More

    ಶಬರಿಮಲೆಯಲ್ಲಿ ಪ್ರಜ್ವಲಿಸಿದ ಮಕರಜ್ಯೋತಿ! ಮುಗಿಲುಮುಟ್ಟಿತು ಭಕ್ತರ ಹರ್ಷೋದ್ಘಾರ

    ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಭಕ್ತರು ಕಾತರದಿಂದ ಕಾಯುತ್ತಿದ್ದ ದಿವ್ಯ ಮಕರಜ್ಯೋತಿ ಗುರುವಾರ ಸಂಜೆ 6.45ಕ್ಕೆ ದರ್ಶನವಾಯಿತು.

    ಪೊನ್ನಂಬಲ ಬೆಟ್ಟದಲ್ಲಿ ಮೂರು ಬಾರಿ ಜ್ಯೋತಿ ಪ್ರಜ್ವಲಿಸುತ್ತಿದ್ದಂತೆ ಭಕ್ತರಿಂದ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷಣೆ ಮುಗಿಲುಮುಟ್ಟಿತ್ತು. ಮಕರ ಸಂಕ್ರಮಣ ಪೂಜಾ ಮಹೋತ್ಸವ ಸಂದರ್ಭ ಶ್ರೀದೇವರಿಗೆ ತೊಡಿಸಲಿರುವ ಚಿನ್ನಾಭರಣ(ತಿರುವಾಭರಣ) ಪಂದಳ ಅರಮನೆಯಿಂದ ಸಂಜೆ 4.30ಕ್ಕೆ ಮೆರವಣಿಗೆ ಮೂಲಕ ಶಬರಿಮಲೆಗೆ ಆಗಮಿಸಿದ್ದು, ದೇವರಿಗೆ ಪವಿತ್ರ ಆಭರಣ ತೊಡಿಸಿ ದೀಪಾರಾಧನೆ ನಡೆದ ತಕ್ಷಣ ದಿವ್ಯ ಮಕರಜ್ಯೋತಿ ದರ್ಶನವಾಗಿದೆ.

    ಶಬರಿಮಲೆಗೆ ಆಗಮಿಸಿದ ಪವಿತ್ರ ಆಭರಣವನ್ನು ತಂತ್ರಿ ಕಂಠರರ್​ ರಾಜೀವರ್​ ಹಾಗೂ ಮುಖ್ಯ ಅರ್ಚಕ ವಿ.ಕೆ ಜಯರಾಜ್​ ಪೋತ್ತಿ ಅವರು ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿದರು. ದೀಪಾರಾಧನೆ ನಡೆಯುತ್ತಿದ್ದಂತೆ ಗರ್ಭಗುಡಿಯ ಮೇಲ್ಭಾಗದಲ್ಲಿ ಗರುಡ ಪ್ರದಕ್ಷಿಣೆ ಹಾಕುತ್ತಿದ್ದ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು. ದೀಪಾರಾಧನೆ ನಂತರ ಮಕರಜ್ಯೋತಿ ಪ್ರಜ್ವಲಿಸಿತು. ಇದನ್ನೂ ಓದಿರಿ ಈ ಬಾರಿ ಗವಿಗಂಗಾಧರೇಶ್ವರ ಸ್ವಾಮಿಗಿಲ್ಲ ಸೂರ್ಯರಶ್ಮಿ! ಶಿವಲಿಂಗವನ್ನ ಸ್ಪರ್ಶಿಸದೆ ಪಥ ಬದಲಿಸಿದ ಭಾಸ್ಕರ

    ಕೋವಿಡ್​ ಕಟ್ಟುನಿಟ್ಟಿನ ನಿಯಂತ್ರಣದೊಂದಿಗೆ ಮಕರಜ್ಯೋತಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಶಬರಿಮಲೆಯಲ್ಲಿ 5 ಸಾವಿರ ಮಂದಿಗೆ ಮಾತ್ರ ಅವಕಾಶವಿತ್ತು. ಈ ಹಿಂದೆ ಮಕರಜ್ಯೋತಿ ವೀಸುತ್ತಿದ್ದ ವಿವಿಧ ಸ್ಥಳಗಳಲ್ಲಿ ಕೋವಿಡ್​ ಹಿನ್ನೆಲೆಯಲ್ಲಿ ಈ ಬಾರಿ ಅವಕಾಶ ನಿರಾಕರಿಸಲಾಗಿತ್ತು.

    ಸಾವಿರಾರು ಮಂದಿ ಪಾಲ್ಗೊಳ್ಳುತ್ತಿದ್ದ ತಿರುವಾಭರಣ ಮೆರವಣಿಗೆಯಲ್ಲಿ ಈ ಬಾರಿ ತಂಡದ ಸದಸ್ಯರು, ರಕ್ಷಣಾ ಕಾರ್ಯಕರ್ತರು ಮಾತ್ರ ಭಾಗವಹಿಸಿದ್ದು, ಭಕ್ತರ ಪಾಲ್ಗೊಳ್ಳುವಿಕೆಗೆ ಅವಕಾಶ ನಿರಾಕರಿಸಲಾಗಿತ್ತು. ಪಂದಳಂ ಸ್ರಾಂಬಿಕ್ಕಲ್​ ಅರಮನೆಯ ಸುರತ ಕೊಠಡಿಯಲ್ಲಿ ಇರಿಸಿದ್ದ ಚಿನ್ನಾಭರಣದ ಪೆಟ್ಟಿಗೆಯನ್ನು ಜ.12ರಂದು ಗುರುಸ್ವಾಮಿ ಕುಳತ್ತಿನಾಲ್​ ಗಂಗಾಧರನ್​ ಪಿಳ್ಳೆ ನೇತೃತ್ವದ 24 ಮಂದಿಯ ತಂಡ ಶಿರದಲ್ಲಿರಿಸಿ, ಪಾರಂಪರಿಕ ಕಾನನದ ಕಾಲ್ನಡಿಗೆ ಹಾದಿಯಲ್ಲಿ ಗುರುವಾರ ಶಬರಿಮಲೆ ತಲುಪಿತ್ತು.

    ಈ ಬಾರಿ ಗವಿಗಂಗಾಧರೇಶ್ವರ ಸ್ವಾಮಿಗಿಲ್ಲ ಸೂರ್ಯರಶ್ಮಿ! ಶಿವಲಿಂಗವನ್ನ ಸ್ಪರ್ಶಿಸದೆ ಪಥ ಬದಲಿಸಿದ ಭಾಸ್ಕರ

    ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

    ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts