More

    ನೀರಿನ ಕೊರತೆ: ಜಲ ವಾಹನಗಳಾಗಿ ಬದಲಾದ ರಾಸಾಯನಿಕ ಟ್ಯಾಂಕರ್‌ಗಳು!!

    ಕಾರವಾರ: ಮಾರ್ಚ್ ಅಂತ್ಯಕ್ಕೆ ತಾಲೂಕಿನ ಕೆಲವೆಡೆ ನೀರಿನ ಸಮಸ್ಯೆ ಉದ್ಭವಿಸಿದ್ದು, ಇನ್ನೆರಡು ವಾರದಲ್ಲಿ ತಾಲೂಕಿನಾದ್ಯಂತ ನೀರಿನ ಅಭಾವ ಗಂಭೀರ ಸಮಸ್ಯೆಯ ಮುನ್ಸೂಚನೆ ದೊರಕಿದೆ.
    18 ಗ್ರಾಮ ಪಂಚಾಯಿತಿಯನ್ನು ಹೊಂದಿರುವ ಕಾರವಾರ ತಾಲೂಕಿನಲ್ಲಿ ಸದ್ಯ ಘಾಡಸಾಯಿ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ನೀರಿನ ತೀವ್ರ ತುಟಾಗ್ರತೆ ಕಂಡುಬAದಿದೆ. ಹಳಗೆಜೂಗ ಹಾಗೂ ಬೋಳಶಿಟ್ಟಾ ಗ್ರಾಮಗಳ 265 ಮನೆಗಳ ಸುಮಾರು 600 ಜನಸಂಖ್ಯೆಗೆ ಪ್ರತಿ ದಿನ 2 ಸಾವಿರ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕರ್ ನೀರನ್ನು ನಿರಂತರವಾಗಿ ಪೂರೈಕೆ ಮಾಡಲಾಗುತ್ತಿದೆ. ಅದನ್ನು ಬಿಟ್ಟು ತೋಡೂರು ಗ್ರಾಪಂನಲ್ಲಿ, ಕಡವಾಡ ಗ್ರಾಪಂನ ಹಳೇಕೋಟ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬರುತ್ತಿದೆ. ಸ್ಥಳೀಯ ಗ್ರಾಪಂನಿಂದ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಆದರೆ, ಉಳಿದ ಹಲವೆಡೆಯೂ ಬಾವಿಗಳ ನೀರು ಉಪ್ಪಾಗುತ್ತಿದ್ದು, ಕೆಲವೆಡೆ ಬತ್ತುವ ಹಂತದಲ್ಲಿವೆ.
    ದಿನಬಿಟ್ಟು ದಿನ ನೀರು
    ಕಾರವಾರ ಶಹರಕ್ಕೆ ಸದ್ಯ ನೀರಿನ ಸಮಸ್ಯೆ ಇಲ್ಲದಿದ್ದರೂ ಒಂದೆರಡು ವಾರಗಳಲ್ಲಿ ಕೊರತೆ ಉಂಟಾಗುವ ಲಕ್ಷಣವಿದೆ. ಶಹರಕ್ಕೆ 45 ಕಿಮೀ ದೂರದ ಗಂಗಾವಳಿ ನದಿಯ ಹೊನ್ನಳ್ಳಿಯಿಂದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಸೀಬರ್ಡ್ ನೌಕಾ ಯೋಜನೆ, ಬಿಣಗಾದ ಗ್ರಾಸಿಂ ರಾಸಾಯನಿಕ ಕಾರ್ಖಾನೆ ಹಾಗೂ ಮಾರ್ಗದಲ್ಲಿರುವ ಅಮದಳ್ಳಿ, ತೋಡೂರು ಹಾಗೂ ಚೆಂಡಿಯಾ ಗ್ರಾಮ ಪಂಚಾಯಿತಿಗಳಿಗೂ ಇದೇ ನೀರು ಪೂರೈಸಲಾಗುತ್ತಿದೆ. ಗಂಗಾವಳಿಯ ನೀರಿನ ಗರಿವು ಗರಿಷ್ಠ 15 ರಿಂದ 20 ದಿನ ಬರುವಷ್ಟೇ ಇದೆ. ಹಾಗಾಗಿ ಈ ಎಲ್ಲ ಕಡೆಗಳಿಗೆ ದಿನಬಿಟ್ಟು ದಿನ ನೀರು ನೀಡುವ ಬಗ್ಗೆ ಜಲ ಮಂಡಳಿ ಮುನ್ಸೂಚನೆ ನೀಡಿದೆ. ಮುಂದಿನ ಒಂದುವರೆ ತಿಂಗಳ ಕತೆಯೇನು ಎಂಬ ಚಿಂತೆ ಕಾಡಿದೆ.
    ಉಪ್ಪು ನೀರಿನ ಸಮಸ್ಯೆ:
    ಸದ್ಯ ಕಾರವಾರದ ಕಾಳಿ ನದಿಯ ಎಡದಂಡೆಯ ಗ್ರಾಮಗಳಿಗೆ ಕೆರವಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಬಲದಂಡೆಯ ಗ್ರಾಮಗಳಿಗೆ ಗೋಟೆಗಾಳಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಕದ್ರಾ ಅಣೆಕಟ್ಟೆಯಿಂದ ಕಾಳಿ ನದಿಗೆ ನೀರು ಹೊರ ಬಿಡುವ ಪ್ರಮಾಣವನ್ನು ಕಡಿಮೆ ಮಾಡಿದರೆ, ಕಾಳಿ ನದಿಯಲ್ಲಿ ನೀರಿನ ಹರಿವಿನ ವೇಗ ಕಡಿಮೆಯಾಗಿ ಸಮುದ್ರದ ಉಬ್ಬರದ ಸಮಯದಲ್ಲಿ ಉಪು÷್ಪ ನೀರು ಕದ್ರಾ ಅಣೆಕಟ್ಟೆಯವರೆಗೂ ತಲುಪುತ್ತದೆ. ಆಗ ಈ ಎರಡೂ ಕುಡಿಯುವ ನೀರಿನ ಯೋಜನೆಗಳಿಗೆ ಉಪ್ಪು ನೀರಿನ ಸಮಸ್ಯೆ ಕಾಡಲಿದೆ.
    ಕಾರವಾರದ ಕಿನ್ನರ, ಹಣಕೋಣದ ಅಂಬಿಗವಾಡ ಸೇರಿ ವಿವಿಧೆಡೆ ಬಾವಿಗಳ ನೀರು ಈಗಾಗಲೇ ಉಪ್ಪಾಗಿದೆ. ಅವರೆಲ್ಲ ಸ್ಥಳೀಯ ಮೂಲಕಗಳಿಂದ ನೀರು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಒಂದೆರಡು ವಾರದಲ್ಲಿ ಆ ಎಲ್ಲ ಕಡೆಗೆ ಟ್ಯಾಂಕರ್ ನೀರು ಪೂರೈಕೆ ಅನಿವಾರ್ಯವಾಗುವ ಸಾಧ್ಯತೆ ಕಾಣುತ್ತಿದೆ.
    ಸೀಬರ್ಡ್‌ ಕೊರತೆ
    ಸೀಬರ್ಡ್ ನೌಕಾ ಯೋಜನೆಗೆ 6 ಎಂಎಲ್‌ಡಿ ನೀರು ಬೇಕು. ಅಲ್ಲಿರುವ ಕುಟುಂಬಗಳಿಗೆ ಮಾತ್ರವಲ್ಲದೇ ಯುದ್ಧ ನೌಕೆಗಳಿಗೆ ತುಂಬಿಸಲು ಸೀಬರ್ಡ್ ಯೋಜನೆಯ ಎರಡನೇ ಹಂತದ ನಿರ್ಮಾಣ ಕಾಮಗಾರಿಗಳಿಗೂ ದೊಡ್ಡ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ. 2019 ರಲ್ಲಿ ಭಾರಿ ಪ್ರಮಾಣದ ನೀರಿನ ಕೊರತೆ ಉಂಟಾಗಿ ಯುದ್ಧ ನೌಕೆಗಳನ್ನು ಮುಂಬೈಗೆ ಕಳಿಸಲಾಗಿತ್ತು. ಮಾತ್ರವಲ್ಲ ಮುಂಬೈನಿAದ ಟ್ಯಾಂಕರ್ ಮೂಲಕ ನೀರು ತರಲಾಗಿತ್ತು. ಈ ಬಾರಿಯೂ ಅದೇ ರೀತಿಯ ಸಮಸ್ಯೆ ಉಂಟಾಗುವ ಲಕ್ಷಣ ಕಾಣುತ್ತಿದೆ.

    ರಾಸಾಯನಿಕ ಟ್ಯಾಂಕರ್‌ಗಳಲ್ಲಿ ನೀರು!!

    ಬಿಣಗಾದ ಗ್ರಾಸಿಂ ಇಂಡಸ್ಟ್ರೀಯಲ್ಲಿ ಈ ಹಿಂದೆ ಅಲ್ಲಿನ ರಾಸಾಯನಿಕಗಳನ್ನು ತುಂಬಿಕೊಂಡು ಸಾಗುತ್ತಿದ್ದ ಮಲ್ಟಿ ಎಕ್ಸೆಲ್ ಬೃಹತ್ ಟ್ಯಾಂಕರ್‌ಗಳನ್ನು ಸ್ವಚ್ಛಗೊಳಿಸಿ ನೀರಿನ ಲಾರಿಗಳಾಗಿ ಪರಿವರ್ತಿಸಲಾಗಿದೆ. ಸುಮಾರು 33 ಕಿಮೀ ದೂರದ ಗೋಟೆಗಾಳಿಯಿಂದ ದಿನಕ್ಕೆ 15 ಕ್ಕೂ ಅಧಿಕ ಟ್ಯಾಂಕರ್‌ಗಳಲ್ಲಿ ನೀರನ್ನು ಕಾರ್ಖಾನೆಯ ಉಪಯೋಗಕ್ಕಾಗಿ ಸಾಗಿಸಲಾಗುತ್ತಿದೆ. ಕಾವಾರ-ಕದ್ರಾ ಮಾರ್ಗದಲ್ಲಿ ಹಗಲು ರಾತ್ರಿ ಟ್ಯಾಂಕರ್‌ಗಳ ಓಡಾಟ ಶುರುವಾಗಿದೆ.

    ಇದನ್ನೂ ಓದಿ: ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಕೋಶ ರಚನೆ



    ಸದ್ಯ ಕಾರವಾರದ ಘಾಡಸಾಯಿ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ನೀರಿನ ಸಮಸ್ಯೆ ಕಂಡುಬಂದಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಈಗಾಗಲೇ ತಹಸೀಲ್ದಾರ್ ಕಚೇರಿಯಿಂದ ಟೆಂಡರ್ ಕರೆದು ಎಲ್ಲ ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆ. ಸಮಸ್ಯೆ ಕಂಡುಬಂದಲ್ಲಿ ಬೇಡಿಕೆ ಸಲ್ಲಿಸಿದಲ್ಲಿ ತಕ್ಷಣ ಟ್ಯಾಂಕರ್ ನೀರು ಪೂರೈಸಲಾಗುವುದು.
    ಸತೀಶ
    ಕಾರವಾರ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts