More

    ಸೆಷನ್ಸ್​ ನ್ಯಾಯಾಲಯ ನ್ಯಾಯಾಧೀಶರ ವಿರುದ್ಧ ಅಸಹಜ ಲೈಂಗಿಕಕ್ರಿಯೆ ಆರೋಪ

    ನಾಗ್ಪುರ: ಇಲ್ಲಿನ ಸೆಷನ್ಸ್​ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಅವರ ಪತ್ನಿ ಅಸಹಜ ಲೈಂಗಿಕಕ್ರಿಯೆಗೆ ಆಗ್ರಹಿಸುತ್ತಿದ್ದ ಆರೋಪ ಮಾಡಿದ್ದಾರೆ. ಇದೀಗ ನ್ಯಾಯಾಧೀಶರಿಂದ ಪ್ರತ್ಯೇಕಗೊಂಡಿರುವ ಅವರ ಪತ್ನಿ ಈ ದೂರು ದಾಖಲಿಸಿದ್ದು, ತಮಗೆ ನ್ಯಾಯಾಧೀಶರ ಕುಟುಂಬದವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಇದನ್ನು ಆಧರಿಸಿ ಅಮ್ರಾವತಿಯ ವರೌಡ್​ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ಕೂಡ ದಾಖಲಾಗಿದೆ. ಇದೀಗ ಈ ಎಫ್​ಐಆರ್​ ಅನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಧೀಶರು ಬಾಂಬೆ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.

    ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಪತ್ನಿ ಜಲಗಾಂವ್​ನ ಮುಕ್ತಾಯಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಠಾಣಾ ವ್ಯಾಪ್ತಿಯ ಅವಶ್ಯಕತೆ ಇದೆ ಎಂಬ ಕಾರಣಕ್ಕೆ ಪ್ರಕರಣವನ್ನು ವರೌಡ್​ ಪೊಲೀಸ್​ ಠಾಣೆಗೆ ವರ್ಗಾಯಿಸಲಾಗಿತ್ತು. ಆ ಠಾಣೆಯಲ್ಲಿ ಈಗ ನ್ಯಾಯಾಧೀಶರು ಮತ್ತು ಅವರ ಕುಟುಂಬ ವರ್ಗದವರ ವಿರುದ್ಧ ವರದಕ್ಷಿಣೆ ಕಿರುಕುಳ (498ಎ), ಅಸಹಜ ಲೈಂಗಿಕಕ್ರಿಯೆ (377) ಸೇರಿ ಐಪಿಸಿ ವಿವಿಧ ದಂಡಸಂಹಿತೆಗಳ ಮೇರೆಗೆ ಎಫ್​ಐಆರ್​ ದಾಖಲಾಗಿದೆ.

    ತಮ್ಮನ್ನು ಅಸಹಜ ಲೈಂಗಿಕಕ್ರಿಯೆಗೆ ಸಹಕರಿಸುವಂತೆ ನ್ಯಾಯಾಧೀಶರು ಒತ್ತಾಯಿಸುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದರು. ಅಲ್ಲದೆ ನನ್ನ ನಗ್ನ ಚಿತ್ರಗಳನ್ನು ಮೊಬೈಲ್​ನಲ್ಲಿ ಸೆರೆಹಿಡಿದುಕೊಂಡು ಹೆಚ್ಚಿನ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ನ್ಯಾಯಾಧೀಶರ ಪತ್ನಿ ತಾವು ಕೊಟ್ಟಿರುವ ದೂರಿನಲ್ಲಿ ವಿವರಿಸಿದ್ದಾರೆ.

    ಇದನ್ನೂ ಓದಿ: ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್​-ವ್ಯಾಲ್ಯೂ ಲೆಕ್ಕಾಚಾರ…?

    ಸೆಷನ್ಸ್​ ನ್ಯಾಯಾಲಯದಿಂದ ಕುಟುಂಬದವರು ನಿರೀಕ್ಷಣಾ ಜಾಮೀನು ಪಡೆದುಕೊಂಡ ನಂತರದಲ್ಲಿ ಪ್ರತಿವಾರವೂ ಪೊಲೀಸ್​ ಠಾಣೆಗೆ ಹಾಜರಾತಿ ನೀಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ತಮ್ಮ ವಕೀಲ ಪರ್ವೇಜ್​ ಮಿಶ್ರಾ ಅವರ ಮೂಲಕ ಸೆಷನ್ಸ್​ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದೆ.

    ನ್ಯಾಯಾಧೀಶರ ಪತ್ನಿ ದೂರು ನೀಡಿ 13 ತಿಂಗಳ ಬಳಿಕ ಎಫ್​ಐಆರ್​ ದಾಖಲಿಸಲಾಗಿದೆ. ಇದರಿಂದಾಗಿ ಅವರ ವಿರುದ್ಧ ಅವರ ಪತ್ನಿ ಮಾಡುತ್ತಿರುವ ಆರೋಪಗಳ ಬಗ್ಗೆ ಸಾಕಷ್ಟು ಅನುಮಾನ ಮೂಡುತ್ತದೆ. ಕಳೆದ ವರ್ಷ ಇಬ್ಬರೂ ಒಪ್ಪಿಕೊಂಡು ವಿವಾಹವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವ ವಿಷಯವನ್ನು ಎಫ್​ಐಆರ್​ನಲ್ಲಿ ಪ್ರಸ್ತಾಪಸಿಲಾಗಿಲ್ಲ ಎಂದು ಬಾಂಬೆ ಹೈಕೋರ್ಟ್​ಗೆ ತಾವು ಸಲ್ಲಿಸಿರುವ ಮೇಲ್ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.

    ರಾಮಮಂದಿರ ಭೂಮಿ ಪೂಜೆಗಾಗಿ 151 ಪವಿತ್ರ ನದಿಗಳ ನೀರು ಸಂಗ್ರಹಿಸಿ, ಅಯೋಧ್ಯೆ ತಲುಪಿದ ಸಹೋದರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts