More

    ವಿದೇಶಿ ನಿಧಿಯ ಹೊರಹರಿವು, ದುರ್ಬಲ ಅಮೆರಿಕ ಮಾರುಕಟ್ಟೆ: ಬೆಂಚ್​ಮಾರ್ಕ್​ ಸೂಚ್ಯಂಕ ಕುಸಿತದ ನಡುವೆಯೂ ಸ್ಮಾಲ್, ಮಿಡ್​ಕ್ಯಾಪ್​ಗಳಲ್ಲಿ ಒಂದಿಷ್ಟು ಲಾಭ

    ಮುಂಬೈ: ನಿರಂತರ ವಿದೇಶಿ ನಿಧಿಯ ಹೊರಹರಿವು ಮತ್ತು ಮಿಶ್ರ ಜಾಗತಿಕ ಪ್ರವೃತ್ತಿಗಳ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳಲ್ಲಿ ನಷ್ಟದಿಂದಾಗಿ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಮಂಗಳವಾರ ಕುಸಿತ ಕಂಡವು.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 361.64 ಅಂಕಗಳು ಅಥವಾ 0.50 ರಷ್ಟು ಕುಸಿದು 72,470.30 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 468.91 ಅಂಕಗಳು ಅಥವಾ ಶೇಕಡಾ 0.64 ರಷ್ಟು ಕುಸಿದು 72,363.03 ಕ್ಕೆ ತಲುಪಿತ್ತು.

    ಎನ್​ಎಸ್ಇ ನಿಫ್ಟಿ ಸೂಚ್ಯಂಕವು 92.05 ಅಂಕಗಳು ಅಥವಾ 0.42 ರಷ್ಟು ಕುಸಿದು 22,004.70 ಕ್ಕೆ ತಲುಪಿತು.

    ಪವರ್‌ಗ್ರಿಡ್, ಭಾರ್ತಿ ಏರ್‌ಟೆಲ್, ವಿಪ್ರೋ, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಏಷ್ಯನ್ ಪೇಂಟ್ಸ್, ಇನ್ಫೋಸಿಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮೊದಲಾದ ಪ್ರಮುಖ ಷೇರುಗಳು ಹಿನ್ನಡೆ ಅನುಭವಿಸಿದವು. ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಲಾರ್ಸೆನ್ ಮತ್ತು ಟೂಬ್ರೊ, ಆಕ್ಸಿಸ್ ಬ್ಯಾಂಕ್, ಟಾಟಾ ಮೋಟಾರ್ಸ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಬಜಾಜ್ ಫಿನ್‌ಸರ್ವ್ ಷೇರುಗಳು ಲಾಭ ಗಳಿಸಿದವು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಟೋಕಿಯೊ ಹಿನ್ಡಡೆ ಕಂಡಿತು. ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಲಾಭ ಗಳಿಸಿದವು. ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿದವು. ಅಮೆರಿಕದ ವಾಲ್ ಸ್ಟ್ರೀಟ್ ಸೋಮವಾರ ಕುಸಿತ ಕಂಡಿತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 3,309.76 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ಮಾಹಿತಿ ನೀಡಿದೆ. ಹೋಳಿ ಹಬ್ಬದ ನಿಮಿತ್ತ ಸೋಮವಾರ ಷೇರುಪೇಟೆಗಳು ಮುಚ್ಚಿದ್ದವು.

    ಶುಕ್ರವಾರ, 30-ಷೇರು ಬಿಎಸ್‌ಇ ಸೆನ್ಸೆಕ್ಸ್ 190.75 ಅಂಕಗಳು ಅಥವಾ ಶೇಕಡಾ 0.26ರಷ್ಟು ಏರಿಕೆಯಾಗಿ 72,831.94 ಕ್ಕೆ ಮುಟ್ಟಿತ್ತು.. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 84.80 ಅಂಕಗಳು ಅಥವಾ ಶೇಕಡಾ 0.39ರಷ್ಟು ಏರಿಕೆಯಾಗಿ 22,096.75 ಕ್ಕೆ ತಲುಪಿತ್ತು.

    ಇತರೆ ಸೂಚ್ಯಂಕಗಳು:

    ಬಿಎಸ್​ಇ ಮಿಡ್​ಕ್ಯಾಪ್​ ಸೂಚ್ಯಂಕ: 39,075.87 (0.71% ಏರಿಕೆ)
    ಬಿಎಸ್​ಇ ಸ್ಮಾಲ್​​ಕ್ಯಾಪ್​ ಸೂಚ್ಯಂಕ: 42,726.22 (0.11% ಇಳಿಕೆ)
    ನಿಫ್ಟಿ ಮಿಡ್​ಕ್ಯಾಪ್​ 100 ಸೂಚ್ಯಂಕ: 47,807.65 (1.05% ಏರಿಕೆ)
    ನಿಫ್ಟಿ ಸ್ಮಾಲ್​ಕ್ಯಾಪ್​ 100 ಸೂಚ್ಯಂಕ: 15,118.35 (0.4% ಏರಿಕೆ)

    ರೂ. 500ರಿಂದ 25ಕ್ಕೆ ಕುಸಿದಿದ್ದ ರಿಲಯನ್ಸ್ ಷೇರು 8 ದಿನಗಳಲ್ಲಿ 35% ಹೆಚ್ಚಳ: ಅನಿಲ್​ ಅಂಬಾನಿಯ ಈ ಸ್ಟಾಕ್​ ಖರೀದಿಸಬೇಕೆ/ಮಾರಬೇಕೆ?

    ಐಪಿಒಗೆ ಭಾರಿ ಡಿಮ್ಯಾಂಡು: ಗ್ರೇ ಮಾರ್ಕೇಟ್​ನಲ್ಲಿ ರೂ 82 ಪ್ರೀಮಿಯಂ, ಹೂಡಿಕೆದಾರರಿಗೆ ಸಿಗಬಹುದು ದೊಡ್ಡ ಲಾಭ

    ರೂ. 125.ರಿಂದ 13 ರೂಪಾಯಿಗೆ ಕುಸಿದಿರುವ ಷೇರು: ಮಾರಾಟ ಮಾಡಲು ಸಲಹೆ ನೀಡಿದ್ದ ಬ್ರೋಕರೇಜ್​ ಸಂಸ್ಥೆ ಈಗ ರೇಟಿಂಗ್​ ಬದಲಿಸಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts