More

    ಮತ ಚಲಾವಣೆ ಹೆಚ್ಚಿಸಲು ಬೂತ್ ನಲ್ಲಿ ಕಲೆಯ ಬಲೆ

    ಮುಂಡರಗಿ : ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮುಂಡರಗಿ ತಾಲೂಕಾ ಸ್ವೀಪ್ ಸಮಿತಿ ತಾಲೂಕಿನಾದ್ಯಂತ ಮತದಾನ ಪ್ರಮಾಣದ ಹೆಚ್ಚಳ ಗುರಿ ಹೊಂದಿದ್ದು, ಮತದಾರರನ್ನು ಹೆಚ್ಚು ಸೆಳೆಯುವ ದೃಷ್ಟಿಯಿಂದ ಡಂಬಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 232, 233ರಲ್ಲಿ ವಿಭಿನ್ನ ಕಲಾಕೃತಿಗಳನ್ನು ಚಿತ್ರಿಸಿ ಅಲಂಕರಿಸಲಾಗಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಂಬಳ ಗ್ರಾಮದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿತ್ತು. ಅದಕ್ಕಾಗಿ ಕಲಾಕೃತಿಗಳನ್ನು ಬಿಡಿಸುವ ಮೂಲಕ ಮತದಾನ ಪ್ರಮಾಣದ ಹೆಚ್ಚಳಕ್ಕೆ ಶ್ರಮಿಸಲಾಗುತ್ತಿದೆ.

    ನನ್ನ ಮತ ನನ್ನ ಆಯ್ಕೆ, ನಿಮ್ಮ ಮತ ನಿಮ್ಮ ಧ್ವನಿ ಎಂಬ ಘೋಷಣೆಗಳನ್ನು ಬರೆಯಿಸುವ ಮೂಲಕ ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿಗಳು ಜಾಗೃತಿ ಮೂಡಿಸುತ್ತಿವೆ.

    ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ಸಂಘಟಿಸುವುದು ದೊಡ್ಡ ಕೆಲಸವಾಗಿದೆ. ಮತದಾರರ ಜಾಗೃತಿಗಾಗಿ ಚುನಾವಣಾ ಆಯೋಗ ಹಲವು ಜಾಗೃತಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಈ ದಿಸೆಯಲ್ಲಿ ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿ ವಿಶಿಷ್ಟ ಯೋಚನೆ ಮೂಲಕ ಕಲೆ ಬಳಸಿಕೊಂಡಿರುವುದು ವಿಶೇಷವಾಗಿದೆ.

    ಕೋಟ್:

    ಮತದಾನ ಕಡಿಮೆಯಾದ ಪಟ್ಟಣದ ಮತದಾರರನ್ನು ಸೆಳೆಯಲು ಈಗಾಗಲೇ ಕಾಲ್ನಡಿಗೆ ಜಾಥಾ, ಮನೆ ಮನೆ ಭೇಟಿ, ಬೈಕ್ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಡಂಬಳದ ಎರಡು ಮತಗಟ್ಟೆಗಳಲ್ಲಿ ಚಿತ್ರಕಲೆ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.

    -ವಿಶ್ವನಾಥ ಹೊಸಮನಿ
    ಇಓ, ತಾಪಂ, ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts