More

    ಶರ್ವಾನಂದ್, ರಶ್ಮಿಕಾ ಅಭಿನಯಕ್ಕೆ ಫಿದಾ ಆದ ನೆಟ್ಟಿಗರು! ಹೇಗಿದೆ ‘ಆಡವಾಳ್ಳು ಮೀಕು ಜೋಹಾರ್ಲು’?

    ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ಶರ್ವಾನಂದ್ ನಟಿಸಿರುವ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಾದ ಆಡವಾಳ್ಳು ಮೀಕು ಜೋಹಾರ್ಲು ಇಂದು ತೆರೆಗಪ್ಪಳಿಸಿದ್ದು, ಉತ್ತಮ ಪ್ರತಿಕ್ರಿಯೆ ಎನ್ನುವುದಕ್ಕಿಂತ ಟ್ವಿಟರ್​ನಲ್ಲಿ ಭೇಷ್ ಎನಿಸಿಕೊಂಡಿದೆ. ಹೌದು, ಈ ಚಿತ್ರ ವೀಕ್ಷಿಸಲು ತೆಲುಗಿನ ಎರಡು ರಾಜ್ಯಗಳಲ್ಲಿ ಸಾವಿರಾರು ಸಿನಿಪ್ರೇಕ್ಷಕರು ಥಿಯೇಟರ್‌ಗಳ ಬಳಿ ಜಮಾಯಿಸಿದ್ದು, ಸಿನಿಮಾ ನೋಡಿದ ನಂತರ ತುಂಬಾ ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.
    ಅಂದಹಾಗೆ, ಇಂದು ಪೂರ್ತಿ ಟ್ವಿಟರ್​ನಲ್ಲಿ ಆಡವಾಳ್ಳು ಮೀಕು ಜೋಹಾರ್ಲುಸಿನಿಮಾದ ಬಗ್ಗೆಯೇ ಮಾತುಕತೆ ನಡೆಯಿತು ಎಂಬಂತೆ ಕಾಣಿಸಿತು. #AdavalluMeekuJoharlu. #RashmikaMandanna, #Sharwanand ಎಂಬ ಹ್ಯಾಶ್​ಟ್ಯಾಗ್​ಗಳು ಇಂದು ಟ್ವಿಟರ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವು. ಈ ಸಿನಿಮಾದಲ್ಲಿ ಮಹಿಳೆಯರು ಪ್ರಾಮುಖ್ಯತೆಯನ್ನು ವಹಿಸುವುದರೊಂದಿಗೆ ಮತ್ತು ಬಹುತೇಕ ಎಲ್ಲಾ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ತೋರಿಸಿದ್ದಕ್ಕಾಗಿಚಿತ್ರವನ್ನು ಅಭಿಮಾನಿಗಳು, ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ . ನಟ ಶರ್ವಾನಂದ್ ಮತ್ತು ನಟಿ ರಶ್ಮಿಕಾ ಮೊದಲ ಬಾರಿಗೆ ಈ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದು ಅವರಿಬ್ಬರ ಕೆಮಿಸ್ಟ್ರಿ ಕೂಡಾ ನೆಟಿಜನ್‌ಗಳ ಮೆಚ್ಚುಗೆ ಪಡೆಯುತ್ತಿದೆ.
    ಅದರಲ್ಲಿಯೂ, ನಟ ರಶ್ಮಿಕಾ ಮಂದಣ್ಣ ಅವರ ಸಖತ್​ ಟ್ರೆಡಿಷನಲ್​ ಲುಕ್ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿರುವುದಂತೂ ನಿಜ. ಹೋಮ್ಲಿ ಲುಕ್​ನಲ್ಲಿ ಕರುನಾಡ ಕ್ರಶ್ ತುಂಬಾ ಚೆನ್ನಾಗಿ ಕಾಣಿಸುತ್ತಿರುವುದು ಹೈಲೈಟ್. ಈ ಸಿನಿಮಾದಲ್ಲಿ ನಾಯಕ ಶರ್ವಾನಂದ್ ಮದುವೆ ಆಗೋಕೆ ಪ್ರಯತ್ನಿಸುತ್ತಿರುತ್ತಾನೆ. ಆದರೆ, ಅದು ಸಾಧ್ಯವಾಗಲ್ಲ. ಇದೇ ಸಿನಿಮಾದ ಹೈಲೈಟ್ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಹಲವರು ಈ ಸಿನಿಮಾದಲ್ಲಿ ಪೋಷಕ ನಟರ ಹಾಸ್ಯವನ್ನು ಹಾಡಿ ಹೊಗಳಿದ್ದಾರೆ.
    ಚಿತ್ರದ ಮತ್ತೊಂದು ಹೈಲೈಟ್ ಅಂದರೆ ಅದು ನಟಿ ಖುಷ್ಬು, ನಟಿ ರಾಧಿಕಾ ಶರತ್‌ಕುಮಾರ್ ಅವರು ಅದ್ಭುತವಾದ ನಟನೆ ಎನ್ನಲಾಗಿದೆ. ಒಟ್ಟಿನಲ್ಲಿ ಆಡವಾಳ್ಳು ಮೀಕು ಜೋಹಾರ್ಲುಚಿತ್ರ ಪ್ರೇಕ್ಷಕರ ಮನಗೆದ್ದಿದೆ ಎಂಬಂತೆ ಕಾಣಿಸುತ್ತಿದೆ. ಹೌದು, ಭಾರತದಲ್ಲಿ ಮಾತ್ರವಲ್ಲ, ಯುಎಸ್‌ನಲ್ಲಿ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ತಿರುಮಲ ಕಿಶೋರ್ ಅವರ ನಿರ್ದೇಶನದ ಮತ್ತು ಎಸ್‌ಎಲ್‌ವಿ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ಸುಧಾಕರ್ ಚೆರುಕುರಿ ನಿರ್ಮಿಸಿದ ಈ ಸಿನಿಮಾಗೆ ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡಿದ್ದಾರೆ.

    ಶರ್ವಾನಂದ್, ರಶ್ಮಿಕಾ ಅಭಿನಯಕ್ಕೆ ಫಿದಾ ಆದ ನೆಟ್ಟಿಗರು! ಹೇಗಿದೆ 'ಆಡವಾಳ್ಳು ಮೀಕು ಜೋಹಾರ್ಲು'? ಶರ್ವಾನಂದ್, ರಶ್ಮಿಕಾ ಅಭಿನಯಕ್ಕೆ ಫಿದಾ ಆದ ನೆಟ್ಟಿಗರು! ಹೇಗಿದೆ 'ಆಡವಾಳ್ಳು ಮೀಕು ಜೋಹಾರ್ಲು'? ಶರ್ವಾನಂದ್, ರಶ್ಮಿಕಾ ಅಭಿನಯಕ್ಕೆ ಫಿದಾ ಆದ ನೆಟ್ಟಿಗರು! ಹೇಗಿದೆ 'ಆಡವಾಳ್ಳು ಮೀಕು ಜೋಹಾರ್ಲು'? ಶರ್ವಾನಂದ್, ರಶ್ಮಿಕಾ ಅಭಿನಯಕ್ಕೆ ಫಿದಾ ಆದ ನೆಟ್ಟಿಗರು! ಹೇಗಿದೆ 'ಆಡವಾಳ್ಳು ಮೀಕು ಜೋಹಾರ್ಲು'? ಶರ್ವಾನಂದ್, ರಶ್ಮಿಕಾ ಅಭಿನಯಕ್ಕೆ ಫಿದಾ ಆದ ನೆಟ್ಟಿಗರು! ಹೇಗಿದೆ 'ಆಡವಾಳ್ಳು ಮೀಕು ಜೋಹಾರ್ಲು'? ಶರ್ವಾನಂದ್, ರಶ್ಮಿಕಾ ಅಭಿನಯಕ್ಕೆ ಫಿದಾ ಆದ ನೆಟ್ಟಿಗರು! ಹೇಗಿದೆ 'ಆಡವಾಳ್ಳು ಮೀಕು ಜೋಹಾರ್ಲು'?

    ಗಾಲಿ ಪುತ್ರ ಕಿರೀಟಿ ಸಕಲಕಲಾವಲ್ಲಭ: ಮೊದಲ ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ಗಣ್ಯರು

    ಹೆಂಡತಿಯಷ್ಟು ಚಂದದ ಮಗಳು ಹುಟ್ಟಿದ್ದಾಳೆ: ರಿಷಬ್ ಶೆಟ್ಟಿ

    ಮತ್ತೆ ದೇವರಾದ ಸೋನು: ಭಾರತೀಯ ವಿದ್ಯಾರ್ಥಿಗಳಿಗೆ ಬಸ್, ಟ್ಯಾಕ್ಸಿ, ವಿಮಾನ ವ್ಯವಸ್ಥೆ! ವಿಡಿಯೋಗಳು ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts