ಕಾಳಿಂಗ ಸರ್ಪ ಸುರಕ್ಷಿತವಾಗಿ ಕಾಡಿಗೆ

King cobra
Published on

ಯಲ್ಲಾಪುರ: ತಾಲೂಕಿನ ಬಿಳಕಿ ಸಮೀಪದ ಬಸವನಗುಂಡಿ ಬಳಿ ಕಾಣಿಸಿಕೊಂಡ ಕಾಳಿಂಗ ಸರ್ಪವೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

ಬಿಳಕಿ ಬಳಿಯ ಬಸವನಗುಂಡಿ ಗ್ರಾಮದಲ್ಲಿ ಹೊಲದ ಪಕ್ಕದಲ್ಲಿ ಒಣಗಿದ ಮರದ ಪೊಟರೆಯೊಂದರಲ್ಲಿ ಕಳೆದ 15 ದಿವಸಗಳಿಂದ ಕಾಳಿಂಗ ಸರ್ಪ ವಾಸವಾಗಿತ್ತು. ಸ್ಥಳೀಯ ರೈತರು ಹೊಲದತ್ತ ಹೋಗಲು ಭಯಪಡುವಂತಾಗಿತ್ತು.


ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಶಿರಸಿಯ ಉರಗಪ್ರೇಮಿ ಮಾಸೈಯ್ಯದ್ ಅವರನ್ನು ಕರೆಸಿ, ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ಆರ್‌ಎಫ್‌ಒಗಳಾದ ಅಮಿತ್ ಚೌಹಾಣ, ಶಿಲ್ಪಾ ನಾಯ್ಕ, ಡಿಆರ್‌ಎಫ್‌ಒ ಮಂಜುನಾಥ ಆಗೇರ, ಅರಣ್ಯ ರಕ್ಷಕರಾದ ಗಣೇಶ ಪವಾರ, ವನ್ಯಜೀವಿ ಸಂಶೋಧನಾ ತಂಡದ ರವಿ ಯಲ್ಲಾಪುರ, ಅಜಿಂಕ್ಯಾ ಕಾರ್ಯಾಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net