More

    ಅಂಬೇಡ್ಕರ್ ಜೀವನ ಓದಿಕೊಂಡವರು ಕಾಂಗ್ರೆಸ್ಸಿಗೆ ಮತ ಹಾಕುವುದಿಲ್ಲ: ಎನ್. ಮಹೇಶ

    ವಿಜಯವಾಣಿ ಸುದ್ದಿಜಾಲ ಗದಗ

    ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರಚಾರಾರ್ಥ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಶನಿವಾರ ಹಿಂದುಳಿದ ವರ್ಗಗಳ, ಎಸ್ಎಸ್ಟಿ ವರ್ಗಗಳ ಸ್ವಾಭಿಮಾನಿ  ಸಮಾವೇಶ ಜರಗಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎನ್.‌ಮಹೇಶ ಅವರು ಬುದ್ದ ಬಸವ ಅಂಬೇಡ್ಕರ್ ಅವರ ಸಂದೇಶಗಳನ್ನು ಸಾರುತ್ತಿರುವ ಅನಿಲ್ ಮೆಣಸಿನಕಾಯಿ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಂಬೇಡ್ಕರ್ ಅವರನ್ನು ಪೂಜಿಸದೇ ಅವರ ಜೀವನವನ್ನು ಓದಿಕೊಂಡರೆ ಅವರ ಆದರ್ಶಗಳನ್ನು ಅಳಲವಡಿಸಿಕೊಳ್ಳಬಹುದು. ಕಾಂಗ್ರೆಸ್ ಪಕ್ಷದಿಂದ ಅಂಬೇಡ್ಕರ್ ಅವರಿಗೆ ಅಪಮಾನ ಮತ್ತು ಅನ್ಯಾಯ ಆಗಿದೆ. ಅವರ ಹುಸಿ ಭರವಸೆಗಳನ್ನು ನಂಬಿ ದಲಿತ ಸಮುದಾಯಗಳು ಅಭಿವೃದ್ಧಿ ಕುಂಠಿತವಾಗಿದೆ. ಬಿಜೆಪಿ ಪಕ್ಷವೇ ನಿಜವಾದ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸುತ್ತಿದೆ. ಅದಕ್ಕಾಗಿ ಬಿಜೆಪಿಗೆ ಮತ ನೀಡಬೇಕು ಎಂದರು.

    ಎಸ್ಸಿ ಎಸ್ಟಿ ಹಾಗೂ ಹಿಂದುಳಿದ ವರ್ಗದವರು ಬಿಜೆಪಿಗೆ ಮತ ಹಾಕಬೇಕು. ಕಾಂಗ್ರೆಸ್‌ ಗೆ ಮತ ನೀಡಿದರೆ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಂತೆ. ಅಂಬೇಡ್ಕರ್ ಅವರ ಶವ ಸಂಸ್ಕಾರ ಕ್ಕೆ ಕಾಂಗ್ರೆಸ್ ನವರು ಜಾಗಾ ಕೊಡಲಿಲ್ಲ ಎಂಬುದು ನೋವಿನ ಸಂಗತಿ ಎಂದರು.

     *ಕುರುಬರು ಬಿಜೆಪಿಯನ್ನು ಬೆಂಬಲಿಸುತ್ತಾರೆ:* 

    ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ  ಅವರು ಮಾತನಾಡಿ, ಪ್ರದಾನಿ ಮೋದಿ ಅವರು ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆ. ವಸುದೇವ ಕುಟುಂಬ ಈ ವಿಶ್ವಕ್ಕೆ  ಪರಿಚಯಿಸಿದ್ದಾರೆ.  ಜಗತ್ತಿನ ಪ್ರತಿಯೊಂದು ದೇಶದಲ್ಲಿ ಯೋಗಭ್ಯಾಸ ನಡೆಯುತ್ತಿದೆ.

    ಕುರುಬರು ಬರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾರೆ ಎನ್ನುವದು ತಪ್ಪು. ಕುರುಬರ ಮೀಸಲಾತಿ ಕುರಿತು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಬಸವರಾಜ ಬೊಮ್ಮಾಯಿ ಅವರು ಕಳುಹಿಸಿ ಐತಿಹಾಸಿಕ ನಿರ್ಣಯ ಕೈಗೊಂಡರು. ಕೇಂದ್ರದಲ್ಲೂ ಮೀಸಲಾತಿ ಜಾರಿಗೊಳಿಸಲು ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.

    ಅನಿಲ ಮೆಣಸಿನಕಾಯಿ ಮಾತನಾಡಿ, ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ತಿರಸ್ಕಾರ ಮಾಡಿ, ನರೇಂದ್ರ ಮೋದಿ ಅವರ ಕೈ ಬಲಪಡೆಸಬೇಕಾಗಿದೆ. ಕಾಂಗ್ರೆಸ್ ಪಕ್ಷ  ಅಂಬೇಡ್ಕರ್  ದ್ಯೇಯೋದ್ದೇಶಗಳನ್ನು ದಿಕ್ಕರಿಸಿ, ದಲಿತರಿಗೆ ಹಿಂದುಳಿದ ವರ್ಗದವರನ್ನು ಬರಿ ಮತ ಬ್ಯಾಂಕ್ ಗಾಗಿ ಬಳಸಿಕೊಂಡಿದ್ದಾರೆ. 

    ಗದುಗಿನ ಜನರ ಗ್ಯಾರಂಟಿ ಬಸವರಾಜ ಬೊಮ್ಮಾಯಿ ಅವರ ಗೆಲುವು ಆಗಿರಬೇಕು. ಅವರು ಗದುಗಿಗೆ ಕುಡಿಯುವ ನೀರು, ಯುವಕರಿಗೆ ಉದ್ಯೋಗ, ರೈತರ, ದಲಿತರು ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕು ಎಂದರು. 

    ಬಿಜೆಪಿ ಎಂದಿಗೂ ಮುಸ್ಲಿಂ ವಿರೋಧಿ ಅಲ್ಲ, ಕಾಶ್ಮೀರ ದಲ್ಲಿ ಇಂದು ಸಾಕಷ್ಟು ಅಭಿವೃದ್ಧಿ ಗೊಂಡು ಅಲ್ಪಸಂಖ್ಯಾತರು  ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ. ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಅನಿಲ ಮೆಣಸಿನಕಾಯಿ ಹೇಳಿದರು.

    ಮಾಜಿ ಶಾಸಕ ನೆ.ಲ ನರೇಂದ್ರಬಾಬು ಮಾತನಾಡಿ, ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಿದೆ.  ಈ ಧರ್ಮ ಯುದ್ದದಲ್ಲಿ ರಾಮ ಬೇಕಾ? ರಾವಣ ಬೇಕಾ?  ಎಂದು ಮತದಾರರು ನಿರ್ಧರಿಸಬೇಕಾಗಿದೆ.

    ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶಕ್ಕೆ ಅದ್ಭುತ ಶಕ್ತಿ ಬಂದಿದೆ. ದೇಶದ ಆರ್ಥಿಕ ಸ್ಥಿತಿ ಅಭಿವೃದ್ಧಿಯತ್ತ ನಡೆದಿದೆ ಎಂದರು.

    ಯುವ ಬಿನೆಪಿ ಮುಖಂಡ ಭರತ ಬೊಮ್ಮಾಯಿ ಅವರು ಮಾತನಾಡಿ, ಇದು ಭಾರತದ ಭವಿಷ್ಯದ ಚುನಾವಣೆ, ಅದು ಸುಭದ್ರವಾಗಬೇಕಾದರೆ ಸಂವಿದಾನ ಮುಖ್ಯವಾಗಿದೆ. ಅಂಬೇಡ್ಕರ್ ಅವರ ದಾರಿಯಲ್ಲಿ ಮೋದಿ ಅವರು ನಡೆಯುತ್ತಿದ್ದಾರೆ. ಪ್ರದಾನ ಮಂತ್ರಿ ಅವಾಸ ಯೋಜನೆ,  ಜಲಜೀವನ, ನಾರಿಶಕ್ತಿ  ಯೋಜನೆಗಳು ಜನಮನ ಮನ ಗೆದ್ದಿವೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಬೋಜರಾಜ ಕರೋದಿ, ಉಷಾ ದಾಸರ, ಕಾಂತಿಲಾಲ ಬನ್ಸಾಲಿ, ರವಿ ದಂಡಿನ, ಶೇಖರ ಸಜ್ಜನರ, ಮಂಜುನಾಥ ಕೋಟ್ನಿಕಲ್, ಮಂಜುನಾಥ ಮುಳಗುಂದ, ಅನಿಲ ಅಬ್ಬಿಗೇರಿ ಮಹೇಶ ದಾಸರ, ಪ್ರಶಾಂತ ನಾಯ್ಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts