More

    ರಕ್ಷಣಾ ಕಂಪನಿಯಿಂದ ಹೂಡಿಕೆದಾರರಿಗೆ ಡಬಲ್ ಬಹುಮಾನ: ಷೇರಿನ ಟಾರ್ಗೆಟ್​ ಪ್ರೈಸ್​ ಹೆಚ್ಚಿಸಿದ ಬ್ರೋಕರೇಜ್​

    ಮುಂಬೈ: ರಕ್ಷಣಾ ದೈತ್ಯ ಕಂಪನಿ ಹಾಗೂ ಮಿನಿರತ್ನ ಸ್ಥಾನಮಾನವನ್ನು ಹೊಂದಿರುವ ಭಾರತ್ ಡೈನಾಮಿಕ್ಸ್ ತನ್ನ ಹೂಡಿಕೆದಾರರಿಗೆ ಡಬಲ್ ಬಹುಮಾನಗಳನ್ನು ಘೋಷಿಸಿದೆ. ಈ ಸರ್ಕಾರಿ ಕಂಪನಿಯು (ಪಿಎಸ್‌ಯು) ಪ್ರತಿ ಷೇರಿಗೆ ರೂ 8.85 ರಷ್ಟು ಭಾರಿ ಲಾಭಾಂಶವನ್ನು ನೀಡಲಿದೆ. ಅಲ್ಲದೆ, ಶೀಘ್ರದಲ್ಲೇ ಸ್ಟಾಕ್​ ಸ್ಪ್ಲಿಟ್​ ಮಾಡಲಿದೆ.

    ಭಾರತ್ ಡೈನಾಮಿಕ್ಸ್ ಷೇರಿನ ಬೆಲೆಯು ರೂ. 1,685.65 ಕ್ಕೆ ಈಗ ಮುಟ್ಟಿದೆ. ರೂ 30,894.80 ಕೋಟಿಗಳ ಮಾರುಕಟ್ಟೆ ಮೌಲ್ಯದೊಂದಿಗೆ 1.5% ರಷ್ಟು ಏರಿಕೆಯಾಗಿದೆ. ವರ್ಷದ ಆರಂಭದಿಂದ ಇದುವರೆಗೆ ಈ ಸ್ಟಾಕ್ ಬೆಲೆ 2.4% ರಷ್ಟು ಇಳಿಕೆಯಾಗಿದೆ. ಆದರೆ, ಕಳೆದ 6 ತಿಂಗಳಲ್ಲಿ ಶೇ. 70ರಷ್ಟು ಲಾಭ ಗಳಿಸಿದೆ. ಒಂದು ವರ್ಷದಲ್ಲಿ, 86% ರಷ್ಟು ಏರಿಕೆ ಕಂಡಿದೆ.

    ಕಂಪನಿಯು 2023-24 ರ ಆರ್ಥಿಕ ವರ್ಷಕ್ಕೆ ರೂ 10 ಮುಖಬೆಲೆಯ ಪ್ರತಿ ಷೇರಿಗೆ ರೂ 8.85 ರ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಇದಕ್ಕಾಗಿಯೇ, ಮಧ್ಯಂತರ ಡಿವಿಡೆಂಡ್‌ಗಳ ಪಾವತಿಗೆ ಅರ್ಹ ಷೇರುದಾರರನ್ನು ನಿರ್ಧರಿಸಲು ಏಪ್ರಿಲ್ 2 ಅನ್ನು ದಾಖಲೆ ದಿನಾಂಕವಾಗಿ ನಿಗದಿಪಡಿಸಿದೆ. ಮಧ್ಯಂತರ ಲಾಭಾಂಶದ ಪಾವತಿಯು 18 ಏಪ್ರಿಲ್ 2024 ರ ಒಳಗಾಗಿ ಪೂರ್ಣಗೊಳ್ಳುತ್ತದೆ. ಇದು ಈ ಹಣಕಾಸು ವರ್ಷದ ಮೊದಲ ಮಧ್ಯಂತರ ಲಾಭಾಂಶವಾಗಿದೆ.

    1:2 ರ ಸ್ಟಾಕ್ ಸ್ಪ್ಲಿಟ್ ಅನುಪಾತವನ್ನು ಕಂಪನಿಯು ಘೋಷಿಸಿದೆ. ಅಂದರೆ ಅಸ್ತಿತ್ವದಲ್ಲಿರುವ 1 ಷೇರನ್ನು ಎರಡು ಹೊಸ ಷೇರುಗಳಾಗಿ ವಿಭಜಿಸಲಿದೆ. ಮುಖಬೆಲೆಯನ್ನು ಪ್ರತಿ ಷೇರಿಗೆ 10 ರಿಂದ 5 ರೂ.ಗೆ ಕಡಿತಗೊಳಿಸಲಾಗುವುದು. ಸ್ಟಾಕ್ ವಿಭಜನೆಯ ಹಿಂದಿನ ಕಾರಣವೆಂದರೆ ಬಂಡವಾಳ ಪುನರ್ರಚನೆಯ ಮೇಲಿನ ಮಾರ್ಗಸೂಚಿಗಳನ್ನು ಅನುಸರಿಸುವುದು; ಹಾಗೂ ಸಣ್ಣ ಹೂಡಿಕೆದಾರರ ವ್ಯಾಪಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು; ಮತ್ತು ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಈಕ್ವಿಟಿ ಷೇರುಗಳ ದ್ರವ್ಯತೆ ಹೆಚ್ಚಿಸುವುದ. ಇದು ಭಾರತ್ ಡೈನಾಮಿಕ್ಸ್‌ನ ಮೊದಲ ಷೇರು ವಿಭಜನೆಯಾಗಲಿದೆ.

    ಷೇರುದಾರರ ಅನುಮೋದನೆಯ ದಿನಾಂಕದಿಂದ ಸುಮಾರು 2-3 ತಿಂಗಳುಗಳಲ್ಲಿ ಷೇರು ವಿಭಜನೆಯನ್ನು ಪೂರ್ಣಗೊಳಿಸಲು ಕಂಪನಿ ಉದ್ದೇಶಿಸಿದೆ.

    ಟಾರ್ಗೆಟ್ ಪ್ರೈಸ್:

    “ಕ್ಷಿಪಣಿಗಳು, ಟಾರ್ಪಿಡೊಗಳು ಮತ್ತು ಕೌಂಟರ್‌ಮೀಷರ್ ವಿತರಣಾ ವ್ಯವಸ್ಥೆಗಳಂತಹ ಸ್ವದೇಶಿ ರಕ್ಷಣಾ ವೇದಿಕೆಗಳಿಗೆ ಹೆಚ್ಚುತ್ತಿರುವ ಬಂಡವಾಳದ ವೆಚ್ಚದಿಂದ ಲಾಭ ಪಡೆಯಲು ಈ ಕಂಪನಿ ಸಜ್ಜಾಗಿದೆ ಎಂದು ನಾವು ನಂಬುತ್ತೇವೆ. ಪ್ರತಿ ಷೇರಿಗೆ ರೂ 2010 ಗುರಿ ಬೆಲೆಯೊಂದಿಗೆ ಖರೀದಿಸಲು ನಾವು ಶಿಫಾರಸು ಮಾಡುತ್ತೇವೆ. ಇದು ಪ್ರಸ್ತುತ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಭಾರತ್ ಡೈನಾಮಿಕ್ಸ್‌ನಲ್ಲಿ 19.4% ಕ್ಕಿಂತ ಹೆಚ್ಚಳ ಸಾಧ್ಯತೆ ಸೂಚಿಸುತ್ತದೆ ಎಂದು ICICI ಡೈರೆಕ್ಟ್ ಬ್ರೋಕರೇಜ್​ ಸಂಸ್ಥೆ ಹೇಳಿದೆ.

    ಸುಳ್ಳು ಸುದ್ದಿ ತಂದ ಫಜೀತಿ: ಟಾಟಾ ಗ್ರೂಪ್​ನ ಈ ಸ್ಟಾಕ್ 2 ವಾರಗಳಲ್ಲಿ 38% ಕುಸಿತ; ಹೂಡಿಕೆದಾರಿಗೆ ರೂ. 20 ಸಾವಿರ ಕೋಟಿ ನಷ್ಟ

    ಮಗಳ ಗಾಯಕ್ಕೆ ಭಾರತೀಯ ವೈದ್ಯರಿಂದಲೇ ಚಿಕಿತ್ಸೆ: ಈ ನೈಜ ಘಟನೆ ಆನಂದ ಮಹೀಂದ್ರಾಗೆ ದೊಡ್ಡ ಪಾಠ ಕಲಿಸಿದ್ದು ಹೇಗೆ?

    ಬಹಳ ಗಲೀಜು ಇದೆ…: ಅಯೋಧ್ಯೆ ರೈಲು ನಿಲ್ದಾಣದ ವಿಡಿಯೋ ವೈರಲ್, ಗುತ್ತಿಗೆದಾರನಿಗೆ ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts