More

    ರೂ. 42ರಿಂದ 900ಗೆ ಏರಿದೆ ಷೇರು ಬೆಲೆ: ಇನ್ನು ಸಾಲ ಮುಕ್ತವಾಗಲಿದೆ ಸ್ಟೀಲ್​ ಕಂಪನಿ, ಬ್ರೋಕರೇಜ್​ ಹೇಳುವುದೇನು?

    ಮುಂಬೈ: ಕಬ್ಬಿಣ ಮತ್ತು ಉಕ್ಕಿನ ವಲಯದ ಕಂಪನಿ ಜೈ ಬಾಲಾಜಿ ಇಂಡಸ್ಟ್ರೀಸ್ ಲಿಮಿಟೆಡ್ (Jai Balaji Industries Ltd.) ಷೇರುಗಳು ಹೂಡಿಕೆದಾರರಿಗೆ ಒಂದು ವರ್ಷದ ಅವಧಿಯಲ್ಲಿ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಆದರೂ, ಈ ಸ್ಟಾಕ್ ಮಾರ್ಚ್ ತಿಂಗಳಲ್ಲಿ ಶೇಕಡಾ 28 ರಷ್ಟು ಕುಸಿದಿದೆ. ವಾರದ ಮೊದಲ ವಹಿವಾಟಿನ ದಿನವಾದ ಮಂಗಳವಾರ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ.

    ಮಂಗಳವಾರದಂದು ಜೈ ಬಾಲಾಜಿ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳು 904.25 ರೂ. ಹಿಂದಿನ ದಿನಕ್ಕೆ ಹೋಲಿಸಿದರೆ ಇದು ಶೇಕಡಾ 1 ರಷ್ಟು ಹೆಚ್ಚಳವಾಗಿದೆ.

    ಮಾರ್ಚ್ 28, 2023 ರಂದು ಈ ಷೇರಿನ ಬೆಲೆ 42 ರೂ.ನಲ್ಲಿದ್ದರೆ, ಫೆಬ್ರವರಿ 27, 2024 ರಂದು, ಷೇರು ರೂ 1307 ತಲುಪಿತ್ತು. ಇದು ಕ್ರಮವಾಗಿ 52 ವಾರಗಳಲ್ಲಿ ಸ್ಟಾಕ್‌ನ ಅತ್ಯಂತ ಕನಿಷ್ಠ ಮತ್ತು ಗರಿಷ್ಠ ಬೆಲೆಯಾಗಿದೆ. ಹೀಗಾಗಿ ಒಂದು ವರ್ಷದ ಅವಧಿಯಲ್ಲಿ ಅಂದಾಜು 2,400 ರೂ.ಗಳಷ್ಟು ಏರಿಕೆ ಕಂಡಿದೆ.

    ಕೆಲವು ಬ್ರೋಕರೇಜ್ ಸಂಸ್ಥೆಗಳು ಇತ್ತೀಚೆಗೆ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿರುವ ಜೈ ಬಾಲಾಜಿ ಇಂಡಸ್ಟ್ರೀಸ್‌ನ ಸ್ಥಾವರಕ್ಕೆ ಭೇಟಿ ನೀಡಿದ್ದವು. ಡಿಐ ಪೈಪ್ಸ್, ಟಿಎಂಟಿ ಬಾರ್ ಮತ್ತು ಫೆರೋ ಅಲಾಯ್ಸ್ ಕುರಿತು ವರದಿಗಳನ್ನು ಪಡೆದಿದ್ದವು.

    ಉತ್ಪಾದನೆಗೆ ಸಂಬಂಧಿಸಿದಂತೆ ಈ ಕಂಪನಿಯ ಸಂಪೂರ್ಣ ಸಂಯೋಜಿತ ಕಾರ್ಯಾಚರಣೆಯನ್ನು ಪರಿಶೀಲಿಸಲಾಗಿದೆ. ಜೈ ಬಾಲಾಜಿ ಇಂಡಸ್ಟ್ರೀಸ್ ತನ್ನ ಡಿಐ ಪೈಪ್‌ಗಳ ಸಾಮರ್ಥ್ಯವನ್ನು 0.24 MTPA ಯಿಂದ 0.66 MTPA (ಮಿಲಿಯನ್​ ಟನ್​ ಪರ್​ ಅನ್ನಮ್​- ವರ್ಷಕ್ಕೆ ದಶಲಕ್ಷ ಟನ್​) ವರೆಗೆ ಮತ್ತು 0.13 MTPA ನಿಂದ 0.19 MTPA ವರೆಗೆ FY25 ರ ವೇಳೆಗೆ ಫೆರೋಅಲೋಯ್ಸ್ ಸಾಮರ್ಥ್ಯವನ್ನು ವಿಸ್ತರಿಸಲಿದೆ ಎಂದು ಬ್ರೋಕರೇಜ್ ಸಂಸ್ಥೆ ಆಕ್ಸಿಸ್ ಸೆಕ್ಯುರಿಟೀಸ್ ಹೇಳಿದೆ. ಮುಂದಿನ 18 ತಿಂಗಳಲ್ಲಿ ಸಾಲ ಮುಕ್ತವಾಗುವುದು ಕಂಪನಿಯ ತಂತ್ರವಾಗಿದೆ.

    ಇದೇ ಸಮಯದಲ್ಲಿ, ಜೈ ಬಾಲಾಜಿ ಇಂಡಸ್ಟ್ರೀಸ್ ನಿರ್ವಹಣೆಯು ಆಂತರಿಕ ಮೂಲಗಳಿಂದ ಸಾಲ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಯೆಸ್ ಸೆಕ್ಯುರಿಟೀಸ್ ಹೇಳಿದೆ. 2021 ರ ಹಣಕಾಸು ವರ್ಷದಲ್ಲಿ ಕಂಪನಿಯ ಸಾಲ 3,407.90 ಕೋಟಿ ಇತ್ತು. ಮುಂದಿನ 12-15 ತಿಂಗಳುಗಳಲ್ಲಿ ಕಂಪನಿಯು ನಿವ್ವಳ ನಗದು ಕಂಪನಿಯಾಗುವ ಗುರಿಯನ್ನು ಹೊಂದಿದೆ ಎಂದು ಬ್ರೋಕರೇಜ್ ಹೇಳಿದೆ.

     

    ರೂ. 2 ಲಕ್ಷ ಕೋಟಿಗೂ ಅಧಿಕ ಮೊತ್ತದ ಷೇರು ಹೊಂದಿರುವ ದಿಗ್ಗಜ ಹೂಡಿಕೆದಾರ: ಈತನ ಕಂಪನಿಯ ಷೇರು ಗುರಿ ಬೆಲೆ ಹೆಚ್ಚಿಸಿದ ಬ್ರೋಕರೇಜ್​ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts