More

    ಗದಗ ತೋಂಟದಾರ್ಯ ಜಾತ್ರಾ ಪ್ರಾರಂಭೋತ್ಸವ

    ಗದಗ: ನಗರದ ಜಗದ್ಗುರು ತೋಂಟದಾರ್ಯ ಮಠದ 2024ನೇ ಜಾತ್ರಾ ಮಹೋತ್ಸವದ ಪ್ರಾರಂಭೋತ್ಸವ ಏ. 22ರಂದು ಸಂಜೆ 6.30ಕ್ಕೆ ಜರುಗಲಿದೆ.
    ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಂಡರಗಿ- ಬೈಲೂರು ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ಸ್ವಾಮೀಜಿ, ಭೈರನಹಟ್ಟಿ- ಶಿರೋಳದ ಶಾಂತಲಿಂಗ ಸ್ವಾಮೀಜಿ ಸಮ್ಮುಖ ವಹಿಸುವರು.
    ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ ಉದ್ಘಾಟಿಸುವರು. ಕುಂದರಗಿ ಚರಂತಿಮಠದ ವೀರ ಸಂಗಮೇಶ್ವರ ಸ್ವಾಮೀಜಿ ಅವರಿಗೆ ಗೌರವ ಸಮ್ಮಾನ ಜರುಗುವುದು. ಬಸವನ ಬಾಗೇವಾಡಿಯ ಶಿಕ್ಷಕ ಅಶೋಕ ಅಂಚಲಿ ಉಪನ್ಯಾಸ ನೀಡುವರು.
    ಕಲಬುರಗಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಬಸವರಾಜ ಸಬರದ ಅವರು ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟವಾದ ಗ್ರಂಥಗಳನ್ನು ಬಿಡುಗಡೆಗೊಳಿಸುವರು. ಹುಬ್ಬಳ್ಳಿಯ ಸಂಗೀತ ಕಲಾವಿದರಾದ ಸೌಮ್ಯ ಮತ್ತು ಮಂಜುನಾಥ ಹೊಸವಾಳ ಅವರಿಂದ ವಚನ ಸಂಗೀತ ನೆರವೇರುವುದು.

    ತೇರಿನ ಕಳಸಾರೋಹಣ ಕಾರ್ಯಕ್ರಮ
    ನಗರದ ಜಗದ್ಗುರು ತೋಂಟದಾರ್ಯ ಮಠದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ತೇರಿನ ಕಳಸಾರೋಹಣವು ಬಸವೇಶ್ವರರ ಪ್ರಾರ್ಥನೆ, ಜಯಘೊಷಗಳೊಂದಿಗೆ ಭಾನುವಾರ ನೆರವೇರಿತು. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯಪುರದ ಜ್ಞಾನಯೋಗಾಶ್ರಮದ ಸಂಗಮೇಶ್ವರ ದೇವರು ಸಮ್ಮುಖ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts