More

    ಯೂನಿವರ್ಸ್​ ಬಾಸ್​​ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಸರಿಗಟ್ಟಿದ ಕಿಂಗ್​ ಕೊಹ್ಲಿ

    ಬೆಂಗಳೂರು: ಮಾರ್ಚ್​ 24ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್​ ನಡುವಿನ ಐಪಿಎಲ್​ ಪಂದ್ಯದಲ್ಲಿ ಆರ್​ಸಿಬಿ ತಂಡವು ರನ್​ ಮೆಷಿನ್ ವಿರಾಟ್​ ಕೊಹ್ಲಿ ಅರ್ಧಶತಕದ ನೆರವಿನಿಂದ 4 ವಿಕೆಟ್​ಗಳ ಜಯ ಸಾಧಿಸಿದ್ದು, ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.

    ಪಂಜಾಬ್​ ಕಿಂಗ್ಸ್​ ವಿಒರುದ್ಧದ ಪಂದ್ಯದಲ್ಲಿ ನಾಯಕ ಫಾಪ್​ ಡು ಪ್ಲೆಸಿಸ್​ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್​ 11 ಬೌಂಡರಿ, 2 ಸಿಕ್ಸರ್​ ಸಹಿತ 49 ಎಸೆತಗಳಲ್ಲಿ 77 ರನ್​ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಓವರ್​ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿದ ವಿರಾಟ್​ ಯೂನಿವರ್ಸ್​ ಬಾಸ್​ ಕ್ರಿಸ್​ ಗೇಲ್​ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

    70+ score

    ಇದನ್ನೂ ಓದಿ: ಮಮತಾ ಬ್ಯಾನರ್ಜಿ ಮೊದಲು ಅವರ ತಂದೆ ಯಾರೆಂದು ಕಂಡು ಹಿಡಿಯಲಿ: ಬಿಜೆಪಿ ಸಂಸದ

    ಈ 77 ರನ್​ಗಳೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 70ಕ್ಕೂ ಅಧಿಕ ರನ್ ​ಗಳಿಸಿದ ಬ್ಯಾಟರ್ ಎಂಬ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ಅಪರೂಪದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಐಪಿಎಲ್​ನಲ್ಲಿ ಕಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಪರ ಒಟ್ಟು 141 ಪಂದ್ಯಗಳನ್ನಾಡಿರುವ ಕ್ರಿಸ್ ಗೇಲ್ 26 ಬಾರಿ 70ಕ್ಕೂ ಅಧಿಕ ರನ್​​​ ಗಳಿಸಿ ದಾಖಲೆ ನಿರ್ಮಿಸಿದ್ದರು.

    ಇದೀಗ ಕ್ರಿಸ್​ ಗೇಲ್​ ಹೆಸರಿನಲ್ಲಿದ್ದ ಈ ಅಪರೂಪದ ದಾಖಲೆಯನ್ನು ವಿರಾಟ್​ ಕೊಹ್ಲಿ ಅಳಿಸಿ ಹಾಕಿದ್ದು, 231 ಇನಿಂಗ್ಸ್​ಗಳಲ್ಲಿ 27 ಬಾರಿ 70+ ರನ್​ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಬಾರಿ 70 ಕ್ಕಿಂತ ಅಧಿಕ ರನ್ ಬಾರಿಸಿದ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿರಾಟ್​ ಕೊಹ್ಲಿ ನಂತರ ಸ್ಥಾನಗಳಲ್ಲಿ ಕ್ರಿಸ್​ ಗೇಲ್​, ಡೇವಿಡ್​ ವಾರ್ನರ್​, ಶಿಖರ್​ ಧವನ್, ಕೆ.ಎಲ್​. ರಾಹುಲ್​ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts