More

    ಶ್ರೀ ಮಲ್ಲೇಶ್ವರ ಸ್ವಾಮಿ ಅದ್ದೂರಿ ಜಾತ್ರೋತ್ಸವ

    ಹೊಳೆಹೊನ್ನೂರು: ಭದ್ರಾವತಿ ತಾಲೂಕಿನ ಮಲ್ಲಾಪುರದ ಪುರಾಣ ಪ್ರಸಿದ್ಧ ಶ್ರೀ ಗುಡ್ಡದ ಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಮಧ್ಯಾಹ್ನ ಸುಡುವ ಬಿಸಿಲನ್ನೂ ಲೆಕ್ಕಿಸದೆ ಮಹಿಳೆಯರು, ಮಕ್ಕಳು ಸೇರಿ ಭಕ್ತರು ಕೆಂಡ ಹಾಯ್ದರು. ಮಹಿಳೆಯರು ಬಾಯಿಗೆ ಬೀಗ ಚುಚ್ಚಿಸಿಕೊಂಡು ಸ್ವಾಮಿಗೆ ಹರಕೆ ತೀರಿಸಿದರು. ಹರಕೆ ಮಾಡಿಕೊಂಡವರು ಸ್ವಾಮಿ ಸನ್ನಿಧಾನದಲ್ಲಿ ಮಕ್ಕಳ ಜವಳ ತೆಗೆಸಿದರು.
    ಕೆಂಡಾರ್ಚನೆ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ವಿವಿಧ ಫಲ, ಪುಷ್ಪಗಳಿಂದ ಸಿಂಗರಿಸಿದ್ದ ರಥದಲ್ಲಿ ವಿರಾಜಮಾನವಾಗಿ ಕುಳಿತಿದ್ದ ಗುಡ್ಡದ ಮಲ್ಲೇಶ್ವರ ಸ್ವಾಮಿಯನ್ನು ಕಣ್ತುಂಬಿಕೊಂಡರು. ತಮ್ಮ ಕೋರಿಕೆಯನ್ನು ಬಾಳೆ ಹಣ್ಣಿನ ಮೇಲೆ ಬರೆದು ರಥದ ಕಳಸಕ್ಕೆ ಎಸೆದು ರಥ ಎಳೆದರು. ಮಹಿಳೆಯರು ಪಾರ್ವತಿ ದೇವಿಗೆ ಮಡಿಲಕ್ಕಿ ತುಂಬಿದರು. ಜಾತ್ರೆ ಪ್ರಯುಕ್ತ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಭಕ್ತರಿಗೆ ಗಾಡಿಗಳಲ್ಲಿ ಬೆಲ್ಲದ ಪಾನಕ, ಮಜ್ಜಿಗೆ, ಕೊಸಂಬರಿ ಹಂಚಿದರು. ಜಾತ್ರೆ ಪ್ರಯುಕ್ತ ಶಿವಮೊಗ್ಗ ರೊಟರಿ ರಕ್ತ ನಿಧಿ ಸಂಸ್ಥೆಯವರು ರಕ್ತದಾನ ಶಿಬಿರ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts