More

    ಐಪಿಒಗೆ ಭಾರಿ ಡಿಮ್ಯಾಂಡು: ಗ್ರೇ ಮಾರ್ಕೇಟ್​ನಲ್ಲಿ ರೂ 82 ಪ್ರೀಮಿಯಂ, ಹೂಡಿಕೆದಾರರಿಗೆ ಸಿಗಬಹುದು ದೊಡ್ಡ ಲಾಭ

    ಮುಂಬೈ: ಎಸ್​ಆರ್​ಎಂ ಕಾಂಟ್ರಾಕ್ಟರ್ಸ್ ಲಿಮಿಟೆಡ್​ (SRM Contractors Ltd.) ಐಪಿಒಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಪನಿಯ ಐಪಿಒ ಬಿಡ್​ ಪ್ರಾರಂಭವಾದ ಮೊದಲ ದಿನವೇ ಸಂಪೂರ್ಣ ಬುಕ್ ಆಗಿದೆ. ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ, ಈ ಐಪಿಒದಲ್ಲಿ ಚಿಲ್ಲರೆ ಹೂಡಿಕೆದಾರರು ಮತ್ತು ಸಾಂಸ್ಥಿಕವಲ್ಲದ ಹೂಡಿಕೆದಾರರಿಂದ (NIIs) ತಮ್ಮ ಷೇರುಗಳನ್ನು ಸಂಪೂರ್ಣವಾಗಿ ಬುಕ್ ಮಾಡುವುದರೊಂದಿಗೆ ಅಗಾಧ ಪ್ರತಿಕ್ರಿಯ ದೊರೆತಿದೆ. ಬಿಎಸ್​ಇ ಮಾಹಿತಿ ಪ್ರಕಾರ, ಈ ಐಪಿಒ ಚಂದಾದಾರಿಕೆ ಸ್ಥಿತಿಯು ಮಂಗಳವಾರ ಬೆಳಗ್ಗೆ 11:42ರವರೆಗೆ 78% ರಷ್ಟಿತ್ತು. ನಂತರ ಮಧ್ಯಾಹ್ನದ ಹೊತ್ತಿಗೆ ಚಿಲ್ಲರೆ ವಿಭಾಗದಲ್ಲಿ 1.11 ಬಾರಿ ಮತ್ತು ಎನ್​ಐಐ ವಿಭಾಗದಲ್ಲಿ 1.06 ಪಟ್ಟು ಚಂದಾದಾರಿಕೆಯಾಗಿದೆ.

    ಈ ಐಪಿಒದಲ್ಲಿ ಬಿಡ್​ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ.

    ಈ ಐಪಿಒದಲ್ಲಿ ಒಂದು ಷೇರಿನ ಬೆಲೆಯನ್ನು ರೂ. 200 ರಿಂದ ರೂ. 210 ರ ನಡುವೆ ನಿಗದಿಪಡಿಸಲಾಗಿದೆ. ಹೂಡಿಕೆದಾರರು 70 ಷೇರುಗಳಿರುವ ಕನಿಷ್ಠ ಒಂದು ಲಾಟ್​ಗೆ ಬಿಡ್‌ ಸಲ್ಲಿಸಬಹುದು,

    ಈ ಕಂಪನಿಯು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರಿಂಗ್ ಸಂಸ್ಥೆಯಾಗಿದೆ. ವಿವಿಧ ನಾಗರಿಕ ನಿರ್ಮಾಣ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ನಿರ್ಮಾಣ ಹಂತದಲ್ಲಿರುವ ರಸ್ತೆಗಳು (ಸೇತುವೆಗಳು ಸೇರಿದಂತೆ), ಸುರಂಗಗಳು, ಇಳಿಜಾರು ಸ್ಥಿರೀಕರಣ ಯೋಜನೆಗಳು ಮತ್ತು ಇತರ ಸಣ್ಣ-ಪ್ರಮಾಣದ ಯೋಜನೆಗಳನ್ನು ಒಳಗೊಂಡಿದೆ. ಕಂಪನಿಯ ಪ್ರವರ್ತಕರು ಆಶ್ಲೇ ಮೆಹ್ತಾ, ಪುನಿತ್ ಪಾಲ್ ಸಿಂಗ್ ಮತ್ತು ಸಂಜಯ್ ಮೆಹ್ತಾ.

    ಎಷ್ಟಿದೆ GMP?:

    InvestorGain.com ಪ್ರಕಾರ, ಈ ಐಪಿಒದಲ್ಲಿ ಷೇರಿನ ಗ್ರೇ ಮಾರುಕಟ್ಟೆ ಪ್ರೀಮಿಯಂ (GMP) ಈಗ 82 ರೂಪಾಯಿ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಈ ಐಪಿಒ ಷೇರು 292 ರೂ. ಬೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗಬಹುದಾಗಿದೆ. ಈ ರೀತಿಯಾದರ, ಹೂಡಿಕೆದಾರರಿಗೆ ಮೊದಲ ದಿನವೇ ಅಂದಾಜು 40% ಲಾಭ ದೊರೆಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts