More

    ಮನೆಗೆ ಯುಜಿಡಿ ಕಲ್ಪಿಸಿಕೊಳ್ಳದಿದ್ರೆ ನೀರು, ವಿದ್ಯುತ್ ಕಡಿತ: ಪಾಲಿಕೆ ಆಯುಕ್ತರ ಎಚ್ಚರಿಕೆ

    ಶಿವಮೊಗ್ಗ: ನಗರದಲ್ಲಿ ಒಳಚರಂಡಿ ಜೋಡಣೆ ಸಂಪರ್ಕಕ್ಕೆ ಪರವಾನಗಿ ಪಡೆಯದೆ ಗೃಹ, ವಾಣಿಜ್ಯ ಕಟ್ಟಡಗಳಿಗೆ ಸಂಪರ್ಕ ಕಲ್ಪಿಸಿಕೊಂಡಿದ್ದಲ್ಲಿ ತಕ್ಷಣವೇ ಸಕ್ರಮ ಮಾಡಿಕೊಳ್ಳಬೇಕು. ಕಾಲಮಿತಿಯಲ್ಲಿ ಸಂಪರ್ಕ ಪಡೆಯದೇ ಇದ್ದಲ್ಲಿ ಮನೆಗಳ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಎಚ್ಚರಿಕೆ ನೀಡಿದ್ದಾರೆ.

    ಮನೆಗೆ ಯುಜಿಡಿ ಕಲ್ಪಿಸಿಕೊಳ್ಳದಿದ್ರೆ ನೀರು, ವಿದ್ಯುತ್ ಕಡಿತ: ಪಾಲಿಕೆ ಆಯುಕ್ತರ ಎಚ್ಚರಿಕೆ
    ಚಿದಾನಂದ ವಟಾರೆ

    ನಗರದ ಜನತೆಯು ಮಹಾನಗರ ಪಾಲಿಕೆಯಿಂದ ಅನುಮತಿ ಪಡೆದು ಯುಜಿಡಿ ಸಂಪರ್ಕ ಹೊಂದಿ ಯೋಜನೆ ಲಾಭ ಪಡೆದುಕೊಳ್ಳಬೇಕು. ಪರಿವೀಕ್ಷಣೆಯ ಸಂದರ್ಭದಲ್ಲಿ ಅಕ್ರಮವೆಂದು ತಿಳಿದುಬಂದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದಿದ್ದಾರೆ.



    ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ 3ನೇ ಹಂತದ ಒಳಚರಂಡಿ ಯೋಜನೆ ಹಾಗೂ ಕೇಂದ್ರ ಸರ್ಕಾರವು ಅಮೃತ್ ಯೋಜನೆ ಮಂಜೂರು ಮಾಡಿದೆ. ಈ ಯೋಜನೆಯಡಿ 40 ವಸತಿ ಪ್ರದೇಶಗಳಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಯಲು ಪ್ರದೇಶದಲ್ಲಿ ಶೌಚ ಮಾಡುವುದರಿಂದ ಸ್ನಾನದ ಹಾಗೂ ಮನೆ ಬಳಕೆ ನೀರನ್ನು ರಸ್ತೆ ಹಾಗೂ ತೆರೆದ ಚರಂಡಿಗಳಲ್ಲಿ ಬಿಡುವುದರಿಂದ ಸೊಳ್ಳೆಗಳು ಹೆಚ್ಚಾಗಿಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ. ಹಾಗಾಗಿ ಸುರಕ್ಷತಾ ಕ್ರಮ ಕಂಡುಕೊಳ್ಳುವಂತೆ ಸೂಚಿಸಿದ್ದಾರೆ.


    ಎಲ್ಲ ವಿಧದ ಗೃಹ, ವಾಣಿಜ್ಯ ಉದ್ದೇಶದ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕವನ್ನು ಪಾಲಿಕೆಯಲ್ಲಿ ನೋಂದಾಯಿತ ಗುತ್ತಿಗೆದಾರರಿಂದ, ಪ್ಲಂಬಿಂಗ್ ಕೆಲಸಗಾರರಿಂದ ಒಳಚರಂಡಿ ಜೋಡಣೆ ಪಡೆಯುವ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು ಮತ್ತು ಪಾಲಿಕೆಗೆ 300 ರೂ. ಸಂಪರ್ಕ ಜೋಡಣೆ ಶುಲ್ಕ ಪಾವತಿಸಿ ಪರವಾನಗಿ ಪಡೆಯಬೇಕು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts