಹುಡುಗನನ್ನು ಈ ರೀತಿ ನಡೆಸಿಕೊಂಡಿದ್ದು, ಸರಿಯಲ್ಲ. ಇದು ನಿಜವಾಗಿಯೂ ತಪ್ಪು. ನಾಲ್ಕೂ ವರ್ಷ ಪಾಕಿಸ್ತಾನ ತಂಡ ಮುನ್ನಡೆಸಿದ ಆಟಗಾರನಿಗೆ ಈ ರೀತಿ ಕೆಲಸ ಹೇಳುವುದು ಎಷ್ಟು ಸರಿ ಎಂದು ಅಖ್ತರ್​ ಪ್ರಶ್ನಿಸಿದ್ದಾರೆ. ಒಂದು ವೇಳೆ ಸರ್ಫಾಜ್​ ಅವರಾಗಿಯೇ ಇಂಥ ಕೆಲಸ ಮಾಡಿದರೂ ಅದನ್ನು ತಡೆಯಬೇಕು. ಅವರಿಂದ ಇಂಥ ಕೆಲ ಮಾಡಿಸುವುದು ಸರಿಯಲ್ಲ ಎಂದು ಅಖ್ತರ್​ ಪಾಕಿಸ್ತಾನ ಮಿಡಿಯಾಗೆ ಹೇಳಿದ್ದಾರೆ. ಮೈದಾನಕ್ಕೆ ಶೂ ತೆಗೆದುಕೊಂಡು ಹೋಗಿ ಕೊಡುವುದು ತಪ್ಪಲ್ಲ. ಆದರೆ, ಒಬ್ಬ ಮಾಜಿ ನಾಯಕ ಕೊಡುವುದು ತಪ್ಪು ಎಂದಿದ್ದಾರೆ. ಇದಕ್ಕೆ ಮಾಜಿ ವಿಕೆಟ್​ ಕೀಪರ್​ ರಶೀದ್​ ಲತೀಫ್ ಕೂಡ ಧ್ವನಿಗೂಡಿಸಿದ್ದಾರೆ.

    ಇದನ್ನೂ ಓದಿ: ಕ್ಯಾನ್ಸರ್​ ಗೆದ್ದ ಭಾರತ ಪುರುಷರ ಹಾಕಿ ತಂಡದ ಮಾಜಿ ಕೋಚ್​ ಮೈಕಲ್​ ನೊಬ್ಸ್​..!

    ಮಾಜಿ ಆಟಗಾರರ ಟೀಕೆಗೆ ಪ್ರತಿಕ್ರಿಯಿಸಿರುವ ಕೋಚ್​ ಮಿಸ್ಬಾ ಉಲ್​ ಹಕ್​, ಸರ್ಫಾಜ್​ ಶೂ ತೆಗೆದುಕೊಂಡು ಹೋಗಿ ಕೊಟ್ಟಿರುವುದು ಅಗೌರವ ಸೂಚಕವಲ್ಲ. ಅವರೊಬ್ಬ ಉತ್ತಮ ಮನುಷ್ಯತ್ವ ಇರುವ ಆಟಗಾರ ಎಂದಿದ್ದಾರೆ. ಇದನ್ನೆ ಅಗೌರವ ಎಂದು ಭಾವಿಸುವುದು ತಪ್ಪು ಎಂದಿದ್ದಾರೆ. ಸರ್ಫಾಜ್​ ಅಹಮದ್​ 4 ವರ್ಷಗಳ ಕಾಲ ಪಾಕ್​ ತಂಡಕ್ಕೆ ನಾಯಕರಾಗಿದ್ದರು. 2019ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕನಿಷ್ಠ ಸೆಮಿಫೈನಲ್​ ಪ್ರವೇಶಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಬಳಿಕ ಅಜರ್​ ಅಲಿ ಅವರನ್ನು ಟೆಸ್ಟ್​ ತಂಡಕ್ಕೆ, ಬಾಬರ್​ ಅಜಮ್​ ಅವರನ್ನು ಏಕದಿನ, ಟಿ20 ತಂಡಕ್ಕೆ ನಾಯಕನಾಗಿ ನೇಮಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts