More

    ಮೊದಲ ವಿವಾಹ ವಾರ್ಷಿಕೋತ್ಸವ ಜತೆಗೆ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಯ ಖುಷಿ ಕಿತ್ತುಕೊಂಡ ಘೋರ ವಿಧಿ!

    ಚೆನ್ನೈ: ಮುಂದಿನ ವಾರವಷ್ಟೇ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ನೀಡಬೇಕಿತ್ತು. ಅದಕ್ಕಾಗಿ ಅತ್ತೆಯ ಮನೆಯಲ್ಲಿ ವಿಜೃಂಭಣೆಯಿಂದ ಸೀಮಂತ ಕಾರ್ಯ ನಡೆಸಲು ತಯಾರಿಯು ನಡೆದಿತ್ತು. ಇನ್ನೇನು ಮನೆಗೆ ಮತ್ತೊಂದು ಜೀವ ಆಗಮಿಸುತ್ತದೆ ಎಂಬ ಭಾರಿ ಆಸೆಯಲ್ಲಿದ್ದವರಿಗೆ ಕಳೆದ ಭಾನುವಾರ ಸಂಭವಿಸಿದ ದುರಂತ ಬರಸಿಡಿಲು ಬಡಿದಂತಾಗಿದೆ.

    ಭಾನುವಾರ ಗರ್ಭಿಣಿ ಸತ್ಯಪ್ರಿಯ (20) ಹಾಗೂ ಆಕೆಯ ಅತ್ತೆ ವಲ್ಲಿ ತಮಿಳುನಾಡಿನ ರಾಮನಾಥಪುರಂ-ರಾಮೇಶ್ವರಂ ಹೆದ್ದಾರಿ ಕ್ರಾಸ್​ ಮಾಡುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತ ಬೆನ್ನಲ್ಲೇ ಗಂಭೀರವಾಗಿ ಗಾಯಗೊಂಡಿದ್ದ ಸತ್ಯಪ್ರಿಯಳನ್ನು ಮದುರೈ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ಅಸುನೀಗಿದ್ದಳು. ಆಕೆಯ ಅತ್ತೆ ವಲ್ಲಿ ಇನ್ನೂ ಕೂಡ ಗಂಭೀರ ಸ್ಥಿತಿಯಲ್ಲಿದ್ದಾರೆ. ಸತ್ಯಪ್ರಿಯ ಪತಿ ಮಹೇಶ್ವರನ್​ (26) ಶುಕ್ರವಾರ (ನ.20) ನಡೆಯಬೇಕಿದ್ದ ಸೀಮಂತ ಸಮಾರಂಭಕ್ಕೆ ಆಗಮಿಸಬೇಕಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು. ಸಂಭವಿಸಿದ ದುರಂತದಲ್ಲಿ 5 ದಿನಕ್ಕೂ ಮುಂಚೆಯೇ ಮನೆಗೆ ದುಃಖ ಸಾಗರ ತುಂಬಿಕೊಂಡು ಓಡೋಡಿ ಬರುವಂತಾಯಿತು. ನೋವಿನಿಂದಲೇ ಪತ್ನಿ ಹಾಗೂ ಗರ್ಭದಲ್ಲಿದ್ದ ಮಗುವಿಗೆ ಅಂತ್ಯಸಂಸ್ಕಾರ ನಡೆಸಬೇಕಾಯಿತು.

    ಇದನ್ನೂ ಓದಿ: ಅಪಘಾತ ಬಗ್ಗೆ ಇದುವರೆಗೂ ನಟ ಶಶಿಕುಮಾರ್ ಹೇಳಿದ್ದು ಸುಳ್ಳಾ? ಅಸಲಿ ಕಾರಣ ತಿಳಿದ್ರೆ ಶಾಕ್​ ಆಗ್ತೀರಾ!​

    ಸತ್ಯಪ್ರಿಯ ಮತ್ತು ಅತ್ತೆ ವಲ್ಲಿ ಆಸ್ಪತ್ರೆಗೆ ತೆರಳಿ ಹೆರಿಗೆ ದಿನಾಂಕವನ್ನು ಖಚಿತಪಡಿಸಿಕೊಂಡು ಮನೆಗೆ ಮರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ನ. 25ಕ್ಕೆ ಹೆರಿಗೆ ದಿನಾಂಕ ನಿಗದಿಯಾಗಿತ್ತು. ಆದರೆ, ಸತ್ಯಪ್ರಿಯ ದುರಂತ ಸಾವಿಗೀಡಾಗಿದ್ದಾರೆ. ಶವಪರೀಕ್ಷೆಯ ಬಳಿಕ ಸತ್ಯಪ್ರಿಯಗೆ ಹುಟ್ಟುವ ಮಗು ಗಂಡು ಎಂದು ಗೊತ್ತಾಗಿದೆ. ಮಗು 2.5 ಕೆಜಿ ತೂಕವಿತ್ತಂತೆ. ಭಾರಿ ಆಸೆಯಲ್ಲಿದ್ದ ಪಾಲಕರಿಗೆ ಈ ವಿಚಾರ ತಿಳಿದು ಭಾರಿ ನಿರಾಸೆ ಅನುಭವಿಸಿದಂತಾಗಿದೆ.

    ಇನ್ನು ಸತ್ಯಪ್ರಿಯ ಸಾವಿಗೆ ಕಾರಿನ ಚಾಲಕನ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅದನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆಂದು ಸತ್ಯಪ್ರಿಯ ಪಾಲಕರು ಆರೋಪಿಸಿದ್ದಾರೆ. ಕಾರು ಪ್ರಭಾವಿ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಕಾರು ಗಂಟೆಗೆ 150 ಕಿ.ಮೀ ವೇಗದಲ್ಲಿ ಬರುತ್ತಿತ್ತು ಎಂದು ಹೇಳಲಾಗಿದೆ. ಸತ್ಯಪ್ರಿಯ ಮಾತ್ರವಲ್ಲದೆ ಮತ್ತೊಬ್ಬ ಮಹಿಳೆಗೂ ಕಾರು ಡಿಕ್ಕಿ ಹೊಡೆದಿದ್ದು, ಆಕೆಯು ಸಹ ಮೃತಪಟ್ಟಿರುವ ಮಾಹಿತಿ ತಿಳಿದುಬಂದಿದೆ. ಡಿಕ್ಕಿ ಹೊಡೆದ ಬಳಿಕವೂ ಕಾರು ನಿಲ್ಲಿಸದೇ ಅಲ್ಲಿಂದ ಪರಾರಿಯಾದ ಎಂದು ಪಾಲಕರು ದೂರಿದ್ದಾರೆ.

    ಮೌಲ್ಯ ಸಂಪೂರ್ಣ ಹದಗೆಟ್ಟಿರುವ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಆರೋಪಿಗಳ ವಿರುದ್ಧ ಹೋರಾಡುವಷ್ಟು ನಾವು ಬಲಿಷ್ಠರಾಗಿಲ್ಲ. ಇದೊಂದು ಆಕಸ್ಮಿಕ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗಂಭೀರ ಸ್ಥಿತಿಯಲ್ಲಿರುವ ವಲ್ಲಿ ಅವರ ಚಿಕಿತ್ಸೆಗೂ ಬೇಕಾದಷ್ಟು ಹಣವಿಲ್ಲ. ಹೀಗಾಗಿ ಈಗ ಏನು ನಡೆದಿದೆ ಅದರ ವಿರುದ್ಧ ಹೋರಾಡುವುದಿಲ್ಲ. ದುಃಖವನ್ನು ಬಿಟ್ಟು ಬೇರೆ ಏನೇ ಮಾಡುವಷ್ಟು ಬಲ ನಮ್ಮಲ್ಲಿ ಎಲ್ಲ ಎಂದು ಪಾಲಕರು ಅಸಹಾಯಕತೆ ಹೊರಹಾಕಿದ್ದಾರೆ. ಅಲ್ಲದೆ, ಆಸ್ಪತ್ರೆಯಲ್ಲೂ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: VIDEO| ಬಲೆಗೆ ಬಿತ್ತು ಭಾರಿ ಗಾತ್ರದ ಅನಕೊಂಡ: ವಿಡಿಯೋ ಬಗ್ಗೆ ನಿಜಾಂಶ ಗೊತ್ತಾದ್ರೆ ಅಚ್ಚರಿ ಖಂಡಿತ!

    ಮಹೇಶ್ವರನ್​ ಮತ್ತು ಸತ್ಯಪ್ರಿಯ ಕಳೆದ ಜನವರಿಯಲ್ಲಿ ಮದುವೆಯಾಗಿದ್ದರು. ಇಬ್ಬರದ್ದು ಪ್ರೇಮ ವಿವಾಹವಾಗಿತ್ತು. ಲಾಕ್​ಡೌನ್​ ಸಮಯದಲ್ಲಿ ಇಬ್ಬರು ಪರಸ್ಪರ ಅಚ್ಚಿಕೊಂಡಿದ್ದರು. ಒಬ್ಬರೊನ್ನೊಬ್ಬರು ಬಿಟ್ಟು ಇರಲಾರದಷ್ಟು ಪ್ರೀತಿಸುತ್ತಿದ್ದರು. ಆದರೆ, ವಿಧಿ ಇಬ್ಬರನ್ನು ಬೇರೆ ಮಾಡಿಬಿಟ್ಟಿತು. ಮೊದಲ ವಿವಾಹ ವಾರ್ಷಿಕೋತ್ಸವ ಮಾಡಿಕೊಳ್ಳಲು ವಿಧಿ ಬಿಡಲಿಲ್ಲ ಎಂದು ಪಾಲಕರು ಹಿಡಿಶಾಪ ಹಾಕಿದ್ದು, ಇಡೀ ಕುಟುಂಬ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. (ಏಜೆನ್ಸೀಸ್​)

    ಎರಡನೇ ಮಗುವಿಗೆ ಜನ್ಮ ನೀಡುವ ತಾಯಿಗೆ ಸರ್ಕಾರದಿಂದ 6 ಸಾವಿರ ರೂಪಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts