More

  ಅಪ್ರಾಪ್ತೆ ವಿವಾಹವಾಗಿದ್ದ ಆದಿವಾಸಿ ಯುವಕನ ಬಂಧನ

  ಎಚ್.ಡಿ.ಕೋಟೆ: ತಾಲೂಕಿನ ಬೂದನೂರು ಹಾಡಿಯಲ್ಲಿ ಅಪ್ರಾಪ್ತೆಯನ್ನು ವಿವಾಹವಾಗಿದ್ದ ಆದಿವಾಸಿ ಯುವಕನನ್ನು ಶನಿವಾರ ಪೋಲಿಸರು ಬಂಧಿಸಿದ್ದಾರೆ.

  ಹಾಡಿ ನಿವಾಸಿ ನಾಗೇಶ್ ಬಂಧಿತ ಯುವಕ. ಈತ ಗುಂಡ್ಲುಪೇಟೆ ತಾಲೂಕಿನ ಹಾಡಿಯೊಂದರ ಯುವತಿಯನ್ನು ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಇದೀಗ ಆಕೆ ಗರ್ಭಿಣಿಯಾಗಿದ್ದಳು.

  ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಪರೀಕ್ಷೆಗೆ ಕರೆತಂದ ಸಮಯದಲ್ಲಿ ಆಕೆಗೆ ಇನ್ನೂ 18 ವರ್ಷ ತುಂಬಿರದ ವಿಚಾರ ಹಾಗೂ ಚಿಕ್ಕ ವಯಸ್ಸಿಗೆ ಗರ್ಭಿಣಿಯಾಗಿರುವುದು ತಿಳಿದಿದೆ. ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಆಶಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  ಕೂಡಲೇ ಕಾರ್ಯಪ್ರವೃತ್ತರಾದ ಪೋಲಿಸರು ಹಾಡಿಗೆ ತೆರಳಿ ಇಬ್ಬರನ್ನೂ ಕರೆದುಕೊಂಡು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಬಳಿಕ ಯುವತಿಯನ್ನು ತಾಯಿಯ ಮನೆಗೆ ಕಳುಹಿಸಿ ಯುವಕನನ್ನು ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಫೋಕ್ಸೋದಡಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  See also  ತಂದೆ-ತಾಯಿ ಸೇವೆ ಮಾಡಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts