More

    ರೂ. 2 ಲಕ್ಷ ಕೋಟಿಗೂ ಅಧಿಕ ಮೊತ್ತದ ಷೇರು ಹೊಂದಿರುವ ದಿಗ್ಗಜ ಹೂಡಿಕೆದಾರ: ಈತನ ಕಂಪನಿಯ ಷೇರು ಗುರಿ ಬೆಲೆ ಹೆಚ್ಚಿಸಿದ ಬ್ರೋಕರೇಜ್​ ಸಂಸ್ಥೆ

    ಮುಂಬೈ: ಹಿರಿಯ ಹೂಡಿಕೆದಾರ ರಾಧಾಕಿಶನ್ ದಮಾನಿ ಒಡೆತನದ ಕಂಪನಿಯಾದ ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್​ (Avenue Supermarts Ltd.) ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರುಗಳ ಬೆಲೆ ಮಂಗಳವಾರ ಇಂಟ್ರಾ ಡೇ ವಹಿವಾಟಿನಲ್ಲಿ ಶೇ. 5ರಷ್ಟು ಏರಿಕೆಯಾಗಿ 4507.70 ರೂ. ಮುಟ್ಟಿದವು. ಈ ಮೂಲಕ ಈ ಷೇರುಗಳ ಬೆಲೆ 52 ವಾರಗಳ ಗರಿಷ್ಠ ಮಟ್ಟ ತಲುಪಿತು.

    ಕಂಪನಿಯ ಷೇರುಗಳಲ್ಲಿ ಈ ಏರಿಕೆಯು ನವೀಕರಣದ ನಂತರ ಬಂದಿದೆ. ದೇಶೀಯ ಬ್ರೋಕರೇಜ್ ಸಂಸ್ಥೆಯಾದ ಐಸಿಐಸಿಐ ಸೆಕ್ಯುರಿಟೀಸ್, ಈ ಷೇರುಗಳ ರೇಟಿಂಗ್ ಅನ್ನು ಅಪ್‌ಗ್ರೇಡ್ ಮಾಡಿದೆ. ಈ ಕಂಪನಿಯ ಷೇರುಗಳನ್ನು ಖರೀದಿಸಲು ಸಲಹೆ ನೀಡಿದೆ. ಅವೆನ್ಯೂ ಸೂಪರ್‌ಮಾರ್ಟ್ಸ್ ಕಂಪನಿಯು ಚಿಲ್ಲರೆ ಸರಪಳಿ ಶಾಪಿಂಗ್​ ಮಾಲ್​ ಆಗಿರುವ ಡಿಮಾರ್ಟ್​ನ ಮೂಲ ಸಂಸ್ಥೆಯಾಗಿದೆ.

    ದೇಶೀಯ ಬ್ರೋಕರೇಜ್ ಸಂಸ್ಥೆಯಾದ ಐಸಿಐಸಿಐ ಸೆಕ್ಯುರಿಟೀಸ್ ಅವೆನ್ಯೂ ಸೂಪರ್ಮಾರ್ಟ್ಸ್ ಷೇರುಗಳ ಗುರಿ ಬೆಲೆಯನ್ನು 4800 ರೂ.ಗೆ ಹೆಚ್ಚಿಸಿದೆ. ಈ ಹಿಂದೆ ಈ ಕಂಪನಿಯ ಷೇರುಗಳಿಗೆ 4400 ರೂ. ಬೆಲೆ ನಿಗದಿಪಡಿಸಿತ್ತು.

    ಡಿಮಾರ್ಟ್​ ನಡೆಸುತ್ತಿರುವ ಅವೆನ್ಯೂ ಸೂಪರ್‌ಮಾರ್ಟ್ಸ್, ಮಧ್ಯಮಾವಧಿಯಲ್ಲಿ ನೆಸ್ಲೆ ಇಂಡಿಯಾವನ್ನು ಮೀರಿಸಬಹುದು ಎಂದು ಬ್ರೋಕರೇಜ್ ಸಂಸ್ಥೆ ಹೇಳುತ್ತದೆ. ನೆಸ್ಲೆ ಇಂಡಿಯಾ ಷೇರುಗಳ ಮೇಲೆ ಹೋಲ್ಡ್ ರೇಟಿಂಗ್ ಅನ್ನು ಐಸಿಐಸಿಐ ಸೆಕ್ಯುರಿಟೀಸ್ ಕಾಯ್ದುಕೊಂಡಿದೆ.

    ಅವೆನ್ಯೂ ಸೂಪರ್‌ಮಾರ್ಟ್ಸ್ ಐಪಿಒ ಅನ್ನು 8 ಮಾರ್ಚ್ 2017 ರಂದು ತೆರೆಯಲಾಗಿತ್ತು. ಕಂಪನಿಯ ಐಪಿಒ ಬೆಲೆ 295 ರಿಂದ 299 ರೂ. ಇತ್ತು. ಈ ಐಪಿಒ 104.48 ಪಟ್ಟು ಚಂದಾದಾರಿಕೆಯಾಗಿತ್ತು. ಕಂಪನಿಯ ಷೇರುಗಳು ಮಾರ್ಚ್ 21, 2017 ರಂದು 604.40 ರೂ. ಬೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗಿದ್ದವು.

    ಕಳೆದ 5 ವರ್ಷಗಳಲ್ಲಿ ಈ ಕಂಪನಿಯ ಷೇರುಗಳ ಬೆಲೆ 217% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ, ಈ ಷೇರುಗಳ ಬೆಲೆ 37 ಪ್ರತಿಶತದಷ್ಟು ಏರಿಕೆ ಕಂಡಿವೆ. ಕಳೆದ 6 ತಿಂಗಳುಗಳಲ್ಲಿ, ಅಂದಾಜು 25 ಪ್ರತಿಶತದಷ್ಟು ಏರಿವೆ. ಈ ಷೇರುಗಳ 52 ವಾರದ ಕನಿಷ್ಠ ಬೆಲೆ ರೂ 3300.30 ಇದೆ. ಅವೆನ್ಯೂ ಸೂಪರ್‌ಮಾರ್ಟ್ಸ್‌ನಲ್ಲಿ ಪ್ರವರ್ತಕರ ಪಾಲು ಶೇಕಡಾ 74.65 ರಷ್ಟು ಇದೆ. ಸಾರ್ವಜನಿಕ ಷೇರುಗಳು 25.35 ಪ್ರತಿಶತ ಇವೆ.

     

    ವಿದೇಶಿ ನಿಧಿಯ ಹೊರಹರಿವು, ದುರ್ಬಲ ಅಮೆರಿಕ ಮಾರುಕಟ್ಟೆ: ಬೆಂಚ್​ಮಾರ್ಕ್​ ಸೂಚ್ಯಂಕ ಕುಸಿತದ ನಡುವೆಯೂ ಸ್ಮಾಲ್, ಮಿಡ್​ಕ್ಯಾಪ್​ಗಳಲ್ಲಿ ಒಂದಿಷ್ಟು ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts