More

    ಮತದಾನಕ್ಕೂ ಮುನ್ನವೇ ಕೇರಳದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ: ಕೋರ್ಟ್​ ಮೆಟ್ಟಿಲೇರಿದ ಅಭ್ಯರ್ಥಿಗಳು!

    ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಮತದಾನಕ್ಕೂ ಮುನ್ನವೇ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಕೇರಳ ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿದ್ದು, ಎನ್​ಡಿಎ ಅಭ್ಯರ್ಥಿಗಳ ನಾಮಪತ್ರ ಚುನಾವಣಾ ಅಧಿಕಾರಿಗಳಿಂದ ತಿರಸ್ಕೃತಗೊಂಡಿದೆ.

    ಥಲಸ್ಸೆರಿ ಕ್ಷೇತ್ರ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಮತ್ತು ಕಣ್ಣೂರಿನ ಪಕ್ಷದ ಅಧ್ಯಕ್ಷ ಎನ್​ ಹರಿದಾಸ್​ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಹಿಯನ್ನು ಹೊಂದಿಲ್ಲ ಎಂಬ ಕಾರಣ ನೀಡಲಾಗಿದೆ.

    ಗುರುವಾಯೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಮಹಿಳಾ ಮೊರ್ಚಾದ ರಾಜ್ಯಾಧ್ಯಕ್ಷೆ ನಿವೇದಿತಾ ಸುಬ್ರಮಣಿಯಂ ನಾಮಪತ್ರವೂ ಸಹ ಈ ಮೇಲಿನ ಕಾರಣ ನೀಡಿಯೇ ತಿರಸ್ಕರಿಸಲಾಗಿದೆ.

    ಇದನ್ನೂ ಓದಿರಿ: ಪ್ರೀತಿಸಿ ಮದ್ವೆಯಾಗುವುದೇ ಈಕೆಯ ಕೆಲ್ಸ: 18 ಯುವಕರನ್ನು ವರಿಸಿದ ಸುಂದರಿಯ ಕತೆ ಕೇಳಿದ್ರೆ ದಂಗಾಗ್ತೀರಾ!

    ಇದನ್ನು ಹೊರತುಪಡಿಸಿದರೆ, ಇಡುಕ್ಕಿಯ ದೇವಿಕುಲಂ ಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿ ಧನಲಕ್ಷ್ಮಿ ನಾಮಪತ್ರವನ್ನು ಅಪೂರ್ಣ ಎಂಬ ಕಾರಣ ನೀಡಿ ತಿರಸ್ಕರಿಸಲಾಗಿದೆ. ಇಲ್ಲಿ ಎಐಎಡಿಎಂಕೆ ಅಭ್ಯರ್ಥಿಗೆ ಬಿಜೆಪಿ ಬೆಂಬಲ ನೀಡಿತ್ತು.

    ಏಪ್ರಿಲ್​ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಲ್ಲಿಸಲಾಗಿದ್ದ ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳು ತಿರಸ್ಕರಿಸದ ಕ್ರಮವನ್ನು ಪ್ರಶ್ನಿಸಿ ಭಾನುವಾರ ಕೇರಳ ಹೈಕೋರ್ಟ್​ ಮೆಟ್ಟಿಲೇರಿರುವ ಬಿಜೆಪಿ ಅಭ್ಯರ್ಥಿಗಳು ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಕೇಳಿದೆ.

    ನ್ಯಾಯಮೂರ್ತಿ ಎನ್.ನಾಗರೇಶ್ ಅವರು ಸೋಮವಾರ ಪ್ರತಿ-ಅಫಿಡವಿಟ್ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದು, ಹೆಚ್ಚಿನ ವಿಚಾರಣೆಗೆ ಅರ್ಜಿಗಳನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು. (ಏಜೆನ್ಸೀಸ್​)

    ಕಿಸ್​ ಕೇಳಿದ ಅಭಿಮಾನಿಗೆ ಜಾಹ್ನವಿ ಕಪೂರ್​ ಕೊಟ್ಟ ಖಡಕ್​ ಉತ್ತರ ಹೀಗಿದೆ..!

    ಶಾಕಿಂಗ್​ ನ್ಯೂಸ್​| ಕೂಲ್​ ಡ್ರಿಂಕ್ಸ್​ ಬಾಟಲ್​ ಒಳಗೆ ಹಾವಿನ ಮರಿ ಕಂಡು ಕಂಗಾಲಾದ ಗ್ರಾಹಕ..!

    ಮಾಲ್​ನಲ್ಲಿ ಬಟ್ಟೆ ಖರೀದಿಸಿ ಟ್ರಯಲ್​ ರೂಮ್​ಗೆ ಹೋಗಿ ಬರುವಷ್ಟರಲ್ಲಿ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts