More

    ಸಾನಿಯಾ ಭೇಟಿಗೆ ಅವಕಾಶವಿಲ್ಲ, ನಿರಾಸೆಯಿಂದಲೇ ಇಂಗ್ಲೆಂಡ್‌ನತ್ತ ಮಲಿಕ್

    ಕರಾಚಿ: ಭಾರತದ ಟೆನಿಸ್ ತಾರೆ ಹಾಗೂ ಪತ್ನಿ ಸಾನಿಯಾ ಮಿರ್ಜಾ ಮತ್ತು ಪುತ್ರನನ್ನು ಭೇಟಿಯಾಗುವ ಸಲುವಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದನ್ನು ವಿಳಂಬಗೊಳಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯಿಬ್ ಮಲಿಕ್, ಕೊನೆಗೂ ನಿರಾಸೆಯಿಂದಲೇ ಕ್ರಿಕೆಟ್ ಜನಕರ ನಾಡಿಗೆ ಟಿ20 ಸರಣಿಯಲ್ಲಿ ಆಡಲು ಪ್ರಯಾಣಿಸಲಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧವನ್ನು ಭಾರತ ಇನ್ನೂ ಸಡಿಲಗೊಳಿಸದಿರುವ ಕಾರಣ ಮಲಿಕ್‌ಗೆ ಸಾನಿಯಾರನ್ನು ಭೇಟಿಯಾಗುವ ಅವಕಾಶ ದೊರೆತಿಲ್ಲ.

    ಆಗಸ್ಟ್ 28ರಿಂದ ನಡೆಯಲಿರುವ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಟಿ20 ಸರಣಿಗೆ ಪೂರ್ವಭಾವಿಯಾಗಿ ಶೋಯಿಬ್ ಮಲಿಕ್, ಎರಡು ಬಾರಿ ಕರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ. 2 ಬಾರಿಯೂ ನೆಗೆಟಿವ್ ವರದಿ ಬಂದರೆ ಅವರು ಆಗಸ್ಟ್ 15ಕ್ಕೆ ಮುನ್ನ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದು, ಸೌಥಾಂಪ್ಟನ್‌ನಲ್ಲಿ ಪಾಕಿಸ್ತಾನ ತಂಡವನ್ನು ಕೂಡಿಕೊಳ್ಳಲಿದ್ದಾರೆ.

    ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಹಾಲಿ ಟೆಸ್ಟ್ ಸರಣಿಯ ಬಳಿಕ ಆಗಸ್ಟ್ 28, 30 ಮತ್ತು ಸೆಪ್ಟೆಂಬರ್ 1ರಂದು 3 ಟಿ20 ಪಂದ್ಯಗಳು ಮ್ಯಾಂಚೆಸ್ಟರ್‌ನ ಜೈವಿಕ-ಸುರಕ್ಷಾ ವಾತಾವರಣದಲ್ಲಿ ನಡೆಯಲಿದೆ. ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಯುಎಇಯಲ್ಲಿ ಸಾನಿಯಾ ಮತ್ತು ಪುತ್ರ ಇಜಾನ್ ಜತೆಗೆ ಸ್ವಲ್ಪ ಸಮಯ ಕಳೆಯಲು ಬಯಸಿದ್ದ ಕಾರಣ ಮಲಿಕ್‌ಗೆ ತಡವಾಗಿ ತಂಡವನ್ನು ಕೂಡಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅವಕಾಶ ನೀಡಿತ್ತು.

    ಇದನ್ನೂ ಓದಿ: ಪುಟ್ಟ ಬಾಲಕಿಯ ಟೆನಿಸ್ ಆಟಕ್ಕೆ ಮನಸೋತ ಸಾನಿಯಾ ಮಿರ್ಜಾ!

    ಕರೊನಾ ವೈರಸ್ ಹಾವಳಿ ಮತ್ತು ಲಾಕ್‌ಡೌನ್‌ನಿಂದಾಗಿ ಮಲಿಕ್, ಭಾರತದ ಹೈದರಾಬಾದ್‌ನಲ್ಲಿರುವ ಸಾನಿಯಾ ಮತ್ತು ಒಂದು ವರ್ಷದ ಪುತ್ರನನ್ನು ಕಳೆದ ಫೆಬ್ರವರಿಯಿಂದಲೂ ಭೇಟಿಯಾಗಿಲ್ಲ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದ ಕಾರಣ ಅವರು ಪಾಕಿಸ್ತಾನದಲ್ಲೇ ಇದ್ದರೆ, ಸಾನಿಯಾ ಇತ್ತ ತವರಿನಲ್ಲಿ ತಂದೆ-ತಾಯಿ ಜತೆಗೆ ನೆಲೆಸಿದ್ದಾರೆ.

    ಯುಎಸ್​ ಓಪನ್​ ಆಡಲ್ಲ ಸಾನಿಯಾ, ಕಾದುನೋಡಲಿದ್ದಾರೆ ಬೋಪಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts