More

    ಅಯ್ಯಪ್ಪ ಸ್ವಾಮಿ ಮಹಾಪೂಜೆ ಇಂದು

    ತಲ್ಲೂರ: ಗ್ರಾಮದ ದೇಸಾಯಿ ಕೋಟೆ ಆವರಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ 17ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಡಿ.31ರಂದು ಜರುಗಲಿದೆ. ಸಂಜೆ ಗ್ರಾಮದಲ್ಲಿ ಸಕಲ ವಾದ್ಯ ಮೇಳ ಮತ್ತು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಭವ್ಯ ಜ್ಯೋತಿ ಮೆರವಣಿಗೆ ಜರುಗಲಿದೆ.

    ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ತೊರಗಲ್ಲಮಠದ ದೀಪಕ ಸ್ವಾಮೀಜಿ ಸಾನ್ನಿದ್ಯ ವಹಿಸುವರು. ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಸವದತ್ತಿ ಯಲ್ಲಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಪುಂಡಲೀಕ ಮೇಟಿ, ಯರಗಟ್ಟಿ ಈರಣ್ಣ ಗುರುಸ್ವಾಮಿ ಪಾಲ್ಗೊಳ್ಳುವರು ಎಂದು ಮಲ್ಲಪ್ಪ ಗುರುಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಗುರ್ಲಾಪುರ ವರದಿ: ಗ್ರಾಮದಲ್ಲಿ ಜ.1ರಂದು ಅಯ್ಯಪ್ಪಸ್ವಾಮಿ 35ನೇ ಮಹಾಪೂಜೆ ಹಮ್ಮಿಕೊಳ್ಳಲಾಗಿದೆ. ಜ.1ರಂದು ಬೆಳಗ್ಗೆ 5 ಗಂಟೆಗೆ ಅಯ್ಯಪ್ಪ ಸ್ವಾಮಿ ಕಂಚಿನ ಮೂರ್ತಿಗೆ ತುಪ್ಪದ ಅಭಿಷೇಕ, 6 ಗಂಟೆಗೆ ಹೂವಿನ ಅಲಂಕಾರ, ಸಂಜೆ 4 ಗಂಟೆಗೆ ಗುರುಸ್ವಾಮಿ ಹಾಗೂ ಕನ್ಯಾಸ್ವಾಮಿಗಳ ಸಾರಥ್ಯದಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಅಯ್ಯಪ್ಪಸ್ವಾಮಿ ಪಲ್ಲಕ್ಕಿ ಉತ್ಸವವು ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ತೆರಳಿ ಹಿಂತಿರುಗುವುದು. ಸಂಜೆ 6.30 ಗಂಟೆಗೆ 18 ಮೆಟ್ಟಿಲುಗಳ ಪಡಿಪೂಜೆ, ಅಯ್ಯಪ್ಪ ಸ್ವಾಮಿಗೆ ಬೆಳ್ಳಿ ಅಲಂಕಾರದೊಂದಿಗೆ ಮಹಾಮಂಗಳಾರತಿ ಬಳಿಕ ಮಹಾಪ್ರಸಾದ ಜರುಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts