More

    ಸ್ಟಾರ್ ಇನ್ವೆಸ್ಟರ್ಸ್​​ ವಿಜಯ್ ಕೇಡಿಯಾ, ಮುಕುಲ್ ಅಗರವಾಲ್ ಖರೀದಿಸಿದ ಷೇರು ವರ್ಷದಲ್ಲಿ 380% ಏರಿಕೆ; ಕಂಪನಿ ಲಾಭ 166% ಹೆಚ್ಚಳೊಂದಿಗೆ ಸ್ಟಾಕ್​ಗೆ ಬೇಡಿಕೆ

    ಮುಂಬೈ: ಷೇರುಪೇಟೆಯ ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರ ಷೇರು ಸೂಚ್ಯಂಕ ಗಮನಾರ್ಹ ಏರಿಕೆಯೊಂದಿಗೆ ಅಂತ್ಯಗೊಂಡಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೃಹತ್ ಔಷಧಗಳನ್ನು ತಯಾರಿಸಿ, ಸರಬರಾಜು ಮಾಡುವ ಕಂಪನಿಯಾಗಿದೆ ನ್ಯೂಲ್ಯಾಂಡ್​ ಲಾಬರೋಟರೀಸ್​ ಲಿಮಿಟೆಡ್​ (Neuland Laboratories Ltd,). ಈ ಕಂಪನಿಯ ಡಿಸೆಂಬರ್​ ತ್ರೈಮಾಸಿಕ (Q3FY24) ಫಲಿತಾಂಶಗಳ ಪ್ರಕಟಣೆಯ ನಂತರ, ಖರೀದಿದಾರರು ಈ ಮಲ್ಟಿಬ್ಯಾಗರ್ ಸ್ಟಾಕ್‌ ಖರೀದಿಗೆ ಮುಗಿಬಿದ್ದರು. ಈ ಸ್ಟಾಕ್ ಶುಕ್ರವಾರ ಇಂಟ್ರಾ ಡೇ ವಹಿವಾಟಿನಲ್ಲಿ 5 ಪ್ರತಿಶತದಷ್ಟು ಹೆಚ್ಚಾಯಿತು. ಮುಕುಲ್ ಅಗರ್​ವಾಲ್​ ಮತ್ತು ವಿಜಯ್ ಕೇಡಿಯಾ ಅವರಂತಹ ಸ್ಟಾರ್ ಹೂಡಿಕೆದಾರರು ಈ ಕಂಪನಿಯಲ್ಲಿ ಲಕ್ಷಾನುಗಟ್ಟಲೇ ಷೇರುಗಳನ್ನು ಖರೀದಿಸಿದ್ದಾರೆ.

    ನ್ಯೂಲ್ಯಾಂಡ್ ಲ್ಯಾಬೊರೇಟರೀಸ್ ಷೇರುಗಳ ಬೆಲೆ ಶುಕ್ರವಾರ ಅಂತಿಮವಾಗಿ 3.93 ಶೇಕಡಾ ಏರಿಕೆಯೊಂದಿಗೆ 6784 ರೂಪಾಯಿ ತಲುಪಿತು. ಈ ಕಂಪನಿಯ ಮಾರುಕಟ್ಟೆ ಬಂಡವಾಳ 8,698 ಕೋಟಿ ರೂ. ಇದೆ. ಈ ಸ್ಟಾಕ್ ಒಂದು ವರ್ಷದಲ್ಲಿ 380 ಪ್ರತಿಶತದಷ್ಟು ಮಲ್ಟಿಬ್ಯಾಗರ್ ಲಾಭವನ್ನು ಹೂಡಿಕೆದಾರರಿಗೆ ನೀಡಿದೆ.

    ಕಾರ್ಯಾಚರಣೆಗಳಿಂದ ಇದರ ಆದಾಯವು ಡಿಸೆಂಬರ್​ ಮೂರನೇ ತ್ರೈಮಾಸಿಕ ವರ್ಷದಿಂದ ವರ್ಷಕ್ಕೆ ಶೇಕಡಾ 45.89ರಷ್ಟು ಹೆಚ್ಚಾಗಿ 392.82 ಕೋಟಿಗಳಿಗೆ ತಲುಪಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಆದಾಯವು 269.25 ಕೋಟಿ ರೂ. ಇತ್ತು. ಡಿಸೆಂಬರ್ 3ನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ 166.50 ಪ್ರತಿಶತದಷ್ಟು ಹೆಚ್ಚಾಗಿ 81.39 ಕೋಟಿ ರೂ.ಗಳಿಗೆ ತಲುಪಿದೆ. ಹಿಂದಿನ ವರ್ಷ ಇದೇ ತ್ರೈಮಾಸಿಕದಲ್ಲಿ ಲಾಭವು 30.54 ಕೋಟಿ ರೂ. ಇತ್ತು.

    ಸ್ಟಾರ್ ಹೂಡಿಕೆದಾರ ಮುಕುಲ್ ಮಹಾವೀರ್ ಅಗರ್​ವಾಲ್ ಅವರು ಈ ಕಂಪನಿಯಲ್ಲಿ 3.12 ಶೇಕಡಾ ಪಾಲನ್ನು ಹೊಂದಿದ್ದಾರೆ. ಅವರು ಈ ಕಂಪನಿಯ 4 ಲಕ್ಷ ಈಕ್ವಿಟಿ ಷೇರುಗಳನ್ನು ಹೊಂದಿದ್ದಾರೆ. ಇನ್ನೊಬ್ಬ ಸ್ಟಾರ್ ಹೂಡಿಕೆದಾರ ವಿಜಯ್ ಕೇಡಿಯಾ ಅವರು ಈ ಕಂಪನಿಯಲ್ಲಿ 1.25 ಪ್ರತಿಶತ ಪಾಲನ್ನು ಹೊಂದಿದ್ದಾರೆ. ಅವರು ಈ ಕಂಪನಿಯ 1.6 ಲಕ್ಷ ಈಕ್ವಿಟಿ ಷೇರುಗಳನ್ನು ಹೊಂದಿದ್ದಾರೆ.

    ನ್ಯೂಲ್ಯಾಂಡ್ ಲ್ಯಾಬೊರೇಟರೀಸ್ ಲಿಮಿಟೆಡ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳೆರಡಕ್ಕೂ ಬೃಹತ್ ಪ್ರಮಾಣದಲ್ಲಿ ಔಷಧೀಯ ಉತ್ಪಾದನೆ ಮತ್ತು ಪೂರೈಕೆಯಲ್ಲಿ ತೊಡಗಿಸಿಕೊಂಡಿದೆ.

    52 ಸಣ್ಣ ಕಂಪನಿಗಳ ಷೇರುಗಳಿಗೆ ದೊಡ್ಡ ಬೇಡಿಕೆ: ಒಂದೇ ವಾರದಲ್ಲಿ ಹೂಡಿಕೆದಾರರು ಶ್ರೀಮಂತ!!

    ರಾವಲ್​ಗಾಂವ್ ಕ್ಯಾಂಡಿ ಬ್ರ್ಯಾಂಡ್ ಖರೀದಿಸಿದ ಮುಖೇಶ್​ ಅಂಬಾನಿ ನೇತೃತ್ವದ ರಿಲಯನ್ಸ್​

    ಅಗ್ಗದ ಬೆಲೆಗೆ ಚಿನ್ನ ಮಾರುತ್ತಿದೆ ಆರ್‌ಬಿಐ: ಫೆ. 12ರಿಂದ ಖರೀದಿ ಆರಂಭ, 5 ದಿನಗಳವರೆಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts