More

  ಶಿವಣ್ಣ- ಧನಂಜಯ್ ಚಿತ್ರದ ಮುಹೂರ್ತಕ್ಕೆ ದಿನಾಂಕ ಫಿಕ್ಸ್

  ಬೆಂಗಳೂರು: ಶಿವರಾಜಕುಮಾರ್​ ಮತ್ತು ‘ಡಾಲಿ’ ಧನಂಜಯ್​ ಅಭಿನಯದಲ್ಲಿ ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್​ ಮಿಲ್ಟನ್​ ಒಂದು ಹೊಸ ಚಿತ್ರವನ್ನು ನಿರ್ದೇಶಿಸುತ್ತಿರುವ ಸುದ್ದಿ ಗೊತ್ತೇ ಇದೆ. ಲಾಕ್​ಡೌನ್​ ಮುಗಿದ ತಕ್ಷಣವೇ ಈ ಚಿತ್ರದ ಘೋಷಣೆಯಾಗಿತ್ತು. ಇದೀಗ ಈ ಚಿತ್ರದ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದೆ.

  ಇದನ್ನೂ ಓದಿ: ಅವ್ರ ಸಿನ್ಮಾದಲ್ಲಿ ಇವ್ರು … ಇವ್ರ ಸಿನ್ಮಾದಲ್ಲಿ ಅವ್ರು

  ಅಂದರೆ, ನವೆಂಬರ್​ 19ರಂದು ಚಿತ್ರದ ಮುಹೂರ್ತ ನೆರವೇರಿಸಿಕೊಂಡು, ಅಧಿಕೃತವಾಗಿ ಸಿನಿಮಾ ಸೆಟ್ಟೇರಲಿದೆ. ಸಿನಿಮಾ ಶೀರ್ಷಿಕೆಯೂ ಅನಾವರಣವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಇದೇ ಚಿತ್ರಕ್ಕೆ ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್​ ಸೇರ್ಪಡೆಯಾಗಿದ್ದರು.

  ಅಂದಹಾಗೆ, ಈ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ಇದೀಗ ಭರದಿಂದ ಸಾಗಿದ್ದು, ಈಗಾಗಲೇ ‘ಭಜರಂಗಿ 2’ ಚಿತ್ರೀಕರಣ ಮುಗಿಸಿರುವ ಶಿವರಾಜಕುಮಾರ್​, ಮೊದಲಿಗೆ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರಂತೆ. ನಂತರದ ದಿನಗಳಲ್ಲಿ ಧನಂಜಯ್​ ಮತ್ತು ಪೃಥ್ವಿ ಅಂಬರ್​ ಚಿತ್ರೀಕರಣಕ್ಕೆ ಸೇರ್ಪಡೆಯಾಗಲಿದ್ದಾರೆ.

  ಇದನ್ನೂ ಓದಿ: ‘ಆಚಾರ್ಯ’ಗಾಗಿ ಹನಿಮೂನ್​ ಮುಗಿಸಿ ವಾಪಸ್ಸಾದ ಕಾಜಲ್​ ಅಗರ್​ವಾಲ್​

  ಈ ಹೆಸರಿಡದ ಚಿತ್ರವನ್ನು ಕೃಷ್ಣಸಾರ್ಥಕ್​ ನಿರ್ಮಿಸುತ್ತಿದ್ದು, ಅನೂಪ್​ ಸೀಳಿನ್​ ಸಂಗೀತ ಸಂಯೋಜಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ‘ಅಟ್ಟಹಾಸ’, ‘ಪೊಗರು’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ವಿಜಯ್​ ಮಿಲ್ಟನ್​, ಈ ಚಿತ್ರಕ್ಕೂ ಛಾಯಾಗ್ರಹಣ ಮಾಡುತ್ತಿದ್ದಾರಂತೆ. ಈ ಚಿತ್ರದ ಉಳಿದ ಪಾತ್ರವರ್ಗ ಹಾಗೂ ತಂತ್ರಜ್ಱರ ಪಟ್ಟಿ ಸದ್ಯದಲ್ಲೇ ಫೈನಲ್​ ಆಗಲಿದೆ.

  ಮೂರನೇ ಬಾರಿಗೆ ಕಂಗನಾಗೆ ಸಮನ್ಸ್​ ಕೊಟ್ಟ ಮುಂಬೈ ಪೊಲೀಸ್​ …

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts