More

    ಅತಿ ಉದ್ದದ ‘ಶೇಷ್​​ನಾಗ್’ ರೈಲ್ವೆ ಸಂಚಾರ: ಭಾರತೀಯ ರೈಲ್ವೆಯ ಮತ್ತೊಂದು ಸಾಧನೆ

    ನವದೆಹಲಿ: ನಾಲ್ಕು ಖಾಲಿ ಬಿಒಎಕ್ಸ್​ಎನ್ ರೇಕ್‌ಗಳನ್ನು ಒಟ್ಟುಗೂಡಿಸಿ 2.8 ಕಿಲೋಮೀಟರ್ ಉದ್ದದ ರೈಲನ್ನು ಭಾರತೀಯ ರೈಲ್ವೆ ನಾಲ್ಕು ಸೆಟ್‌ಗಳ ವಿದ್ಯುತ್ ಲೋಕೋಮೋಟಿವ್‌ ಗಳ ಬಲದಿಂದ ನಡೆಸುವು ಮೂಲಕ  ಭಾರತೀಯ ರೈಲ್ವೆ ಮತ್ತೊಂದು ದಾಖಲೆ ನಿರ್ಮಿಸಿದೆ.
    ಈ ಅತಿ ಉದ್ದದ ರೈಲಿಗೆ ‘ಶೇಶ್‌ನಾಗ್’ ಎಂದು ಹೆಸರಿಡಲಾಗಿದ್ದು, ಇದು ಭಾರತೀಯ ರೈಲ್ವೆಯ ಸದ್ಯದ ಅತಿ ಉದ್ದದ ರೈಲು ಆಗಿದೆ.

    ಇದನ್ನೂ ಓದಿ : ಅತ್ಯಾಚಾರ ಯತ್ನದಲ್ಲಿ ವಿಫಲನಾದ ಕಾಮುಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಬೆಂಕಿ ಹಚ್ಚಿ ಕೊಲೆಗೈದ


    ರೈಲ್ವೆ ಸಚಿವ ಪಿಯೂಷ್ ಗೋಯಲ್ ಈ ಸಾಧನೆಯನ್ನು ಶ್ಲಾಘಿಸಿದ್ದು, ದಾಖಲೆಯ 2.8 ಕಿ.ಮೀ ಉದ್ದದ ಸರಕು ಸಾಗಣೆ ರೈಲನ್ನು ಭಾರತೀಯ ರೈಲ್ವೆ ಯಶಸ್ವಿಯಾಗಿ ನಿರ್ವಹಿಸಿದೆ. 4 ರೇಕ್‌ಗಳನ್ನು ಸಂಪರ್ಕಿಸುವ ಶೇಶ್​​​ನಾಗ್ ಹೆಸರಿನ ಉದ್ದದ ರೈಲು ಈ ಪ್ರಯೋಗ ಯಶಸ್ವಿಯಾಗಿದೆ. ಇದರಿಂದ ಏಕ ಕಾಲಕ್ಕೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೆಚ್ಚಿನ ಸರಕುಗಳನ್ನು ಕಳುಹಿಸಲು ಅವಕಾಶವಿದೆ ಎಂದು ಟ್ವೀಟ್ ಮಾಡಿದ್ದಾರೆ.
    ಶೆಶ್‌ನಾಗ್ ಸಂಚಾರ ಆರಂಭಗೊಂಡಿದ್ದು, ಸರಕು ಸಾಗಣೆಯನ್ನು ಹೆಚ್ಚಿಸಿದೆ. 4 ಸಂಯೋಜಿತ ರೈಲ್ವೆ ಸೇರಿ 251 ವ್ಯಾಗನ್‌ಗಳು ಒಟ್ಟು 2.8 ಕಿ.ಮೀ ನಾಗ್ಪುರ ಮತ್ತು ಕೊರ್ಬಾ ನಡುವೆ ಸಂಚರಿಸುತ್ತಿವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನ ಹಾರಾಟದ ಕುರಿತು ಕೇಂದ್ರ ಹೇಳಿರುವುದೇನು?

    ಭಾರತೀಯ ರೈಲ್ವೆಯ ವಲಯದಲ್ಲಿ ಆಗ್ನೇಯ ಮಧ್ಯ ರೈಲ್ವೆ ಅನನ್ಯ ಸಾಧನೆ ಮಾಡಿದೆ. ಕರೊನಾವೈರಸ್ ಹರಡುವಿಕೆ ತಡೆಗಟ್ಟಲು ಪ್ರಯಾಣಿಕ ರೈಲು ಸಂಚಾರ ರೈಲ್ವೆ ಸ್ಥಗಿತಗೊಂಡಿದ್ದರಿಂದಾಗಿ ಸರಕು ರೈಲುಗಳ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ.
    ಜೂನ್ 30 ರಂದು ರೈಲ್ವೆ ಸಚಿವಾಲಯವು ಸೂಪರ್ ಅನಾಕೊಂಡ ಹೆಸರಿನ 177 ಬೋಗಿಯ ಸರಕು ಸಾಗಣೆ ರೈಲು ಸಂಚಾರ ಆರಂಭಿಸಿತ್ತು ಎಂಬುದು ಉಲ್ಲೇಖನೀಯ ಎಂದು ವಿಭಾಗ ಟ್ವೀಟ್ ಮಾಡಿದೆ, “ಸರಕು ರೈಲುಗಳ ಸಾಗಣೆ ಸಮಯವನ್ನು ಕಡಿಮೆ ಮಾಡುವಲ್ಲಿ, ಎಸ್‌ಇಸಿಆರ್‌ನ ಬಿಲಾಸ್ಪುರ್ ವಿಭಾಗವು ಬಿಲಾಸ್ಪುರ್ ಮತ್ತು ಚಕ್ರಧರಪುರ ವಿಭಾಗಗಳ ಮೂಲಕ ‘ಅನಕೊಂಡ’ದ 3 ಲೋಡ್ ರೈಲುಗಳನ್ನು (15000 ಟನ್‌ಗಿಂತ ಹೆಚ್ಚು) ಸೇರಿಸಿ ಸಂಚಾರ ಆರಂಭಿಸುವ ಮೂಲಕ ಮತ್ತೊಂದು ಸಾಧನೆ ಮಾಡಿದೆ. 

    ರಕ್ಷಿಸಿ, ಸಾಕಿದಾಕೆ ಸತ್ತಳೆಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts