More

    52 ಸಣ್ಣ ಕಂಪನಿಗಳ ಷೇರುಗಳಿಗೆ ದೊಡ್ಡ ಬೇಡಿಕೆ: ಒಂದೇ ವಾರದಲ್ಲಿ ಹೂಡಿಕೆದಾರರು ಶ್ರೀಮಂತ!!

    ಮುಂಬೈ: ಕಳೆದ ವಾರದ ವಹಿವಾಟು ಭಾರತೀಯ ಷೇರು ಮಾರುಕಟ್ಟೆಗೆ ವಿಶೇಷವೇನಲ್ಲ. ಮಾರುಕಟ್ಟೆಯ ಪ್ರಮುಖ ಮಾನದಂಡ ಸೂಚ್ಯಂಕಗಳು ಹಿನ್ನಡೆ ಕಂಡವು. ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಟ್ರೆಂಡ್ ಕಂಡುಬರಲಿಲ್ಲ. ಆದರೂ, ಈ ಅವಧಿಯಲ್ಲಿ, 52 ಸ್ಮಾಲ್ ಕ್ಯಾಪ್ ಷೇರುಗಳು ತಮ್ಮ ಹೂಡಿಕೆದಾರರಿಗೆ ಎರಡು ಅಂಕಿಯ ಆದಾಯವನ್ನು ನೀಡಿವೆ. ಅಂದರೆ, ಒಂದೇ ವಾರದಲ್ಲಿ ಶೇ. 10ಕ್ಕೂ ಅಧಿಕ ಲಾಭ ನೀಡಿವೆ. ಇವುಗಳಲ್ಲಿ ಕೆಲವು ಷೇರುಗಳು ಶೇಕಡಾ 25 ಕ್ಕಿಂತ ಹೆಚ್ಚು ಆದಾಯವನ್ನು ನೀಡಿರುವುದು ವಿಶೇಷ.

    ಕಳೆದ ವಹಿವಾಟಿನ ವಾರದಲ್ಲಿ ಆಟೋಮೋಟಿವ್ ಸ್ಟಾಂಪಿಂಗ್ಸ್, ವಿಶಾಕಾ ಇಂಡಸ್ಟ್ರೀಸ್, ಗಣೇಶ್ ಹೌಸಿಂಗ್ ಕಾರ್ಪೊರೇಷನ್, ಜೈಸ್ವಾಲ್ ನೆಕೋ ಇಂಡಸ್ಟ್ರೀಸ್, ಸ್ನಿಡರ್ ಎಲೆಕ್ಟ್ರಿಕ್ ಸೇರಿದಂತೆ 52 ಸ್ಮಾಲ್ ಕ್ಯಾಪ್ ಷೇರುಗಳು ತಮ್ಮ ಹೂಡಿಕೆದಾರರಿಗೆ ಎರಡಂಕಿಯ ಆದಾಯವನ್ನು ನೀಡಿವೆ. ಈ ಮೂಲಕ ಈ ಕಂಪನಿಗಳಲ್ಲಿ ಹೂಡಿಕೆ ಮಾಡಿದವರು ಒಂದೇ ವಾರದಲ್ಲಿ ಸಾಕಷ್ಟು ಶ್ರೀಮಂತರಾಗಿದ್ದಾರೆ.

    ಆಟೋಮೋಟಿವ್ ಸ್ಟಾಂಪಿಂಗ್ಸ್ ಸ್ಮಾಲ್ ಕ್ಯಾಪ್ ಸ್ಟಾಕ್ ಪ್ರಬಲವಾದ ಆದಾಯವನ್ನು ನೀಡುವ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಇದು ಕಳೆದ ವ್ಯಾಪಾರ ವಾರದಲ್ಲಿ ತನ್ನ ಹೂಡಿಕೆದಾರರಿಗೆ 44% ಲಾಭವನ್ನು ನೀಡಿದೆ. ವಿಶಾಕಾ ಇಂಡಸ್ಟ್ರೀಸ್ ಷೇರುಗಳು 34% ಲಾಭವನ್ನು ನೀಡಿವೆ. ಜೈಸ್ವಾಲ್ ನೆಕೋ ಇಂಡಸ್ಟ್ರೀಸ್ ಷೇರುಗಳು 27% ನಷ್ಟು ಲಾಭವನ್ನು ನೀಡಿವೆ. ಇದರ ಹೊರತಾಗಿ, ಸ್ಮಾಲ್ ಕ್ಯಾಪ್ ಸ್ಟಾಕ್ ಸ್ನೀಡರ್ ಎಲೆಕ್ಟ್ರಿಕ್ 27% ಲಾಭ ನೀಡಿದೆ.

    ಸ್ಮಾಲ್ ಕ್ಯಾಪ್ ಸ್ಟಾಕ್‌ಗಳ ಹೊರತಾಗಿ, ಕೆಲವು ಮಿಡ್ ಕ್ಯಾಪ್ ಸ್ಟಾಕ್‌ಗಳಲ್ಲಿಯೂ ಅದ್ಭುತ ಬೆಳವಣಿಗೆ ಕಂಡುಬಂದಿದೆ, ವಿಶೇಷವಾಗಿ ಬ್ಯಾಂಕ್ ವಲಯದ ಷೇರುಗಳಲ್ಲಿ ಯೆಸ್ ಬ್ಯಾಂಕ್ ಅಂದಾಜು 32% ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 21% ನಷ್ಟು ಲಾಭವನ್ನು ನೀಡಿದೆ. ಇದರ ಹೊರತಾಗಿ, ಟೆಲಿಕಾಂ ವಲಯದ ಕಂಪನಿ ವೊಡಾಫೋನ್ ಐಡಿಯಾ ಅಂದಾಜು 32% ನಷ್ಟು ಲಾಭವನ್ನು ಮಾಡಿಕೊಟ್ಟಿದೆ.

    ಇದಲ್ಲದೆ, ಕಳೆದ ವಾರ ಉತ್ತಮ ಆದಾಯ ನೀಡಿದ ಷೇರುಗಳ ಬಗ್ಗೆ ಮಾತನಾಡುವುದಾದರೆ, ಬ್ಯಾಂಕಿಂಗ್ ವಲಯದಿಂದ ಎಸ್‌ಬಿಐ ಮುಂಚೂಣಿಯಲ್ಲಿದೆ. ಇದು ಶೇ. 11 ರಷ್ಟು ರಿಟರ್ನ್ ನೀಡಿದೆ. ಫಾರ್ಮಾಸ್ಯೂಟಿಕಲ್​ ವಲಯದ ಸನ್​ ಫಾರ್ಮಾ ಕಂಪನಿಯು ಶೇ. 8ರಷ್ಟು ಹಾಗೂ ಆಟೋ ವಲಯದ ಟಿವಿಸ್​ ಮೋಟಾರ್​ ಕಂಪನಿ ಶೇ. 4ರಷ್ಟು ಆದಾಯ ನೀಡಿದೆ.

    ರಾವಲ್​ಗಾಂವ್ ಕ್ಯಾಂಡಿ ಬ್ರ್ಯಾಂಡ್ ಖರೀದಿಸಿದ ಮುಖೇಶ್​ ಅಂಬಾನಿ ನೇತೃತ್ವದ ರಿಲಯನ್ಸ್​

    ಅಗ್ಗದ ಬೆಲೆಗೆ ಚಿನ್ನ ಮಾರುತ್ತಿದೆ ಆರ್‌ಬಿಐ: ಫೆ. 12ರಿಂದ ಖರೀದಿ ಆರಂಭ, 5 ದಿನಗಳವರೆಗೆ ಅವಕಾಶ

    ರೂ. 2 ಲಕ್ಷ ಹೂಡಿಕೆಯಾಯ್ತು 1 ಕೋಟಿ: 5200% ಲಾಭ ನೀಡಿದ ಮಲ್ಟಿಬ್ಯಾಗರ್​ ಷೇರಿಗೆ ಈಗಲೂ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts