More

    ಫ್ರಾನ್ಸ್​ನ ಥ್ರೀ ಕಾಂಟಿನೆಂನ್ಟ್ಸ್​ ಫೆಸ್ಟಿವಲ್​ನಲ್ಲಿ ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ಗೆ ಪ್ರಶಸ್ತಿ

    ಬೆಂಗಳೂರು: ರಿಷಬ್ ಶೆಟ್ಟಿ ಫಿಲಂಸ್​ನಡಿ ರಿಷಬ್​ ಶೆಟ್ಟಿ ನಿರ್ಮಿಸಿರುವ ‘ಶಿವಮ್ಮ’ ಚಿತ್ರವು ಈಗಾಗಲೇ NFDC ಆಯೋಜಿತ ಫಿಲಂ ಬಜಾರ್​​ನ ವರ್ಕ್ ಇನ್ ಪ್ರೋಗ್ರೆಸ್​​ನಲ್ಲಿ ಜಯಿಸಿ, ಬೂಸಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈಗ ಆ ಚಿತ್ರಕ್ಕೆ ಫ್ರಾನ್ಸ್​ನ ನಾಂಟೆಸ್​ನಲ್ಲಿ ನೆಡೆದ 3 ಕಾಂಟಿನೆಂಟ್ಸ್ ಫೆಸ್ಟಿವಲ್​​ನಲ್ಲಿ ‘ಯುವ ತೀರ್ಪುಗಾರರ ಪ್ರಶಸ್ತಿ’ ಪಡೆದುಕೊಂಡಿದೆ.

    ಇದನ್ನೂ ಓದಿ: ವಿಜಯಾನಂದ ಚಿತ್ರದಲ್ಲಿ ವಿಭಿನ್ನ ಶೈನ್; ಉತ್ತರ ಕರ್ನಾಟಕದ ಘಾಟಿ ಹುಡುಗನ ಪಾತ್ರದಲ್ಲಿ ನಟನೆ

    ಫ್ರಾನ್ಸ್​ನ ಥ್ರೀ ಕಾಂಟಿನೆಂನ್ಟ್ಸ್​ ಫೆಸ್ಟಿವಲ್​ನಲ್ಲಿ ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ'ಗೆ ಪ್ರಶಸ್ತಿಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ೪೬ ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪರವನ್ನು ಭರವಸೆಯಿಂದ ಪಾಲಿಸುವ ಹೋರಾಟದ ಕಥೆ ಈ ‘ಶಿವಮ್ಮ’ ಚಿತ್ರದ್ದು.

    ಈ ಚಿತ್ರವು ಕೊಪ್ಪಳ ಜಿಲ್ಲೆಯ ಕುಕ್ನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಣ ವಾಗಿದ್ದು, ನಟರೆಲ್ಲ ಅದೇ ಊರಿನವರಾಗಿದ್ದು ಎಲ್ಲರೂ ಮೊದಲ ಬಾರಿ ಚಿತ್ರದಲ್ಲಿ ನಟಿಸಿರುವುದು ವಿಶೇಷ.

    ಇದನ್ನೂ ಓದಿ: ಕಿರುತೆರೆ ಜೊತೆ ಹಿರಿತೆರೆ ಜೊತೆಯಲಿ; ಡಬಲ್ ರೈಡಿಂಗ್​ನಲ್ಲಿ ತ್ರಿಬಲ್ ರೈಡಿಂಗ್ ಮೇಘಾ

    ‘ಶಿವಮ್ಮ’ ಚಿತ್ರವನ್ನು ಜೈಶಂಕರ್ ಅರ್ಯ ನಿರ್ದೇಶನ ಮಾಡಿದ್ದು, ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ನೊಂದವರನ್ನು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ; ‘ದಿ ಕಾಶ್ಮೀರ್​ ಫೈಲ್ಸ್​’ ವಿರುದ್ಧ ಟೀಕೆ ಮಾಡಿದ್ದ ಲ್ಯಾಪಿಡ್​ ಕ್ಷಮೆ ಯಾಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts