More

    ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಕೋಶ ರಚನೆ

    ಕಾರವಾರ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾನೂನುಬಾಹಿರ ಮತ್ತು ಸುಳ್ಳು ಸುದ್ದಿಗಳು ಹರಡುವುದನ್ನು ನಿಯಂತ್ರಿಸಲು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಕೋಶಗಳನ್ನು ಎಲ್ಲ ಜಿಲ್ಲೆಗಳಲ್ಲಿ ತೆರೆಯಲಾಗಿದೆ.
    ಅಂರ್ತಜಾಲದಲ್ಲಿ ಪ್ರಕಟಗೊಳ್ಳುವ ಸುದ್ದಿಗಳು, ಪ್ರಸ್ತಕ ವಿದ್ಯಮಾನಗಳು ಮತ್ತು ಓಟಿಟಿ ಪ್ಲಾಟ್ ಫಾರಂನಲ್ಲಿನ ಸುಳ್ಳು ಸುದ್ದಿಗಳು ಹರಡುವುದನ್ನು ನಿಯಂತ್ರಿಸಲು ಸೈಬರ್ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ 24*7 ಕಾರ್ಯನಿರ್ವಹಿಸುವ ಜಿಲ್ಲಾ ಸೋಷಿಯಲ್ ಮೀಡಿಯಾ ಸೆಲ್‌ನ್ನು ರಚಿಸಲಾಗಿದೆ.
    ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಘಟಕದ ಇನ್ಸ್ಪೆಕ್ಟರ್ ನೋಡಲ್ ಅಧಿಕಾರಿಯಾಗಿರಲಿದ್ದಾರೆ. ಜಿಲ್ಲಾ ವಾರ್ತಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ, ಎನ್‌ಐಸಿ ಅಧಿಕಾರಿ, ಹಾಗೂ 2 ಜನ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಜಿಲ್ಲಾಽಕಾರಿ ಕಚೇರಿಯ ತಾಂತ್ರಿಕ ಸಮಾಲೋಚಕರು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
    ಈ ಕೋಶವು ಸಾಮಾಜಿಕ ಜಾಲತಾಣಗಳಾದ ಪೇಸ್ಬುಕ್, ವಾಟ್ಸಪ್, ಟ್ವಿಟರ್, ಟೆಲಿಗ್ರಾಂ, ಇನಸ್ಟಾಗ್ರಾಂ, ಯೂಟ್ಯೂಬ್, ವೆಬ್ ಚಾನೆಲ್‌ಗಳಲ್ಲಿ ಪ್ರಚಾರವಾಗುವ ಎಲ್ಲ ಬಗೆಯ ಸುದ್ದಿ ಮತ್ತು ಆಡಿಯೋ, ವಿಡಿಯೋ ಸಂದೇಶಗಳ ಮೇಲೆ ಹದ್ದಿನ ಕಣ್ಣು ಇಡಲಿದೆ.
    ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಪ್ರಕರಣಗಳು ಕಂಡು ಬಂದಲ್ಲಿ, ಸಂಬAಧಪಟ್ಟ ಸುದ್ದಿ ಅಥವಾ ವಿಡಿಯೋ ಪ್ರಸಾರದ ಮೂಲವನ್ನು ಪತ್ತೆಹಚ್ಚಿ, ಸಂಬಂಧಿಸಿದ ಲಿಂಕ್, ದಾಖಲೆ ಸಹಿತ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಪಡಿಸುವವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಪೊಲೀಸ್ ಕಾಯ್ದೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.

    ಇದನ್ನೂ ಓದಿ: ನೌಕಾನೆಲೆಯ ಮತಗಟ್ಟೆ ಸ್ಥಗಿತ: ಏಕೆ ಗೊತ್ತಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts