More

    ಕಾರವಾರ ಕಡಲಲ್ಲಿ ಅಪಾಯಕ್ಕೆ ಸಿಲುಕಿದ 8 ವಿಜ್ಞಾನಿಗಳು

    ಕಾರವಾರ: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಸಂಧೋಧನಾ ಹಡಗನ್ನು ಭಾರತೀಯ ಕೋಸ್ಟ್‌ಗಾರ್ಡ್‌ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದು,8 ವಿಜ್ಞಾನಿಗಳು ಸೇರಿ 36 ಜನರನ್ನು ಪ್ರಾಣಾಪಾಯದಿಂದ ಕಾಪಾಡಲಾಗಿದೆ.

    ಗೋವಾದ ರಾಷ್ಟ್ರೀಯ ಸಾಗರವಿಜ್ಞಾನ ಸಂಸ್ಥೆ(ಎನ್‌ಐಒ)ದ ಆರ್‌ವಿ ಸಿಂಧು ಸಾಧನಾ ಎಂಬ ನೌಕೆಯು ಗುರುವಾರ ಅರಬ್ಬಿ ಸಮುದ್ರದಲ್ಲಿ ಕಾರವಾರದಿಂದ ಸುಮಾರು 20 ನಾಟಿಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ತೊಂದರೆಗೀಡಾಗಿತ್ತು.

    ಇಂಜಿನ್ ಹಾಳಾಗಿ ಗಂಟೆಗೆ 3 ಕಿಮೀ ವೇಗದಲ್ಲಿ ಹೋಗುತ್ತಿತ್ತು. ಮುಳುಗುವ ಹಂತದಲ್ಲಿತ್ತು. 8 ವಿಜ್ಞಾನಿಗಳು ಸೇರಿ 36 ಸಿಬ್ಬಂದಿ ಇದ್ದರು. ರಕ್ಷಣೆಗೆ ಕೋಸ್ಟ್‌ ಗಾರ್ಡ್‌ಗೆ ಕರೆ ಮಾಡಲಾಗಿದ್ದು, ತಕ್ಷಣ ಗೋವಾದ ಕೋಸ್ಟ್ಗಾರ್ಡ್ ನೌಕೆ ಸುಜಿತ್ ಹಾಗೂ ಹೆಲಿಕಾಫ್ಟರ್‌ನಲ್ಲಿ ತೆರಳಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ನಂತರ ನೌಕೆಯನ್ನು ಗೋವಾ ಜಟ್ಟಿಗೆ ಎಳೆದೊಯ್ಯಲಾಗಿದೆ.

    ಇದನ್ನೂ ಓದಿ: ಕಾಳಿಂಗ ಸರ್ಪ ಸುರಕ್ಷಿತವಾಗಿ ಕಾಡಿಗೆ
    ಸಾಗರದಾಳದ ಪರಿಸರದ ಬಗ್ಗೆ ಎನ್‌ಐಒ ಅಧ್ಯಯನ ಮಾಡುತ್ತಿದ್ದು, ಸಿಂಧು ಸಾಧನಾ ನೌಕೆಯಲ್ಲಿ ನೂರಾರು ಕೋಟಿ ರೂ. ಮೌಲ್ಯದ ಅತ್ಯಾಧುನಿಕ ಸಮೀಕ್ಷಾ ಉಪಕರಣಗಳಿದ್ದವು. ಅಲ್ಲದೆ, ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ, ಭಾರಿ ಅಲೆ ಇರುವುದರಿಂದ ಹಡಗು ಅಪಘಾತಕ್ಕೀಡಾಗಿ, ಕಲ್ಲುಗಳಿಗೆ ಅಪ್ಪಳಿಸಿ ತೈಲ ಸೋರಿಕೆಯಾಗುವ ಅಪಾಯಕ್ಕಿತ್ತು.

    ಅದಕ್ಕಿಂತ 8 ವಿಜ್ಞಾನಿಗಳಿಗೆ ಅಪಾಯವಾಗುವ ಸಂಭವವಿತ್ತು. ಕೋಸ್ಟ್ಗಾರ್ಡ್ ಕ್ಷಿಪ್ರ ಕಾರ್ಯಾಚರಣೆಯಿಂದ ಅದನ್ನು ರಕ್ಷಿಸಲಾಗಿದೆ ಎಂದು ಕೋಸ್ಟ್ಗಾರ್ಡ್ ಪ್ರಕಟಣೆ ತಿಳಿಸಿದೆ.

    ರಕ್ಷಣೆಯ ವಿಡಿಯೋ ನೋಡಿ: https://t.co/TBeZoTEGdy
    (https://twitter.com/IndiaCoastGuard/status/1684559923563450368?t=eDR3pNFybPVJM12xdmCTxA&s=03

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts