More

    ರೋಟರಿಯಿಂದ ಹೊಲಿಗೆ ಯಂತ್ರ ವಿತರಣೆ

    ಬೈಲಕುಪ್ಪೆ : ಪಿರಿಯಾಪಟ್ಟಣ ತಾಲೂಕು ರೋಟರಿ ಮಿಟ್ ಟೌನ್ ವತಿಯಿಂದ ತಿರುಮಲಪುರ ಗ್ರಾಮದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ಬುಧವಾರ ವಿತರಿಸಲಾಯಿತು.
    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಾಲೂಕು ರೋಟರಿ ಮಿಟ್ ಟೌನ್ ಅಧ್ಯಕ್ಷ ತಿರುಮಲಾಪುರದ ರಾಜೇಗೌಡ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.
    ಜಿಲ್ಲಾ ವಲಯ ಸಹಾಯಕ ಪ್ರಾಂತಪಾಲ ಸತ್ಯನಾರಾಯಣ ಮಾತನಾಡಿ, ಪಿರಿಯಾಪಟ್ಟಣ ತಾಲೂಕಿನ ವಿವಿಧ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಉಚಿತ ಸಮವಸ್ತ್ರ, ಅಂಗನವಾಡಿ ಕೊಠಡಿಗಳಿಗೆ ಪೇಂಟಿಂಗ್, ಮಕ್ಕಳಿಗೆ ಚೇರ್, ಟೇಬಲ್ ಮತ್ತು ಕಲಿಕಾ ಸಾಮಗ್ರಿ ಹಾಗೂ ಆರೋಗ್ಯ ಶಿಬಿರ ಸೇರಿದಂತೆ 15 ಲಕ್ಷ ರೂ.ಗಳಿಗೂ ಹೆಚ್ಚ ಹಣ ವೆಚ್ಚ ಮಾಡಿದ್ದು, ಮುಂದಿನ ದಿನಗಳಲ್ಲಿ ಅಶಕ್ತರ ಏಳಿಗೆಗಾಗಿ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ತಾಲೂಕು ರೋಟರಿ ಮಿಟ್ ಟನ್ ಪ್ರಧಾನ ಕಾರ್ಯದರ್ಶಿ ಐ.ಕೆ. ಹೆಗಡೆ, ಸದಸ್ಯರಾದ ಜಗನ್, ತಿಲಕ್, ಬೈಲಕುಪ್ಪೆ ಗ್ರಾಪಂ ಸದಸ್ಯ ರಾಜು, ಶಾಲೆಯ ಮುಖ್ಯ ಶಿಕ್ಷಕ ಮಂಜು, ಮುಖಂಡರಾದ ವೆಂಕಟೇಶ್, ಪರಮೇಶಗೌಡ, ಪ್ರತಾಪ್ ಗೌಡ, ರಂಜಿತಾ, ರೂಪಾ ಸೇರಿದಂತೆ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts